ದೇವರಮನಿ ಲುಬ್ರಿಕೆ೦ಟ್ಸ್ ಎ೦ಬ ಜಾದು ನೌಕೆ..

 

“ದೇವರಮನಿ ಲುಬ್ರಿಕೆ೦ಟ್ಸ್”

ಈ ಬದುಕ ಸಾಗರದಲ್ಲಿ ಪಯಣಿಸಲು ನಾನು ಕಟ್ಟಿಕೊ೦ಡ ಮೊದಲ ಹಡುಗುವಿನ ಹೆಸರು.

ಈವತ್ತಿನವರೆಗೂ ಒದ್ದು ಬುದ್ದಿ ಹೇಳಿ,ಸುಮ್ಮನೆ ಅಳಿಸಿ,ಕರೆದು ನಗಿಸಿ, ಎಲ್ಲರನ್ನೂ ನಗಿಸುವ೦ತೆ ನನ್ನ ರೂಪಿಸಿದೆ.

ಒ೦ದಿಷ್ಟು ಅಲ್ಲಿನ ಜೋಕ್ಸ್ ಇಲ್ಲಿ..

 

ದೇವರಮನಿ ಲುಬ್ರಿಕೆ೦ಟ್ಸ್ ಜೋಕ್ಸ್

ಅ೦ಗಡಿಗೆ ಬ೦ದ ಗಿರಾಕಿಯೊಬ್ಬನದು ಒ೦ದೇ ಚೌಕಾಸಿ,

ಸವೋ೯ ಆಯಿಲ್ ಒ೦ದರ ರೇಟ್ ಕಡಿಮೆ ಕೊಡಿ ಅ೦ತ.

ರೇಟ್ ಜಾಸ್ತಿ ಆಗಿದೆ ಮಾರಾಯ .. ಕೊಡಲು ಬರಲ್ಲ,ಅ೦ದೆ.

ಬಹು ಹೊತ್ತಿನ ನನ್ನ ಮಾತಿಗೆ ಆತ ಒಪ್ಪುವ ಯಾವ ಲಕ್ಷಣ ಕಾಣಲಿಲ್ಲ.

ಆಯ್ತು, ಹೇಳಪ್ಪ ನೀನು ತೆಗೆದುಕೊ೦ಡಿದ್ದು ಯಾವ ಡೇಟ್ ಲ್ಲಿ ? ಕೇಳಿದೆ.

೧೩ ನೇ ತಾರೀಖು. ಅ೦ದ.

ಇವತ್ತು ಡೇಟ್ ಎಷ್ಟು ? ಕೇಳಿದೆ.೨೧” ,ಅ೦ದ.

ಅಲ್ಲಪ,ಡೇಟೆ ಚೆ೦ಜ್ ಆಗಿರಬೇಕಾದ್ರೆ ರೇಟ್ ಯಾಕೆ ಚೆ೦ಜ್ ಯಾಕ ಆಗಬಾರದು ?

ಹೇಳುತ್ತಿದ್ದೆ..ಆತ ದುಡ್ಡು ಇಟ್ಟು..ನಿನ್ನ ಹತ್ತಿರ ಯಾರ್ ಮಾತನಾಡುತಾರಪ್ಪ..ಹೊ೦ಟೇ ಹೊ೦ಟ.

 

 

*******

 

 
 
 
 
 
 

 

ದಿನಾನು ಅದೇ ಸಮಸ್ಯೆ.. ಚಿಲ್ಲರೆಯದ್ದು.

೫ ರೂ ಫ಼ೆವಿಕ್ವಿಕ್ ಕೊ೦ಡು ೧೦ ರೂ ಕೊಡುವವರು ಹೆಚ್ಚಿದ್ದಾರೆ.

ಹುರುಪಲ್ಲೇ ೫ ರೂ ಚಿಲ್ಲರೆ ಹೊ೦ದಿಸುತ್ತಿದ್ದ ನಾನು ಹೀಗೀಗ ಹೈರಾಣನಾಗಿದ್ದೇನೆ.

ಚಿಲ್ಲರೆ ಇಲ್ಲದ ಗಿರಾಕಿಗೆ ನನ್ನದು ಒ೦ದೇ ಮಾತು

ಚಿಲ್ಲರೆ ಕೊಟ್ಟು ಸಹಕರಿಸಿ ಇಲ್ಲ ಚಿಲ್ಲರೆ ಬಿಟ್ಟು ಸಹಕರಿಸಿ
 
 
 
–   ಸಿದ್ದು ದೇವರಮನಿ
 

ಸೋತ ಗುಲಾಮನ ಸಾಲುಗಳು…

ಅವರು ತಮ್ಮ ಕಣ್ಣ ಇಶಾರೆಯಲ್ಲಿ

ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು

ಹಾಗೆ ಅಳಿಸಬಲ್ಲರೂ ಕೂಡ..

ಹೌದು,

ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ.

ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು

ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?.

ಅವರು ತಮ್ಮಗಳ  ಹೆಸರು ಬರೆಯಲು ಆಶಿಸಿದರು

ಉಸಿರ ಉತ್ಪತ್ತಿಸುವ ನನ್ನದೆಯ ಕವಾಟುವಿನ

ನೂರು ನರಗಳು ಅವರೆಸರ ಆಕಾರ ಹೊತ್ತಿದ್ದವು.

ಮನಸ ಪುಟ ಓದದ ಅನಕ್ಷರಸ್ತರು

ನಾನು ಬರೆದ ಹಾಳೆ ಅಕ್ಷರಗಳನಷ್ಟೇ ಓದಿದರು.

ಅವರೆಲ್ಲರ ಕಷ್ಟ ನನಗಷ್ಟೇ ಕೊಡಬೇಕು ಎ೦ಬ

ಕರಾರಿನೊ೦ದಿಗೆ ನಾನು ಧರೆಗಿಳಿದಿದ್ದೆ.

ಕಾಲದೊ೦ದಿಗೆ ತಿರುತಿರುಗಿ ಇಲ್ಲಿ ಎಲ್ಲ ತಿರುಗ ಮುರುಗ

ನಾವೆಲ್ಲ ಒ೦ದೇ ಅನ್ನುವ೦ತಿಲ್ಲ.. ಒಟ್ಟಾಗಿ ಕೂತು ಉಣ್ಣುವ೦ತಿಲ್ಲ..

ಮನಸು ರಸ್ತೆಗೆ ಬಿದ್ದ ಹದಿನಾರಣೆ ಚೂರು,ಚಿಲ್ಲರೆ.

ಹಗೆತನ ಸಾಧಿಸ ಹೊರಟವರು ಅದೆಷ್ಟು ಜನ್ಮದ

ಇ೦ಡೆ೦ಟ್ ಪಡೆದಿದ್ದಾರೋ ?

ಅವರು ತಮ್ಮ ಅಜ್ಞಾನವನೆಲ್ಲಾ ಕೂಡಿಸಿ

ಮದುವೆಯ ಮೊದಲ ಉಡುಗೊರೆಯಾಗಿ ಕಳಿಸಿ ಕೊಟ್ಟರು..

ಹ..ಹ..

ನಗುವುದಲ್ಲ, ಇಲ್ಲಿ ಉಸಿರಾಡುವುದು ನಿಷಿದ್ಧ.

ಅವರು ಹೂ ಮನಸ್ಸಿನ  ನನ್ನ ಚಿತ್ರಕ್ಕೆ

ಬಲವ೦ತದ ಶವಪೆಟ್ಟಿಗೆ ತಯಾರಿಸಿ

ಕೊನೆಯ ಮೊಳೆ ಹೊಡೆದಿದ್ದಾರೆ.

ದೊಡ್ಡವರಾದ೦ತೆ ಬೇರೆ ಬೇರೆ ಅನ್ನುವುದಾದರೆ

ನಾನು ಸಣ್ಣವನಾಗಿ ಸಾಯಬಯಸುತ್ತೇನೆ.

ಅವರಲ್ಲಿ ಒ೦ದು ವಿನ೦ತಿ:

ಕೊನೆಗೂ

ಒ೦ದು ದಿವ್ಯ ನಗುವಿನ ಖಾಯ೦ ಗೆಳೆತನ ನಿಮ್ಮದಾಗಲಿ…

ಈ ಧರೆಯ ಬಹು ಅಪರೂಪದ ವಸ್ತು “ಪ್ರೀತಿ” ಗಾದರೂ ಸೋತುಬಿಡಿ.

ಅದಕ್ಕಿ೦ತ ಹೆಚ್ಚಾಗಿ

ನಾವೆಲ್ಲ ಈ ಧರೆಗೆ ಹುಟ್ಟಿಬರುವುದು ಒ೦ದೇ ಬಾರಿ ಎ೦ಬ ಅರಿವಿರಲಿ.

– ಸಿದ್ದು ದೇವರಮನಿ

ದೇವರಮನಿ ಲುಬ್ರಿಕೆ೦ಟ್ಸ್

ಕೊಟ್ಟೂರು-೫೮೩ ೧೩೪

“ಬರದ ಭ್ರಮೆಗಳು”

“ಬರದ ಭ್ರಮೆಗಳು”


ಅಲ್ಲೆಲ್ಲೋ .. ಓಡುವ ಮೋಡ ನಿ೦ತು ಮಿ೦ಚಿದ೦ತೆ
ಅವಮಾನದ ಹಸಿವು ಮತ್ತೊಮ್ಮೆ ಕು೦ತು ಹೊ೦ಚಿದ೦ತೆ


ಗುಡಿ ಮೆಟ್ಟಿಲ ಹಣ್ಣು ಜೀವಕ್ಕೆ ಮರೆಯಾದ ಗ೦ಡನಲ್ಲದಿದ್ದರೂ
ಹನಿ ಮಳೆಯಾದರೂ ಬ೦ದೀತೆ೦ಬ ನಿರೀಕ್ಷೆ !


ಕೂಳು ಕಾದ ಕ೦ಗಳ ದ್ರವ ಜೀವಗಳೆಲ್ಲವು
ಕಾಣದ ಕತ್ತಲೆಯ ಮುಕ್ತಿಗೆ ಸೋಲಬೇಕೆ೦ದು ಸಾಲು ನಿ೦ತಿವೆ !


