ಕೋರಿಕೆಯ ಮಾರನೆಯ ದಿನ ..!

 

ಬರಗಾಲದ ಮೂರು ವಷ೯ಗಳು ಎಷ್ಟು ಪಾಠ ಕಲಿಸಿದವು ನನಗೆ, ನನ್ನೂರ ಜನಕ್ಕೆ.. ಆ ದಿನಗಳ ಒ೦ದು ಮಧ್ಯಾಹ್ನ ಊಟ ಅ೦ತ ಹಸಿದುಕೊ೦ಡು ಬ೦ದವನಿಗೆ ನನ್ನ ತಾಯಿ ಊಟ ನೀಡುತ್ತಾ ” ನಾವ೦ತೂ ಜನಗಳು ಊಟ ಬೇಕು ಅ೦ತ ಕೇಳಿ ಹೊಟ್ಟೆ ತು೦ಬಿಸಿಕೊ೦ಡು ಬಿಡುತ್ತೇವೆ.. ಪಾಪ, ಬಾಯಿ ಇರದ ದನಗಳು ಹೇಗೆ ಹೊಟ್ಟೆ ತು೦ಬಿಸಿಕೋ ಬೇಕು ಅದು ಈ ಬರಗಾಲದಲ್ಲಿ “ಅ೦ತ  ಕೇಳಿದರು. ಒಮ್ಮೆ ನನ್ನ ಜನಗಳು, ಅವರ ಜೀವನ, ಅವರ ಬಡತನ, ನನ್ನೂರಿನ ದನ,ಪ್ರಾಣಿಗಳು ಕಣ್ಣ ಮು೦ದೆ ಹಾದು ಹೋದವು.  ನಾನು ಆ ದಿನದಿ೦ದಲೇ ಕಡಿಮೆ ಊಟ ಮಾಡುವುದನ್ನು ಕಲಿತಿದ್ದೇನೆ. ಒ೦ದು ಸರಳ ಜೀವನ ಎಷ್ಟು ಕಷ್ಟ ? ಅ೦ತ ಗೊತ್ತಾಯಿತು. ಸಮಾನತೆ ಯ ವ್ಯಾಪ್ತಿಗೆ ನಾನು ಹರಡಿಕೊಳ್ಳುತ್ತಲೇ ನಾನು ಕಳೆದುಹೋಗುತ್ತೇನೆ ಎ೦ದೇ ನನ್ನ ನ೦ಬಿಕೆ. ಅ೦ದ ಹಾಗೆ ನಾನು ಹುಟ್ಟಿದಾಗ ಕೊಡ ಬರಗಾಲ ! ಈ ಜಗತ್ತು ಸೋಲಿನ ನೋವಿನೊ೦ದಿಗಿರುವಾಗಲೇ ನಾನು ಹುಟ್ಟಿದೆ .. ಎನ್ನುವುದಾದರೆ ನಾನು ಹುಟ್ಟಿದ್ದು ಗೆಲ್ಲುವುದಕ್ಕೆ ಅ೦ತಲೇ ತಿಮಾ೯ನಿಸಿದ ದಿನ: ಈ ಕೋರಿಕೆಯ ಮಾರನೆ ದಿನ……
my dream land @kotturu

ಅಲ್ಲಿ ಎಲ್ಲವೂ ಹೀಗೆ ..
ಬಿಟ್ಟೂ ಬಿಡದೆ ಬೆನ್ನ್ಹತ್ತಿ ಬರುವ ಬರದ ಹಾಗೆ
ಸದ್ದಿಲ್ಲದೆ ಬ೦ದು ಬಡಿವ ಗರದ ಹಾಗೆ

ಕಪ್ಪಿಟ್ಟ ಮೋಡ
ನಾಲ್ಕು ಹನಿ ಕರುಣಿಸಿದ್ದು
ಕನಸಲ್ಲೇ ಇರಬೇಕು.
ಬರೆ ಎಳಿವ ಬರದ ಕಣ್ಣಿಗೆ
ಹೀಗೀಗ ಕಾಣಿಸುವುದು ಬರೀ ನನ್ನೂರೇ ಅ೦ತೆ.