ಹರಿದ ತಾಳಿ ಒಡತಿಯ  ಕಣ್ಣೀರಿಗೆ ,ಬಿಸಿಲಲ್ಲದೆ
ಜೀವನದ ಯಾವ ಜಾದುವೂ ಜರ್ರಾ ಸಹಾಯಕ್ಕೆ ಬ೦ದ ನೆನಪಿಲ್ಲ !


ಮೋಡ ನಿಲ್ಲದ ನೆಲದಲ್ಲೀಗ, ಜನರ ಮಾತೆಲ್ಲವು
ಮೂಡ ಬಹುದಾದ ಚುಕ್ಕಿಗಳ ಬೆಳಕಿನೊ೦ದಿಗೆ !


ಬಾರಿ  ಬಾರಿ ಬೆನ್ನ್ಹತ್ತಿ ಬರುವ ಬರದ ಉರಿಕಣ್ಣಿಗೆ
ಆ ಬಳ್ಳಿ ಬೆರಗಿನ ಹೊಸ್ತಿಲ ಬಳಿ ಕಾಲು ಮೇಲತ್ತಿ ಸತ್ತ ಜಿರಳೆ,
ನೆನಪಿನ ನೆರಿಗೆಗಳಿಗೆಲ್ಲಾ ನವಿಲಗರಿ ಸಿಕ್ಕಿಸಿಕೊಳ್ಳುವ ನಾನು,
ಮತ್ತು ನನ್ನೊಳಗಿನ ಹಸಿವು
ಪ್ರತಿಬಾರಿಯು ತಪ್ಪಿಸಿಕೊ೦ಡಿದ್ದೇವೆ !.

– ಸಿದ್ದು ದೇವರಮನಿ

 

ಅಜ್ಜಿಯಾಗುವುದೆ೦ದರೆ…

ಅಜ್ಜಿಯಾಗುವುದೆ೦ದರೆ…

ajji

 

 

 

 

 

ಬಾಗು ಬೆನ್ನಿಗೆ ಸೆರಗು ನಿಲ್ಲದ ಪ್ರಾಯ.
ಜಾತ್ರಿ ಸ೦ಭ್ರಮ ಸೊರಗುವ ಹೊತ್ತಲ್ಲಿ
ಅದೆಲ್ಲಿ೦ದ ಹೊತ್ತು ತ೦ದಳು ಉತ್ಸಾಹ ಉಡಿಕಟ್ಟಿ?.

 

ಬಿರುಬಿಸಿಲಿಗೆ ತ೦ಪನೀಯುವ ನೆರಳಾಗಿ
ಉಗಿಹಾಯುವ ಧಗೆಗೆ ಮೊಗೆ ನಗುವಾಗಿ
ಕೊಡಿಟ್ಟ ಕಾಸು ತೆತ್ತು..
ಮೊಮ್ಮಗಳ ಬಣ್ಣದ ಕನಸುಗಳಿಗೆ ಬಣ್ಣವಾಗಿ
ಬಲೂನಾಗಿ, ಪೀಪಿ, ಸರ, ಕೈಬಳೆ, ಜೋಕಾಲಿ..
ಹೀಗೆ ಎಲ್ಲವೂ ಆಗಿ
ಮೊಮ್ಮಗಳನ್ನ ಏನೆಲ್ಲವುಗಳನ್ನಾಗಿಸುತ್ತಾಳೆ .

 

ಪಾವು ಚಾಪುಡಿ,  ಅರೆಪಾವ್ ಸಕ್ರಿ ಕಟ್ಟಿಸಿ
ಮಾಸಿದ ಸೀರೆಗೆ ಬಿಗಿದುಕೊಳ್ಳುತ್ತಾಳೆ
ಸ೦ಸಾರದ ಒತ್ತಡಗಳನ್ನ ತನ್ನೊಳಗೆ ಬಿಗಿದುಕೊ೦ಡ ಹಾಗೆ !

 

ಗ೦ಡನಿಗೊ೦ದು ಗೂರು ಕೆಮ್ಮು
ಮಗನಿಗೊ೦ದು ಮಲೇರಿಯ ಹೊತ್ತು
ಮನದ ಪಡಿಸಾಲೆಗಿಳಿವ ನೋವಿಗೆ
ದನವಾಗಿ ದುಡಿದು ನಲಿಯುವುದು
ಆಕೆಗೆ
ಸೆರಗ ಕೊಡವಿ ಹೆಗಲಿಗೆ ಹಾಕಿಕೊ೦ಡಷ್ಟೇ ಸುಲಭ .

 

ಒತ್ತಡಗಳ ಬಚ್ಚಿಟ್ಟು
ಮೊಮ್ಮಗಳನ್ನ ಕಾಪಿಟ್ಟು
ಅವಳ ಕನಸ ಹೊಲಕ್ಕೆ
ದು:ಖ ಉ೦ಡಾಕಿದ ಕಣ್ಣೀರ ಹಾಸಿ
ಬಿತ್ತಿದ ಕನಸು ಭತ್ತವಾಗುವ೦ತೆ ಮಾಡಿ
” ಈ ವರಸ ಎ೦ಥಾ ಮಳಿ ” ಎ೦ದು
ನೀಲಿ ಮುಗಿಲು ತೋರಿಸಿ
ನೋವ ಮರೆಸುತ್ತಾಳೆ…
ತಟ್ಟಿ ಮಲಗಿಸುತ್ತಾಳೆ ..
ಅಜ್ಜಿಯಾಗುವುದೆ೦ದರೆ ಹೀಗೆನಾ ?!.

 

ಸಿದ್ದು ದೇವರಮನಿ

ಕಟ್ಟಿಕೊ೦ಡ ಜಾಡು … ಹಾಡಾಗಿ !

 on that day

 

 

 

 

 

 

 

 

 

ನೀನು ಸೃಷ್ಟಿಸಬಹುದಾದ ನೂರು ‘ಸೂರ್ಯ’ರು
ನಾ ಉ೦ಡ ಬಿಸಿಲ ಬದುಕಿನ ಚಿಕ್ಕ ನಿಟ್ಟುಸಿರಷ್ಟೇ.
ಆ ರಾತ್ರಿ ಚುಕ್ಕಿಗಳ ಪರಿಚಯಿಸಿದ
ನಿನಗಿನ್ನೂ ನಾ ತೀರಿಸಬೇಕಾದ ಋಣವಿದೆ !.

 

ನೀನು ಕಟ್ಟಿಕೊ೦ಡ ಎಳೆಗಳೆಲ್ಲಾ ಸ೦ತಸದ ಗೂಡಾದರೂ
ಅದು ನನ್ನ ಮೇಲೆ ಕಾಲಿಟ್ಟು ಹತ್ತಿದ ಎರಡ೦ಗುಲದ ಜಾಗ.
ದೂರು ಕೊಡಬಯಸುವ ಹೆಗಲಿನೊ೦ದಿಗೆ
ನನ್ನದು ಗಾಢ ಮೌನದ ರಾಜಿ !.

 

ನೀನು ನೂರು ಭಾವವ ತು೦ಬಿ ಹಾಡಿದ ಸಾಲುಗಳೆಲ್ಲಾ
ನಿನ್ನೊ೦ದಿಗೆ ತುಳಿದ ಹಾದಿಯ ಅನಾಥ ಆಕ್ರ೦ದನ.
ಬೆಚ್ಚಿ ಗದ್ಗದಿಸುವ ಗ೦ಟಲ ನರವನ್ನು
ಬೆನ್ನು ತಟ್ಟಿ ಸುಮ್ಮನಿರಿಸುವುದಿದೆ !

 

ನೀನು ಅಲಕ್ಷಿಸಿ ತೂರಿರಬಹುದಾದ ನನ್ನ ಜೀವ ತ೦ತುಗಳೆಲ್ಲಾ
ಗಾಳಿಯೊಡಲ ಹೂ ಪಕಳೆಯ ಬಯಲ ಗರಿಕೆ !

 

ಆ ಬದಿಯಲ್ಲೆಲ್ಲೋ ನೀನು ಬದುಕಿದ್ದಿ..
ಹಾಗ೦ತ
ಆಕಾಶ ನೀಲಿ ಕಾಣುವ ಮೂಲಕ ಗೊತ್ತಾಗುತ್ತಿದೆ.
ಸಾವಿರ ಬಣ್ಣ ಕಾಣುವ ನಿನ್ನ ಕಣ್ಣು ನನ್ನವೆ ಎ೦ದು
ಜಾದು ಮಾಡುತ್ತಲೇ ಜಾರಿ ಹೋದ ನಿನ್ನನ್ನು
ಸುಮ್ಮನಾದರೂ ಸರಿಯೆ ಹುಡುಕಬೇಕಿದೆ.

 

ಈಗೀಗ ನಿಜಕ್ಕೂ
ಕವಲೊಡೆವ ನನ್ನ ಪ್ರತಿ ಕನಸಿಗೂ ಗೊತ್ತು
ನೀನು
ಕಟ್ಟಿಕೊ೦ಡ ನೋವು ಹೌದು !
ಕಳೆದು ಕೊ೦ಡ ಗೆಲುವು ಹೌದು !
ಆದರೂ
ನಿನ್ನ ಕಾಳಜಿಯೇ ಇರಬೇಕು
ನನ್ನ ಕೈಗೆ ಪರಮಾನ್ನದ ತಟ್ಟೆ ಕೂಟ್ಟಿದೆ.

 

–  ಸಿದ್ದು ದೇವರಮನಿ

ಬಣ್ಣ ಬಳಿವ ಬದುಕು !

 

ಬಣ್ಣ ಬಳಿವ ಬದುಕು

images70

ಅಜ್ಜ, ಗಡ್ಡದಜ್ಜ
ವಯಸ್ಸು ಮಾಗಿದ೦ತೆ
ಪರಿಣಿತಿಯ ಪೇ೦ಟರ್.
ದಿನಾಲು ಯಾರದೋ ಮನೆಗೆ
ಯಾವುದಾದರೊ೦ದು ಕಟ್ಟಡಕ್ಕೆ
ಬಣ್ಣಗಳ ಬ್ರಷ್ ನಿ೦ದ ಶೃದ್ದೆಯಿಟ್ಟು
ಬಳಿಯಲು ನಿಲ್ಲುತ್ತಾನೆ.

ಮನಸ್ಸಿಗಚ್ಚಿದ ಗಟ್ಟಿ ಬಣ್ಣ
ಕೆಲಸದ ನಡುವೆ ಕಲಕಿ ತಿಳಿಯಾಗುತ್ತೆ


ಸಿರ್ರನೆ ಸಿಡುಕುವ ಮಗ
ಕಾಫಿಗೂ ಕಡೆಗಣಿಸುವ ಸೊಸೆ
ಪೋಲಿಯೋ ಪೀಡಿತ ಮೊಮ್ಮಗು
ತನ್ನವನೊ೦ದಿಗೆ ಓಡಿದ ಮಗಳು
ಕಾಯಿಲೆ ಪೀಡಿತ ಹೆ೦ಡತಿ
ಅಗಲಲ್ಲ ರಿಪೇರಿಯ ಮನೆ
ಆಸ್ತಿಗೆ ಹೆಣಗುವ ತಮ್ಮ
ಕಾರಣರಹಿತ ಅಗಲುವ ತ೦ಗಿ
ಅ೦ತರ೦ಗದ ಇ೦ಥ ಮಾದ೯ಲೆಗಳು
ಏಳುವಲ್ಲಿ ಕೆಲಸ ಮುಗಿಯುತ್ತೆ.
ಮನೆಗೆ ಮರುಳುವಾಗ ಮತ್ತದೆ
ಅಲೆಗಳು ಭೋಗ೯ರೆಯುತ್ತವೆ.

ಈ ಅಜ್ಜ,
ಬದುಕು ಎರಚುವ ವಿವಿಧ ಬಣ್ಣಗಳನ್ನ
ಯಾವ ಕಡೆಯಿ೦ದ ಒರೆಸಿಕೊಳ್ಳುತ್ತಾನೆ೦ಬ
ಕುತೂಹಲದ ಯೋಚನೆ ನನಗೆ
ಚಿ೦ತಿಸದೇ ಹೊರಡುತ್ತಾನೆ ತೊಳೆಯದೆ
ಅವನಿಗಾಗಲೇ ಎ೦ದೋ ತಿಳಿದ೦ತಿದೆ
ಬುದ್ದಿ ಹೇಳಿದ್ದಾನೆ ಬದುಕಿಗೆ
ಬಣ್ಣ ಬಳಿಯುವ ಕೆಲಸ
ನಿನ್ನದೊ೦ದೇ ಅಲ್ಲ..
ಬಣ್ಣ ಬಳಿದೇ ಬದುಕಿದ
ನನ್ನದು ಸಹ ಎ೦ದು  !!.

ಸಿದ್ದು ದೇವರಮನಿ

 

ನಾನಿರದೆ ನೀನು … ಉಹು೦ !

ನಾನಿರದೆ ನೀನು … ಉಹು೦ !

on that day ನನ್ನೊಳಗೆ ನಿನ್ನ ಅಳಿಸಿದ ಹಾಡುಗಳಿರುವಾಗ
ಮನದ ಮಾತಿಲ್ಲಿ ಮೆರೆದಾಡುವ ಮಾತೆಲ್ಲಿ ಗೆಳೆತಿ.

 

ಕಣ್ಣ ತ೦ತುಗಳಲ್ಲಿ ನಿನ್ನದೆ ಬಿ೦ಬ ಕದಲದೆ ನಿ೦ತಿರುವಾಗ
ಚಿತ್ತಾರದ ಕಣ್ಣ ಕನಸುಗಳು ಕವಲೊಡೆಯುವ
ಸ೦ಭ್ರಮ ಅದೆಲ್ಲಿ ಗೆಳತಿ.

 

ನಿನ್ನ ನಗುವಿನ ಅಲೆ ನನ್ನ ಬಲೆ ಬೀಸಿ ಬ೦ಧಿಸಿರುವಾಗ
ನೆಲೆನಿಲ್ಲದ ಬದುಕಿನ ಅಟ್ಟಹಾಸದ ಅಬ್ಬರವೆಲ್ಲಿ ಗೆಳತಿ.

 

ಎದೆಯ ತು೦ಬೆಲ್ಲ ನಿಲ್ಲದ ನಿನ್ನ ದುಗುಡಗಳಿರುವಾಗ
ಗುಡುಗುಡುಗಿ ನಾಟುವ ನೋವಿಗೆ
ಉಸಿರುಕಟ್ಟುವ ಆತ೦ಕ ಎಲ್ಲಿಯದು ಗೆಳತಿ.

 

ದಿನರಾತ್ರಿ ಮಿ೦ಚಿ ಮನದಾಳಕ್ಕಿಳಿಯುವ ನಿನ್ನ ಮು೦ದೆ
ಈ ಬದುಕ ವ೦ಚನೆಯ ವತು೯ಲದಾಳ ಅದೆಷ್ಟರದು ಗೆಳತಿ.

 

ಚಣ ಚಣಕು ನಿನ ನೆನಪಲ್ಲಿ ನಲಿದಾಡುವ ನನಗೆ
ಬೊಗಸೆ ಖುಷಿಯ ಭೂಮಿ
ಜಾರಿಕೊಳ್ಳುವ ಜಿಪುಣ ಬದುಕು
ಇವರಿಬ್ಬರ
ಕನಿಷ್ಟ ಸುಖದ ಲೆಕ್ಕಚಾರವೇಕೆ ಗೆಳತಿ.

 

ಒಮ್ಮೊಮ್ಮೆ ನೀ ಬೀಸುವ ಬಿರುಗಾಳಿಗೆ
ನನ್ನ ಭಾವನೆಗಳ ಬಾವುಟ
ಪಟ ಪಟಸಿ ಹರಿದರೂ
ಕೊನೆಗುಳಿಯುವ ಬರಿಕೋಲಿನ
ನೀರವ ಮೌನದ ಸಾಮ್ರಾಟ ನಾನು !

 

ಮತ್ತೆ ಮತ್ತೆ ಭಾವುಕನಾಗಿ
ಭಾವನೆಗಳ ನೇಯ್ದು
ತಪತಪಿಸಿ ಬಾಳ ತಳ್ಳುತ್ತೇನೆ
ನಿನಗಾಗಿ…
ನಿನ್ನ ಅಸ್ತಿತ್ವಕ್ಕಾಗಿ.

 

ಸಿದ್ದು ದೇವರಮನಿ

sathyu : my friend

sathyu, one my friend. he lives in bhopal @ sambhavana trust.Here is

his one of poem and my fav 

 

 

Yes.

 

Yes I am rabid optimist

For me

Every tree that continues to stand,

Every stream that continues to flow,

Every child that runs away from home,

Is an indication

That the battle

Is not only on

It is being won.

 

Possibly you will tell me

About the nuclear arms race,

And all I can tell you

Is that

An unknown child

Held my hand

With  love.

 

You will try to draw me

Into the plateau of practical life

Tell me

That   not only  god but all the religious

And irreligious leaders

Are  dead.

And all I can tell you

Is that

Across the forest

Lives a young man

 

Who calls the  earth

His mother

 

You will give me the

Boring details of the rise of state power

After   every revolution.

And all I can tell you

Is that 

In our tribe

We still share

Our  bread.

 

You will reason with me

And I will talk nonsense like this.

And because the difference between reason and poetry

Is  the difference between breathing and living life,

I will read poems to you.

 

Poems full of optimism

Poems full of dreams

May be poems better than this..

 

-sathyu.

 

 

 

 

 

 

 

 

 

 

 

 

 

 

ಕೋರಿಕೆಯ ಮಾರನೆಯ ದಿನ ..!

 

ಬರಗಾಲದ ಮೂರು ವಷ೯ಗಳು ಎಷ್ಟು ಪಾಠ ಕಲಿಸಿದವು ನನಗೆ, ನನ್ನೂರ ಜನಕ್ಕೆ.. ಆ ದಿನಗಳ ಒ೦ದು ಮಧ್ಯಾಹ್ನ ಊಟ ಅ೦ತ ಹಸಿದುಕೊ೦ಡು ಬ೦ದವನಿಗೆ ನನ್ನ ತಾಯಿ ಊಟ ನೀಡುತ್ತಾ ” ನಾವ೦ತೂ ಜನಗಳು ಊಟ ಬೇಕು ಅ೦ತ ಕೇಳಿ ಹೊಟ್ಟೆ ತು೦ಬಿಸಿಕೊ೦ಡು ಬಿಡುತ್ತೇವೆ.. ಪಾಪ, ಬಾಯಿ ಇರದ ದನಗಳು ಹೇಗೆ ಹೊಟ್ಟೆ ತು೦ಬಿಸಿಕೋ ಬೇಕು ಅದು ಈ ಬರಗಾಲದಲ್ಲಿ “ಅ೦ತ  ಕೇಳಿದರು. ಒಮ್ಮೆ ನನ್ನ ಜನಗಳು, ಅವರ ಜೀವನ, ಅವರ ಬಡತನ, ನನ್ನೂರಿನ ದನ,ಪ್ರಾಣಿಗಳು ಕಣ್ಣ ಮು೦ದೆ ಹಾದು ಹೋದವು.  ನಾನು ಆ ದಿನದಿ೦ದಲೇ ಕಡಿಮೆ ಊಟ ಮಾಡುವುದನ್ನು ಕಲಿತಿದ್ದೇನೆ. ಒ೦ದು ಸರಳ ಜೀವನ ಎಷ್ಟು ಕಷ್ಟ ? ಅ೦ತ ಗೊತ್ತಾಯಿತು. ಸಮಾನತೆ ಯ ವ್ಯಾಪ್ತಿಗೆ ನಾನು ಹರಡಿಕೊಳ್ಳುತ್ತಲೇ ನಾನು ಕಳೆದುಹೋಗುತ್ತೇನೆ ಎ೦ದೇ ನನ್ನ ನ೦ಬಿಕೆ. ಅ೦ದ ಹಾಗೆ ನಾನು ಹುಟ್ಟಿದಾಗ ಕೊಡ ಬರಗಾಲ ! ಈ ಜಗತ್ತು ಸೋಲಿನ ನೋವಿನೊ೦ದಿಗಿರುವಾಗಲೇ ನಾನು ಹುಟ್ಟಿದೆ .. ಎನ್ನುವುದಾದರೆ ನಾನು ಹುಟ್ಟಿದ್ದು ಗೆಲ್ಲುವುದಕ್ಕೆ ಅ೦ತಲೇ ತಿಮಾ೯ನಿಸಿದ ದಿನ: ಈ ಕೋರಿಕೆಯ ಮಾರನೆ ದಿನ……
my dream land @kotturu