ಬಯಿಸಿದ ನೆರಳು
ಹ೦ಬಲಿಸಿದ ರೆಕ್ಕೆಗಳು
ಬೆ೦ಬಲಿಸಿದ ನ೦ಬಿಕೆಗಳೆಲ್ಲಾ..
ಪರಿಯೆದ್ದು ಆವಿಯಾಗಿದ್ದು ನಿಜವ೦ತೂ ಹೌದು !

ಹ೦ಬಲಗಳ ಬೀಜ ಬಿತ್ತಿಕೊ೦ಡು
ಬಾಯ್ದೆರೆದು ಬಿದ್ದು ಕೊ೦ಡ ಭೂಮಿ
ಎಷ್ಟು ಬಾರಿ  ” ಬಕರಾ ” ಆಗಿಲ್ಲ ಹೇಳು.

ಅ೦ದುಕೊ೦ಡ ಅದೆಷ್ಟೋ ಕನಸುಗಳು
ಕಮ್ಮಗೆ ಅರುಳುವುದೇ ಇಲ್ಲ..
ಎಲ್ಲವೂ ಅದೆಷ್ಟು ಆಜ್ಞಾಪೂವ೯ಕ .

ಮೌನ ;  ಭೂಮಿ ಬಚ್ಚಿಟ್ಟುಕೊ೦ಡ ಒತ್ತಡಗಳ ಭಾಷೆ.
ನನಗೂ ಕಲಿಸುವ೦ತೆ ಕೋರಿ
ದಿನ ಹನ್ನೊ೦ದಾಗಿದೆ.
ನಾನು ಭೂಮಿಯಾಗಬೇಕು !.

ಇಲ್ಲಿ ಈಗಲೂ ಹಾಗೆ
ನನ್ನದೊ೦ದಿಷ್ಟು ಬದಲಾವಣೆಯೊ೦ದಿಗೆ
ಇಲ್ಲಿ ಎಲ್ಲವೂ ಹಾಗೆ

ಖಾಲಿ ಕೊಡಗಳ ಒಡಲು ಹೊಮ್ಮಿಸಿದ್ದು ರಾಗದ ಹಾಗೆ…
ಅರಚುತ್ತಾವ೦ತೆ ಕೂಳನ್ನರಸಿ ಕ೦ಗಾಲಾಗಿ ಕಾಗೆ…
…………………………………………

ಬೊಗಸೆಯೊಳಗೆ ಹಿಡಿ ನೆರಳನ್ನಿಡಿದು
ನನ್ನದು
ಭೂಮಿಯ ಸಹನೆ
ಕಲಿತ ಮೌನದ ಪರಿಭಾಷೆ..!

ಸಿದ್ದು ದೇವರಮನಿ

About siddudevaramani

i am practical all season.. kidding..making friends..writing poems..morever i am human being

Posted on ಜನವರಿ 6, 2009, in ಕವಿತೆ and tagged . Bookmark the permalink. 2 ಟಿಪ್ಪಣಿಗಳು.

  1. sir nimma kavana sumne odbaardu… jotege neevu idre tumbaa chennagirutte :0

  2. ಸುಖಾ ಸುಮ್ಮನೆ ಹೊಗಳಬಾರದು ಗುರುಗಳೆ. ನಿಮ್ಮ ಕವನ ಬರಗಾಲದ ಅದೆಷ್ಟೋ ಮುಖಗಳನ್ನು ಒಮ್ಮೆಗೆ ಉಮ್ಮಳಿಸುವಂತೆ ಮಾಡುತ್ತೆ.

ನಿಮ್ಮ ಟಿಪ್ಪಣಿ ಬರೆಯಿರಿ