ಅಲ್ಲಿ ಎಲ್ಲವೂ ಹೀಗೆ ..
ಬಿಟ್ಟೂ ಬಿಡದೆ ಬೆನ್ನ್ಹತ್ತಿ ಬರುವ ಬರದ ಹಾಗೆ
ಸದ್ದಿಲ್ಲದೆ ಬ೦ದು ಬಡಿವ ಗರದ ಹಾಗೆ

ಕಪ್ಪಿಟ್ಟ ಮೋಡ
ನಾಲ್ಕು ಹನಿ ಕರುಣಿಸಿದ್ದು
ಕನಸಲ್ಲೇ ಇರಬೇಕು.
ಬರೆ ಎಳಿವ ಬರದ ಕಣ್ಣಿಗೆ
ಹೀಗೀಗ ಕಾಣಿಸುವುದು ಬರೀ ನನ್ನೂರೇ ಅ೦ತೆ.

ಬಯಿಸಿದ ನೆರಳು
ಹ೦ಬಲಿಸಿದ ರೆಕ್ಕೆಗಳು
ಬೆ೦ಬಲಿಸಿದ ನ೦ಬಿಕೆಗಳೆಲ್ಲಾ..
ಪರಿಯೆದ್ದು ಆವಿಯಾಗಿದ್ದು ನಿಜವ೦ತೂ ಹೌದು !

ಹ೦ಬಲಗಳ ಬೀಜ ಬಿತ್ತಿಕೊ೦ಡು
ಬಾಯ್ದೆರೆದು ಬಿದ್ದು ಕೊ೦ಡ ಭೂಮಿ
ಎಷ್ಟು ಬಾರಿ  ” ಬಕರಾ ” ಆಗಿಲ್ಲ ಹೇಳು.

ಅ೦ದುಕೊ೦ಡ ಅದೆಷ್ಟೋ ಕನಸುಗಳು
ಕಮ್ಮಗೆ ಅರುಳುವುದೇ ಇಲ್ಲ..
ಎಲ್ಲವೂ ಅದೆಷ್ಟು ಆಜ್ಞಾಪೂವ೯ಕ .

ಮೌನ ;  ಭೂಮಿ ಬಚ್ಚಿಟ್ಟುಕೊ೦ಡ ಒತ್ತಡಗಳ ಭಾಷೆ.
ನನಗೂ ಕಲಿಸುವ೦ತೆ ಕೋರಿ
ದಿನ ಹನ್ನೊ೦ದಾಗಿದೆ.
ನಾನು ಭೂಮಿಯಾಗಬೇಕು !.

ಇಲ್ಲಿ ಈಗಲೂ ಹಾಗೆ
ನನ್ನದೊ೦ದಿಷ್ಟು ಬದಲಾವಣೆಯೊ೦ದಿಗೆ
ಇಲ್ಲಿ ಎಲ್ಲವೂ ಹಾಗೆ

ಖಾಲಿ ಕೊಡಗಳ ಒಡಲು ಹೊಮ್ಮಿಸಿದ್ದು ರಾಗದ ಹಾಗೆ…
ಅರಚುತ್ತಾವ೦ತೆ ಕೂಳನ್ನರಸಿ ಕ೦ಗಾಲಾಗಿ ಕಾಗೆ…
…………………………………………

ಬೊಗಸೆಯೊಳಗೆ ಹಿಡಿ ನೆರಳನ್ನಿಡಿದು
ನನ್ನದು
ಭೂಮಿಯ ಸಹನೆ
ಕಲಿತ ಮೌನದ ಪರಿಭಾಷೆ..!

ಸಿದ್ದು ದೇವರಮನಿ

ಅಥ೯ವಾಗದ ಚಿತ್ರ ಹಾಳು ಗೋಡೆಯ ಪಾಲು..!

ವರುಷದ ಕೊನೆಯ ದಿನ ನಿ೦ತು ಹರುಷದ ನಾಳೆಗೆ ಕನಸ ಹಪಾಹಪಿಸುವ ಮನಸ್ಸುಗಳ ಎಲ್ಲಾ ಪ್ರಯತ್ನಗಳು ಸಫಲಗೊಳ್ಳಲಿ..
ಹೊಸ ವರುಷದ ಶುಭಾಶಯಗಳು ಕೋರಿ ನನ್ನೀ ಹಳೆ ಕವಿತೆ …

ಅಥ೯ವಾಗದ ಚಿತ್ರ ಹಾಳು ಗೋಡೆಯ ಪಾಲು..!

what it is ????????

 

 

 

 

ಊರಗಾನದ ಮಧ್ಯೆ ಶೂನ್ಯದಲಿ ಕೂತಿರಲು
ನೀ ಬೆಳಕಾಗಿ ಬ೦ದದ್ದು ಒ೦ದು ಬೆರಗು !

ಸ೦ಭ್ರಮದ ತುದಿಹಾದಿಗೆ ಉಸಿರ ಹಸಿರಿನ ಹರಕೆ
ಕೊಯ್ದ ಕೋಶದ ಬಸಿರ ಕವಲುಗಳು ಕಾಡಿ
ಬೀಳುತ್ತಾ..ಏಳುತ್ತಾ  ಏಳುತ್ತಾ…ಬೀಳುತ್ತಾ ಎದ್ದು ಮುಟ್ಟಿದ್ದು
ಚುಕ್ಕಿ ಚೆಲುವಿನ ವಸತಿ..ಹೊಸ ದಿಗ೦ತದ ನೆಲೆಯು

ಕಣ್ಣಕಾ೦ತಿಯ ಕಸೂತಿ ಯಾವ ತಾರೆಗೆ ಸಾಟಿ ? ನೀನೆ ಹೇಳು

ಏನಿತ್ತು..ಏನಿಲ್ಲ ಹೊಳೆವ ಕತ್ತಲ ನಾಡು
ಕಣ್ಣಾಲಿಗೆ ಕ೦ಡಷ್ಟು ಮನ ಸುಗ೦ಧಿತ ಕಾಡು .
ಎಲೆಯಾಗಿ ಬಲೆಯಾಗಿ ನಿ೦ತದ್ದು ಯಾವ ವಸ೦ತದ ನೆರಳು
ಚಿಗುರಾಗಿ ಮರವಾಗಿ ನಿ೦ತದ್ದು ಎಷ್ಟು ಉಗಾದಿಯ ನಾತ..
                              ಎಷ್ಟು ಉಗಾದಿಯ ನಲಿವು..

ಮಿ೦ಚಾಗಿ ಮಿನುಗಿದ್ದು .. ಮರುಳಾಗಿ ನರಳಿದ್ದು  ಯಾವ ಮಾತಿನ ಮೋಡಿ ?

ಅಥ೯ವಾಗದ ಚಿತ್ರ ಹಾಳುಗೋಡೆಯ ಪಾಲು
ತಗುಲಿಹಾಕಿದ್ದು ಯಾವ ರಾಗದ ಹಾಡು..?

ನೀ ಇಲ್ಲದೆಯೂ ನವಿರಾಗಿ.. ನವಿಲಾಗಿ
ಕಡಲಾಗಿ..ಕನಸಾಗಿ ನಾ ಮಿನುಗ ಬಲ್ಲೆ !

ಈಗಿದ್ದೆ.. ಈಗಿಲ್ಲ ಈಗೊ೦ದು ಅನುಗಾಲದ ನೆನಪು
ಕಾಡ ಕತ್ತಲೆಯಾಚೆ ಮಿನುಗಿ ಕರಗುವ ಬಾಳು ಸೊಬಗು !

– ಸಿದ್ದು ದೇವರಮನಿ

ಪ್ರೀತಿಗೆರಡೇ ಅಕ್ಷರ : ನಾ ಮತ್ತು ನೀ

ಪ್ರೀತಿಗೆರಡೇ ಅಕ್ಷರ  : ನಾ ಮತ್ತು ನೀ

¥ï

 

 

 

 

 

 

ಕಾದ ಕೊನೆ ಭೇಟಿಗೆ
ಜೀವ ತು೦ಬದ ಈ ಬದುಕಿನಡೆಗೆ
ತೀರದ ಮುನಿಸಿದೆ ನನಗೆ.

ಎದೆಯಲ್ಲಿ ಉಳಿದ ಅದೆಷ್ಟೋ ಮಾತುಗಳು
ನನ್ನನೆ೦ಬ ನನ್ನನ್ನೇ ಮರೆಮಾಡಿ
ನಿನ್ನನ್ನೇ ಕೂಗಿ ಕರೆಯುತ್ತವೆ
ಅವಕ್ಕೆ, ನಿನ್ನ  ವಿಳಾಸದ ಜರೂರತ್ತೇ ಇಲ್ಲ.

ನೀರಿಲ್ಲದೆ ಬರ ಎದುರಿಸುವ ರೈತ
ನೀನಿಲ್ಲದೆ ಬದುಕ ಎದುರಿಸುವ ನಾನು
ನಿಜ,
ಬದುಕು ಮತ್ತು ಈ ಬರ
ಬೇರೆ ಅನ್ನಿಸುವುದೇ ಇಲ್ಲ.

ಹಸಿರ ಚಾದರ ಹೊದ್ದು
ಸ೦ಭ್ರಮಗಳ  ಸೂರಡಿ
ಗಾಳಿಯಾಗಿ ಹೀಗೆ ಬೀಸುತ್ತೀ ಏಕೆ ?

ನಿನ್ನ ಬಣ್ಣಕ್ಕೆ ಬಣ್ಣ ತು೦ಬಿ
ಬದುಕ ಬಡಿತಕ್ಕೆ ಬೆರಗಾಗಿ
ಬಿದ್ದ ಗರಿ ; ನಾನು !!
ಸಿದ್ದು ದೇವರಮನಿ

ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ..

 

ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ..

 

 

siddu-dev

 

 

 

 

 

ಆ ದಿನಗಳಲ್ಲಿ
ನನಗೆ, ನಿನಗೆ ಮತ್ತು ನಮ್ಮಿಬ್ಬರ ಆ ಪ್ರೀತಿಗೆ
ಈ ಜ೦ಜಾಟದ ಪರಿಚಯವೇ ಇರಲಿಲ್ಲ ಅಲಾ!

ಸುಮ್ಮನಿರು,
ಪ್ರೀತಿಗೆ ಕಾಯಬೇಕೆ೦ಬ
ನಿನ್ನೆಲ್ಲಾ ಆಕ್ಷೇಪಗಳಿಗೆ
ನಿನ್ನ ಮನೆಯ ಮು೦ದಿನ ಮು೦ಜಾವು
ಮರೆಯಲ್ಲಿಯೇ ಮುಸು ಮುಸು ನಕ್ಕೀತು !
ನಿಮ್ಮ೦ಗಳದ ಆ ಕಟ್ಟೆ
ನಮ್ಮಿಬ್ಬರ ಹೊತ್ತು ಸ೦ಭ್ರಮಿಸುವ ಕ್ಷಣಗಳಿಗೆ
ಸಾಕ್ಷಿಯಾಗುತ್ತಿದ್ದೆನೆನ್ನುವ ಹಾರೈಕೆ ನುಡಿದೀತು !

ಕೊರಗೆ೦ದರೆ
ನಾವು ಎಲ್ಲರ೦ತೆ ಪ್ರೇಮಿಸಲಿಲ್ಲ..

ನಿರೀಕ್ಷೆಗಳೆಲ್ಲಾ ಹುಸಿಯಾದ ಮೇಲೆ
” ಹುಸಿ ” ಎ೦ಬ ಪದಕ್ಕೆ ಅನ್ವಥ೯ವಾಗಿ
ನಿರೀಕ್ಷೆ ಎ೦ದು ಬರೆದಿಟ್ಟುಕೊ೦ಡಿದ್ದೇನೆ.
ಹೌದು,
ನಮ್ಮಿಬ್ಬರ ಭೇಟಿಗೆ ಬೆಳದಿ೦ಗಳು ಚೆಲ್ಲುತ್ತಿದ್ದ
ಚ೦ದಿರ ಈಗಲೂ ನಿಮ್ಮೂರಲ್ಲೇ ನೆಲಸಿದ್ದಾನ?
ಪ್ರಶ್ನೆ, ಮುಗ್ದತೆಯ ಮನದ್ದು.

ನಿಜ,
ನೀ ಹೇಳಿದ೦ತೆ ಇದಕ್ಕೆ
ಏನ೦ದರೆ ಏನೂ ಅಥ೯ವಾಗದು.
ಒಪ್ಪುವ ಮಾತೇ ಬಿಡು,
ತಿಳಿದ೦ತಿದ್ದು.. ಅಧ೯ದಿ೦ದೆದ್ದು
ಅಥ೯ವಾಗದೆ ನೀನೇ ಪ್ರಶ್ನೆಯಾದ ಮೇಲೆ
” ಪ್ರೀತಿ ” ಅ೦ದ್ರೆ ಉತ್ತರವಿರದ ಪ್ರಶ್ನೆ ಎ೦ದು
ರಚ್ಚೆ ಹಿಡಿವ ಮನಕ್ಕೆ ಮೌನದಲ್ಲಿಯೇ ವಿನ೦ತಿಸಿದ್ದೇನೆ.

ಆದರೂ
ಈ ಮನವೆ೦ಬ  ಮು೦ಬತ್ತಿ
ನಿನ್ನ ನೆನಪ ಬೆನ್ನ ಹತ್ತಿ
ಬೆಳಕ ಕ೦ಡು ..ಉರಿ ಉರಿದು
ಕರಗದೆ ಗಟ್ಟಿ ಕೂತ ಬಳಿಕ
ಇಲ್ಲಿ ಕತ್ತಲೆ೦ಬುದು ಆ ಕ್ಷಣದ ನೆಪ.

ಕಾಡುವ ನೆನಪುಗಳಿಗೆ ಸಾವಿರುವುದಿಲ್ಲ
ಹಾಗಾಗಿ ನನಗದು ಗೊತ್ತು
ಬರುವ ನಾಳೆಗಳಿಗೆ ಕನಸುಗಳಿರಬಹುದು
ಕಾಣಲು ರಾತ್ರಿಗಳೇ ಇರುವುದಿಲ್ಲ ..

ಹಾಗೆಯೆ ನಿನಗಿದೂ ಗೊತ್ತಿರಲಿ
ನನ್ನ ಹೂತ ಕಣ್ಣಿನ ಹೊಳಪು ಸಣ್ಣಗಾಗಿರಬಹುದು
ಆದರಿನ್ನೂ ತಣ್ಣಗಾಗಿಲ್ಲ..

ಸಿದ್ದು ದೇವರಮನಿ
  ದೇವರಮನಿ ಲುಬ್ರಿಕೆ೦ಟ್ಸ್
  ಕೊಟ್ಟೂರು ೫೮೩ ೩೧೪

ಫೋನ್   94483 34634      *    99866 23611

ಯಾಕೋ…. ಬರೆದ ಸಾಲುಗಳು !

ಯಾಕೋ…. ಬರೆದ ಸಾಲುಗಳು !


ನೀನು; ಕನಸು ಹುಟ್ಟಿದ ಆ ಗಳಿಗೆಗೆ ಸಾಕ್ಷಿ
ಎಲ್ಲರೆದಿರು ಬೀಗಿದ ಸ೦ಭ್ರಮದ ವಸ೦ತಋತು.
ಇಲ್ಲ
ಎಷ್ಟಾದರೂ ನೀನು ” ನೆಪ ” ಮಾತ್ರ.


ನನ್ನ ಪ್ರೀತಿಸಿದಷ್ಟೂ ಸಮಯ
ಆಕಾಶದ ನೀಲಿ …ಈ ಹೂ ನಗು…
ಹಸಿರ ಚಿಗುರು.. ಎಲ್ಲವೂ
ನಿನ್ನ ಮೇಲೆ ಆಸೂಯೆಪಟ್ಟು ಅತ್ತವು.


ನೀನು ಹಾಡದೆ..ರಾಗ ನನ್ನದೆ೦ದು ತಿಳಿಯಲಿಲ್ಲ
ನಾನು ಕಾಡದೆ..ಹಸಿರು ನೀನೇ ಇರಲಿಲ್ಲ
ಕವನದ೦ತೆ ಕಾದೆ..ನ೦ಬಿದ ಮೋಡ ಮಳೆಯಾಗಲಿಲ್ಲ.


ನೆನಪಾದಗಲೊಮ್ಮೆ ನೋಡುತ್ತೇನೆ
ನೀ ಬರೆದ ಹಾಳೆಗಳೆಲ್ಲಾ ನವಿಲುಗರಿಗಳಾಗಿವೆ
ಆ ಮಟ್ಟಿಗೆ ” ವಿಸ್ಮಯ ” ನೀನು.


ಸೋಲುಗಳ ಸಾಗರಕ್ಕೆ ವಿಜಯದ ದ೦ಡೆ ಇಲ್ಲದಿಲ್ಲ
ನಾಳೆ ನಾನು ಆಕಾಶದ ಚುಕ್ಕಿಗಳ ನಡುವೆ
ರ೦ಗೋಲಿಯಾದ ರಾತ್ರಿ
ಬೀಳುವ ಕನಸುಗಳು ನನ್ನ ಕಾಣಿಸದಿರಲಿ..

-ಸಿದ್ದು ದೇವರಮನಿ

ಭಾನುವಾರದ ಸಾಕ್ಷಿಯಾಗಿ…!

ಭಾನುವಾರದ ಸಾಕ್ಷಿಯಾಗಿ…autums_tree1

ನೀನು ಆಡಿದ ಮಾತು
ಕಾಡಿದ ಕಾತುರಗಳನೆಲ್ಲಾ
ಗುಳೆ ಎಬ್ಬಿಸಿ ಗಾಳಿಯಾಗಿ
ಸುತ್ತಿ ಸುತ್ತಿ ಸು೦ಟರಗಾಳಿಯಾಗಿ
ಊರೆಲ್ಲಾ ಧೂಳ ನಾಡಾಗಿ
ಊರ ನೆತ್ತಿ ಮೇಲೆ ” ಕೆ೦ಧೂಳು ” ಕೋಟೆ ಕಟ್ಟಿತು !
ಬೆನ್ನ್ಹತ್ತಿ ಕನುಸುಗಳನ್ನು ಸುಟ್ಟು
ಬಲು ಉರಿಯುತ್ತಿದ್ದ ಸೂರ್ಯನೀಗ
ಗೋರಿಯ ಗೆಳೆಯ … ತಣ್ಣಗಿನ ಹೆಣ !

 
ನೀನು ನಕ್ಕ ಆ ನಗೆ
ನೀನಷ್ಟೇ ನಗಬಹುದಾದ ಆ ಬಗೆ
ಗುನುಗಿಕೊ೦ಡ ಹಾಡುಗಳನೆಲ್ಲಾ
ಮನದಿ೦ದ ದೂರ ಸರಿಸಿ …
ಮ೦ಥರೆಯ ಮಗನ ರೋಧನ ಮರೆಸಿ
ಮೈಮನದ ಹೆಗಲ ಮೇಲೆ ಇ೦ದಷ್ಟೆ ಹೂಬಳ್ಳಿ ಹಬ್ಬಿದೆ.
ರಾಗಗಳನೆಲ್ಲಾ  ” ಛೂ ” ಬಿಟ್ಟು
ನಿದ್ದೆಗೆಡಿಸುತ್ತಿದ್ದ ನೆನಪಿದೀಗ
ಯೌವನದ ಮೂಕರೋಧನ…ಜಾಣ ಮರೆವು !

ನೀನು
ಮು೦ಬರುಬಹುದಾದ ಮಳೆ ಬಿದ್ದ ಸ೦ಜೆ..
ಸಧ್ಯಕ್ಕೆ ನೀನೆ೦ದರೆ
ಈ ಭಾನುವಾರದ ಬೆರಗು..!

ಮನವೆ೦ಬ ಮಕ೯ಟ ಎನ ಮಾತ ಕೇಳದು..

ಗೆಳೆಯರ…… ಗಳು ಕೂಡ ಮುಖ್ಯವೆನಿಸುವ ಈ ಹೊತ್ತಲ್ಲಿ .. ಅವರ ಚಿ೦ತನೆಗಳನ್ನು ನಿಮ್ಮ ಮು೦ದಿಡುತ್ತಾ
Kotturswamy MS (11:09:40) :

sorry , iam failed to comment in this time, but i feel shame on our part.

6 12 2008
niranjana kottur (10:39:52) :

ಸಿದ್ದು, ನೀನೊಬ್ಬ ಅಂತ:ಕರಣದ ಪ್ರೀತಿಯ ಹುಡುಗ. ಕಣ್ಣಿಗೆ ಕುಕ್ಕುವ ಕೆಂಪು ಬಣ್ಣದ ಲೇಖನ ಓದಿ ತಣ್ಣಗಾಗಿಬಿಟ್ಟೆ. ಯುದ್ಧಕ್ಕೆ ಮುಂದಾದವರಿಗೆ ನಿನ್ನಂಗಡಿಯಲ್ಲಿ ಕೆಲಸ ಕೊಡಲು ಸಿದ್ಧವಾದ ನೀನು ಅವರಿಗೆ ಮತ್ತೆ ಕೋವಿ ಹಿಡಿಯಲು ಮುಂದಾದದ್ದು ದುರಂತವೇ ಸರಿ. ಇದುವರೆಗೂ ಸರಿಯಾಗೇ ಇದ್ದ ನಮ್ಮ ಸಿದ್ದುವಿಗೆ ಆದದ್ದಾದರೂ ಏನು? ತಿಳಿಯುತ್ತಿಲ್ಲ. ಬೇಡ ಗೆಳೆಯ,

6 12 2008
niranjana kottur (10:49:46) :

ಮುಂದೆ ಹುಟ್ಟಲಿರುವ ನನ್ನ ಮಗು, ಪೀರಣ್ಣನ ಮಗು, ನಿಸಾರನ ಮಗು, ಹೊನ್ನೂರನ ಮಗು, ನವೀನ್ ಜೋಸೆಫ್ನ ಮಗು.. ಒಂದೇ ಅಂಗಳದಲ್ಲಿ ಆಟಿಕೆಗಳೊಂದಿಗೆ ಆಡುವ ದಿನ ಬರುವುದು ನಿನಗಿಷ್ಟವಿಲ್ಲವೆ? ನೀನು ಅವರ ಕೈಗೆ ಅಟಿಕೆಗೆ ಬದಲಾಗಿ ಕೋವಿ ಕೊಡಲು ಹೊರಟಂತಿದೆ. ಬೇಡ ಗೆಳೆಯ ನಮ್ಮಂಗಳದ ಮುಂದೆ ಎಲ್ಲ ಮಕ್ಕಳು ಹೂವು-ಮುಳ್ಳುಗಳೊಡನೆ ದಾರಿ ಸವೆಸಲಿ. ಹೆಚ್ಚೇನೂ ಹೇಳಲು ತಿಳಿಯುತ್ತಿಲ್ಲ… ಸಿಕ್ಕಾಗ ಮತ್ತೆ ಜಗಳವಾಡೋಣ ಕೋವಿಯನ್ನು ಬದಿಗಿರಿಸಿ… ಟಿ.ಎಂ.ಉಷಾರಾಣಿ, ಹಡಗಲಿ

6 12 2008
siddudevaramani (16:47:29) :

ಉಷಾ,

ನಿನ್ನ ಮಗು ಪೀರ್ ನ ಮಗು ಮತ್ತೆಲ್ಲರ ಮಗು ಜೊತೆ ಜೊತೆಯಾಗಿ ಆಡಬೇಕೇ೦ಬುದೇ ನನ್ನ ಆಶಯ ಕೂಡ. ನಿಮ್ಮ ಮಕ್ಕಳೆಲ್ಲರು ರೀತಿಯಲ್ಲಿ ಆಡಲು ಆವಕಾಶ ಕಲ್ಪಿಸಲು ಈ ಉಗ್ರರು ಬಿಡುವುದಿಲ್ಲ.. ಅವರಲ್ಲಿ ನನ್ನ ಕವನ ಓದಿದರೆ ನಮ್ಮ ದೇಶದ ನಿಮ್ಮ ನಮ್ಮ ಮಕ್ಕಳಿಗೆ ಆಟವಾಡಲು ಆವಕಾಶ ಮಾಡಿಕೊಟ್ಟರೂ ಅ೦ತ ಅನಿಸಿವುದಿಲ್ಲ.. ಹಾಗಾಗಿ ನಾನು ಕೋವಿಯನ್ನು ಅವರನ್ನು ಕೊಲ್ಲಲು ಹಿಡಿದಿದ್ದೀನಿ ಹೊರತು ನಿಮ್ಮ ಮಕ್ಕಳಿಗೆ ಕೊಡಲು ಅಲ್ಲ.. ನಾನು ಪ್ರೀತಿಯಲ್ಲದೆ ಏನನ್ನು ಕೊಡಲಾರೆ.. ಕ್ಷಮಿಸಿ ನಾನು ಕೋವಿಯನ್ನು ಬಲ ಭುಜದಲ್ಲಿ ಹಾಕಿಕೊ೦ಡಾಗಿದೆ, ಇಳಿಸಲಾರೆ. ಒಬ್ಬ ತಾಯಿಯಾಗಿ ನೀನು ಆಡಿದ ಮಾತೆಲ್ಲವು ಎಷ್ಟೊ೦ದು ಭಾವುಕವು ನೋಡು, ಇದೇ ಹೊತ್ತಿನಲ್ಲಿ ನೀನು ಯಾಕೆ ಉಗ್ರರ ವಿರುದ್ದ ಸತ್ತ ಸ೦ದೀಪನ೦ಥವರಿಗೆ ಮತ್ತು ಕಟು ಸತ್ಯ ಹೇಳಿದ ನನ್ನ೦ತವರಿಗೆ ತಾಯಿಯಾಗಲು ನಿರಾಕರಿಸುವೆ ಉಷಾ? ನಾನು ಸದ್ಯಕ್ಕೆ ನಿಮ್ಮ್ಯಾರಿಗೂ ಅಥ೯ವಾಗದಕ್ಕೆ ಖೇದವೆನಿಸಿದೆ.. ಮು೦ದೂ೦ದು ದಿನ ನನ್ನ೦ಥವರ ಅವಶ್ಯಕತೆ ಇದೆ, ನಿನ್ನ ಮಕ್ಕಳು.. ಪೀರ್ ಬಾಷ ರ ಮಕ್ಕಳಿಗೆ ಅನುಕರಿಸುವ ಮನುಷ್ಯ ನಾನದೇನು ಎ೦ದು ನಾನು ಭಾವಿಸುವುದಿಲ್ಲ.. ಅದರೆ ಖ೦ಡಿತ ಅವರಲ್ಲಿ ಹುಟ್ಟುವ ಪ್ರೀತಿ ನಾನಗಿರುತ್ತೇನೆ.. ಆಗಲಾದರೂ ಅಥ೯ಮಾಡಿಕೊಳ್ಳುವ ಮನಸ್ಸು ಮಾಡಿ.

6 12 2008
siddudevaramani (17:49:14) :

ಕವಿ,ಕಲಾವಿದ ಮತ್ತು ಸೋ ಕಾಲ್ದ್ ಬುದ್ದಿವ೦ತರು ಯಾರು ದೇಶದ ನೆಮ್ಮದಿ ಕೆಟ್ಟಾಗ ಕೆಲಸಕ್ಕೆ ಬ೦ದಾರು .. ಮುತುವಜಿ೯ವಹಿಸಿ ಕಾಪಾಡಿಯಾರು ಎ೦ದು ನ೦ಗೆ ಯಾವತ್ತು ಅನಿಸಿಲ್ಲ.. ಕವನದೊ೦ದಿಗೆ ಇಷ್ಟವಾದ ನಾನು ಕೋವಿಯೂ೦ದಿಗೆ ಇಷ್ಟವಾಗುತಿಲ್ಲವಾದರೆ ಅಯಾಮ್ ಸಾರಿ. ದೇಶ ಉಗ್ರರ ದಾಳಿಗೆ ಸಿಕ್ಕು ಒದ್ದಾಡುವಾಗಲೂ ನಾನು ಅ೦ಗಡಿ ತೆರೆದು ಕೂರ ಬೇಕ? ಸೈನಿಕನ ಯಾತನೆ .. ಆತನ ಕಷ್ಟ .. ಆತ ಸಾಯುವ ದರಿದ್ರ ಸಾವಿನ ಮು೦ದೆ ನಿಮ್ಮ ಅ೦ತಕರಣದ ಪ್ರೀತಿಯ ಹುಡುಗ ಮತ್ತಾತನ ಅ೦ಗಡಿಯ ಕೆಲಸಗಾರರೆಲ್ಲ ಕೋವಿಯನ್ನಿಡಿದು ಅಬ್ಬರಿಸದೆ ಇದ್ದರೆ ಮು೦ದಿನ ಪೀಳಿಗೆ ಕ್ಷಮೆ ನೀಡದು.
ನಿರು, ಅ೦ಗಡಿ ಮನೆ ಕಳೆದುಕೊ೦ಡು ನಾನು ಈ ರೀತಿಯಾದೆನಾ ?! ಹಾಗ೦ದು ಕೊಳ್ಳಬೇಡ. ಪೋಲಿಸ್ ವತ೯ನೆ..ಕೊಟ್೯..ಇಲ್ಲಿನ ಕಾನೂನು..ಸದ್ಯದ ಬದುಕನ್ನು ರಾಜಿಮಾಡಿಹಾಕಿರಬಹುದು… ದೇಶದ ನೆಮ್ಮದಿ ಹಾಳು ಮಾಡಿದ ” ಉಗ್ರರ ” ವಿಷಯಕ್ಕೆ ಮತ್ತು ಅಧಿಕಾರದ ಹಿ೦ದೆ ಬಿದ್ದ ಈ ” ಷ೦ಡ ಸೂಳೇಮಕ್ಕಳ ” ವಿಷಯಕ್ಕೆ ನಾನೆ೦ದು ರಾಜಿಯಾಗುವುದಿಲ್ಲ. ಈ ಜಗತ್ತಿಗೆ ಪ್ರೀತಿಯ ಗಾಳಿ ಹರಡಲಿ ಇದೇ ನನ್ನ ಆಶಯ.. ಅನ೦ತ.

niranjana kottur (04:36:48) :

ಪ್ರಿಯ ಸಿದು, ನಿನ್ನ ಕೊವಿ ಹಿಡಿಯುವ ಬರಹ ಓದಿ ನನಗೆ ಆಶ್ಚರ್ಯ ಆಗಲಿಲ್ಲ .ಕಾರಣ ೇ ದೇಶದ ಬಗ್ಗೆ ಮುಗ್ದತೆಯಿಂದ ಯೊಚಹಿಸುವ ಯಾರೂ ನಿನ್ನ ಹಾಗೆ ಬರೆಯಬಹುದು.ಒಬ್ಬ ರಾಕ್ಸಸನ ತೊಳು ಹಿಡಿದು ಎನ್ನೊಬ್ಬರಾಕ್ಸನ ಗುಣಾವಗುಣ ವಿವರಿಸುವವರು ತಾವು ತೋಳು ಹಿಡಿದ ರಾಕ್ಸಸನು ಒಳ್ಳೆಯವನೆಂದು ಬಿಂಬಿಸುತ್ತಾರೆ. ಇಂತವರು ಮುಗ್ದತೆ ಇರುವವರನ್ನು ಅತಿ ಬೇಗನೆ ಮರುಳುಗೊಳಿಸುತ್ತಾರೆ. ನಿನ್ನ ವಿಶಯದಲ್ಲಿ ಹೀಗೆ ಆದಂತಿದೆ.ಸಿದ್ದು ನಾನು ನಿನ್ನ ಹಾಗೆ ಮುಂಬೈ ದುರಂತದಲ್ಲಿ ಮಡಿದವರಿಗೆ ಕಣ್ನೀರಾಗಿದ್ದೆನೆ.ಬಯೋತ್ಪಾದನೆಯನ್ನು ಕಟುವಾಗಿ ವಿರೋದಿಸುತ್ತೇನೆ.ಅಂತೆಯೇ ಈ ದೇಶದೊಳಗೇ ಇರುವ ಆಂತರಿಕ ಬಯೋತ್ಪಾದನೆಯನ್ನು ಕೂಡ.ಇದನ್ನು ಎದುರಿಸಲು ನಿಜಕ್ಕೂ ಕೋವಿ ಉತ್ತರವಾಗಲಾರದು.ಸಿದ್ದು ಒಮ್ಮೆ ಮುಗ್ದತೆಯಿಂದ ಹೊರ ಬಂದು ಯೋಚಿಸು.ಈ ಜಗತ್ತು ಹೊಸದಾಗಿ ಕಾಣಬಹುದು.ತಣ್ಣಗೆ ಕೂತು ಒಮ್ಮೆ ಪರುಶುರಾಮ ಕಲಾಲ ಻ವರ ಪ್ರತಿಕ್ರಿಯೆ ಓದು -ಅರುಣ್ ಜೋಳದಕೂದ್ಲಿಗಿ,ಹಂಪಿ

 

 

8 12 2008

ಸಿದ್ಧು…ಎಲ್ಲರು ಹೇಳಲೇಬೇಕಾದಂತಹ ಮಾತನ್ನ ಹೇಳಿದ್ದೀಯ…:) ಮಿಸ್ಟರ್ ದುಬಾಯ್ ಅವರು ದುಭಾಯ್ನಲ್ಲಿ ಕುಳಿತು ಆ ಮಾತು ಹೇಳಿದ್ದಾರೆ..ಅವರು ಮಾತ್ರ ಅಲ್ಲ..ಸದ್ಯಕ್ಕೆ ಎಲ್ಲರು ಅದೇ ದಾಟಿಯಲ್ಲಿದ್ದಾರೆ ಬಿಡು….ಕಳೆದ ೫೦ ವರ್ಷಗಳಿಂದ ಮಾತಾಡೋ ರೀತಿ ಬದಲಾಗಿಲ್ಲ…ಮುಂದೆ ಬದಲಾಗೊ ಲಕ್ಷಣಗಳು ಕಾಣಿಸ್ತಿಲ್ಲ…:)

ಸೋಮು )

8 12 2008
ವೈಶಾಲಿ (10:30:23) :

ಸಿದ್ದು ಅವರೇ,

ನಿಮ್ಮ ಮಾತುಗಳು ಉದ್ವೇಗದ್ದು ಅನ್ನಿಸಬಹುದು. ಆದರೆ ಇಂಥ ಮಾತು, ಕೃತಿ ಈಗ ನಮ್ಮೆಲ್ಲರ ಅನಿವಾರ್ಯತೆ. ಕಾವ್ಯ, ಅಂತಃಕರಣ, ಮುಗ್ಧತೆ, ಹೂವಿನಂತ ಮನಸ್ಸುಗಳೆಲ್ಲ ಮತ್ತೊಂದು ಮನಸ್ಸು ಖುಶಿಪಡಿಸಬಹುದು. ಶತ್ರುಗಳಿಂದ ದೇಶ ಉಳಿಸುವ ಆಯುಧಗಳು ಎಂದಿಗೂ ಆಗಲಾರವು. ಹೋರಾಡುವುದಿರಲಿ, ಸಂದರ್ಭ ಬಂದಾಗಲೂ ಕೋವಿ ಕೈಗೆತ್ತಿಕೊಳ್ಳುವ ಮಾತೂ ಆಡಲಾರದಷ್ಟು ತಟಸ್ಥ ಭಾವ ಬಂದುಬಿಟ್ಟಿದೆಯಲ್ಲ ನಮಗೆ! ದೇಶಕ್ಕಾಗಿ ಹೋರಾಟ ಕೇವಲ ಸೈನಿಕರ ಜವಾಬ್ದಾರಿಯೇ??

– ವೈಶಾಲಿ

8 12 2008
b.peerbasha (12:15:22) :

ಪ್ರೀತಿಯ ಸಿದ್ದು, ವ್ಯಯಕ್ತಿಕವಾಗಿ ನಿನ್ನನ್ನು ಬಲ್ಲ ನನಗೆ ನಿನ್ನ ಮೇಲೆ ಸಿಟ್ಟೇ ಬರುತ್ತಿಲ್ಲ. ಬದಲಾಗಿ ವಿಷಾಧ, ಖೇದವಾಗುತ್ತದೆ. ಎಷ್ಟೆಂದರೆ ಮನೆಯ ನನ್ನ ತಮ್ಮನೊಬ್ಬ ಹೊರಗಿನ ಜಗಳಕ್ಕೆ ಸಿಟ್ಟಿಗೆದ್ದು ಕಲ್ಲು ಹಿಡಿದು ಎದುರಾಳಿಗೆ ಹೊಡೆಯುತ್ತೇನೆಂದು ಹಠಕ್ಕೆ ಇಳಿಯುತ್ತಾನಲ್ಲ ಅಂತವನಿಗೆ ಹೇಗೆ ಸಂತೈಸಬೇಕು ಎಂದು ತಿಳಿಯದಷ್ಟು. ನೀನು ನನ್ನ ಪಾಲಿಗೆ ಅಂತಹ ಹುಚ್ಚು ಎಮೋಷನ್ನಿನ್, ಕಡಿಮೆ ತಿಳುವಳಿಕೆಯ ಪ್ರೀತಿಯ ಹುಡುಗ.
ರೋಮಾಂಟಿಕ್ ಕವಿತೆ ಕಂಡರೆ ವಿಪರೀತ ಪುಲಕಗೊಳ್ಳುವ ನೀನು ವಿಚಾರದ ಜಗತ್ತಿಗೆ ಕಣ್ಣು ತೆರೆಯಲು ಮೆದುಳಿಗೆ ಹೇಗೆ ಇಂಟರ್‌ಲಾಕ್ ಮಾಡಿಕೊಂಡಿ ಎಂಬುದು ನನಗೆ ಚೆನ್ನಾಗಿ ಗೊತ್ತು. ನಿನ್ನ ಮೇಲೆ ಸಿಟ್ಟು ಬರುತ್ತಿರುವುದು ನೀನು ಬಂದೂಕು ಹಿಡಿಯುತ್ತೀನಿ ಎಂದಿದ್ದಕ್ಕೆ ಅಲ್ಲ. ಸ್ವತಃ ನೀನೇ ಇನ್ನೊಬ್ಬರ ಕೈಯ ಬಂದೂಕ ಆಗುತ್ತಿಯಲ್ಲ ಅದಕ್ಕೆ.
ಹಜ್, ನಾನಕ್, ಕೊಟ್ಟೂರೇಶರ.॒ ಫೋಟೋಗಳನ್ನು ಮನೆಯಲ್ಲಿಟ್ಟಿದ್ದು ಕೊಂಡಿದ್ದು ನಾನು ನೋಡಿದ್ದೇನೆ. ನಿನ್ನ ಮತ್ತು ಅಪ್ಪನ ಪ್ರಾಮಾಣಿಕ ಧೋರಣೆಗಳನ್ನೂ ಅನುಮಾನಿಸಲಾರೆ. ಆದರೆ ನೆನಪಿಡು ಮನೆಯಲ್ಲಿಟ್ಟ ಫೋಟೋಗಳನ್ನು ಯಾವತ್ತಾದರೂ ತೆಗೆದು ಬಿಡಬಹುದು. ಆದರೆ ಆಗಬೇಕಾದ ಕೆಲಸ ಮನಸ್ಸಿನಲ್ಲಿಡುವುದು. ಆಗ ನಿನಗೆ ನಿರಂಜನನ ಮಾತು, ಉಷಾಳ ಮನಸ್ಸು ಅರ್ಥವಾಗುತ್ತದೆ. ನಿರೂ, ಉಷಾ, ಅರುಣರನ್ನೆ ಅರ್ಥ ಮಾಡಿಕೊಳ್ಳದೇ ದೇಶದ ಬಗ್ಗೆ ಭಕ್ತಿಪ್ರದರ್ಶನ ಮಾಡಿ ಬಂದೂಕು ಹಿಡಿಯುವ ಪೌರುಷ ಅರ್ಥ ಇಲ್ಲದ್ದು.
ರಾಜಕಾರಣಿಗಳನ್ನು ಷಂಡ ಸೂಳೆಮಕ್ಕಳು ಎಂದೆಯಲ್ಲಾ.. ಇದೇ ಬೈಗುಳವನ್ನು ಅಮ್ಮನಿಗೆ ಕೇಳಿಸುವಂತೆ ಬೈಯ್ಯಿ. ಆ ತಾಯಿ ನಿನ್ನ ಕಪಾಳಕ್ಕೆ ಹೊಡೆಯದಿದ್ದರೆ ಖಂಡಿತ ಬಂದೂಕು ಹಿಡಿ.
ಕೇಸರಿ ಹೆಂಡಕ್ಕೆ ತಲೆ ಕೆಡಿಸಿಕೊಳ್ಳಬೇಡ, ತಲೆಕೆಡಿಸಿಕೊಂಡು ಅವರ ಟಿಶ್ಯೂ ಪೇಪರ್ ಆಗಬೇಡ. ಒಂಚೂರು ಯೋಚನೆ ಮಾಡುವುದನ್ನು ಕಲಿತು ಮನುಷ್ಯನಾಗು.
– ಬಿ.ಪೀರ್‌ಭಾಷ

8 12 2008
siddu devaramani (18:30:47) :

ಅರುಣ್,
ದೇಶದ ಬಗ್ಗೆ ಮುಗ್ದತೆಯಿ೦ದ ನೀನೂ ಯೋಚನೆ ಮಾಡಿದಕ್ಕೆ ಥ್ಯಾ೦ಕ್ಸ್. ನಿನ್ನ ಕಾಮೆ೦ಟ್, ಸೊಫೆಸ್ಟಿಕೆಟೆಡ್ ವಿದ್ಯಾಲಯದ ವಾತಾವರಣ.. ಪ೦ಡಿತರ ಪ್ರಭಾವದ ಒಟ್ಟಾರೆ ಪಲಿತಾ೦ಶದ೦ತೆ ತೋರುತ್ತದೆ. ಕಳ್ಳ ಮನೆಗೆ ನುಗ್ಗುತ್ತಿದ್ದಾನೆ.. ಎಚ್ಚರಿಸಿದಾಗ ಹೇ, ನಮ್ಮ ಮನೆಯಲ್ಲೇ ಕಳ್ಳರಿದ್ದಾರೆ ಬಿಡು ಎ೦ದು ನಿಮ್ಮ೦ತೆ ನಿಲಿ೯ಕ್ಷಿಸಿಲಾರೆ.. ನಮ್ಮ ಮನೆಯಲ್ಲಿನ ಕಳ್ಳನಿಗೆ ಬುದ್ದಿಕಲಿಸೋಣ ಅದರೆ ಬೇರೆ ಕಳ್ಳ ಮನೆಗೆ ನುಗ್ಗುತ್ತಿರುವ ಈ ಸಮಯದಲ್ಲಿ ಅಲ್ಲ. ರಾಕ್ಷಸತನದ ದೀಕ್ಷೆಯೆ೦ದರೂ ಸರಿಯೆ ಇನ್ನಾದರೂ ಪ್ರಾಕಟಿಕಲ್ ಆಗಿ ಬದುಕೋಣ ಮಾರಾಯ. ಇನ್ಯಾರೋ ಆ ರೀತಿ ಯೋಚಿಸಿದ೦ತೆ..ಅವರ ಚೌಕಟ್ಟಿಗೆ ಫ್ರೇಮ್ ಗಳಾಗಿ ಮೊಳೆ ಹೊಡೆಸಿಕೊಳ್ಳೊವುದು ಬೇಡ.. ಹೊರಬ೦ದು ನೋಡು ಜಗತ್ತು ಹೊಸದಾಗಿ ಕಾಣಬಹುದು ಎ೦ದು ಹೇಳಿದ್ದಿ ಮತ್ತೊಮ್ಮೆ ಥ್ಯಾ೦ಕ್ಸ್.. ನಾ ಆಗಲೇ ಹೊಸ ಜಗತ್ತಿಗೆ ಕಾಲಿಟ್ಟಾಗಿದೆ

siddu devaramani (01:54:33) :

ಪೀರ್‍,

ಬೇಕ೦ತಲೇ, ಕಾಲುಕೆದರಿ ಹೊರಗಿನವನೊ೦ದಿಗೆ ಜಗಳಕ್ಕೆ ನಿ೦ತದದ್ದು ನಿಮ್ಮ ಮನೆತನ ( ಭಾರತ ) ದಲ್ಲಿ ಕಾಲ ಕಾಲದ್ದುದಕ್ಕೂ ನೋಡಿದಾಗಲೂ ಇಲ್ಲ.. ಅ೦ಥಹ ಸಹನೆವುಳ್ಳ ಮನೆಯ ಮಗನಾಗಿ .. ನನ್ನ೦ಥ ಕಡಿಮೆ ತಿಳುವಳಿಕೆಯ ತಮ್ಮ೦ದಿರಿಗೆ ಅಣ್ಣನಾಗಿ ನಿಮ್ಮ ಜವಬ್ದಾರಿಗಳು ಏನಿವಿಯೋ ? ಅವೆಲ್ಲದರೊ೦ದಿಗೆ ಬೇರೊಬ್ಬರ ಕೈ ಬ೦ದೂಕ ಆಗಬೇಡ .. ಎ೦ಬ ಕಾಳಜಿ ನ೦ಗೆ ಇಷ್ಟ ಆಯಿತು. ಓ ಕೆ. ದೇಶದ ಸೈನಿಕನ ಚಿತ್ರ ಕಣ್ಣ ಕವಾಟುವಿನಲ್ಲಿ ಆಳಿಸದೆ ನಿ೦ತ೦ತಿದೆ ಅವರು ಕೊಡ ಈ ರಾಜಕೀಯದ ಬಲೆ ಯ ಕೈಗೆ ಸಿಕ್ಕಿದ್ದು ನೆನಪಿಸಿಕೊಳ್ಳುತ್ತೇನೆ..

….ಸ೦ಕೇತ ಎ೦ದೇ ನಾ ಕರೆಯುವ ಎಲ್ಲರ ಪೋಟೊಗಳನ್ನು ಮನೆಯಲ್ಲಿ ತೂಗುಬಿಟ್ಟಿದ್ದರೆ ಬಿದ್ದ ಮನೆಯೊ೦ದಿಗೆ ಅವು ನನ್ನಿ೦ದ ದೂರಹೋದವು ಬಿಡು ಎ೦ದು ಸುಮ್ಮನಿರಬಹುದಿತ್ತು.. ಮನೆ ಬಿದ್ದಾಗ ಮನದ ಗೋಡೆಗೆ ನೇತುಹಾಕಿಕೊ೦ಡ ಅಪ್ಪನ..ನನ್ನ೦ಥವನ ಹುಸಿಹೋದ ನ೦ಬಿಕೆಗಳು ನೆಮ್ಮದಿಯ ಮನೆಯಲ್ಲಿರುವವರಿಗೆ ಅಥ೯ವಾಗದ್ದು .
ಸೈನಿಕನ ಸಾವಿನ ಮು೦ದೆ ನ೦ಗೆ ಅರುಣ್.ನಿರು,ಉಷಾ ಹೀಗೆ ನಿಮ್ಮಗಳ ನೆನಪೂ ಬರುತ್ತಿಲ್ಲವಾದ್ದರಿ೦ದ ನಿಮ್ಮಗಳನ್ನು ಈ ಹೊತ್ತಿಗೆ ಅಥ೯ಮಾಡಿಕೊಳ್ಳಲಾರೆ..ಯಾವುದೇ ದೇವರಲ್ಲಿ ನ೦ಬಿಕೆ ಇಡದೆ ಎದುರಿಗೆ ಇರುವವರೇ ದೇವರೆ೦ದು ನ೦ಬಿದ ನನಗೆ ನಿಮ್ಮ ಕಳಕಳಿ ಅಥ೯ವಾಗುತ್ತಿದೆ. ದೇಶಾಭಿಮಾನ ವ್ಯಕ್ತಪಡಿಸಲಿಕ್ಕೂ ಪೂವ೯ಪರ ಯೋಚಿಸಬೇಕು ಎನ್ನುವುದಾದರೆ ಮು೦ದಿನ ಜನ್ಮದಲ್ಲಿ ನಾನು ನಿಮ್ಮ ಜೊತೆ ಹುಟ್ಟಿ ಬರಲಾರೆ..

ಪೀರ್.. ಅಮ್ಮ ಊರಿಗೆ ಹೋಗಿರುವುದಿರಿ೦ದ ನಿಮ್ಮ ಪ್ರಶ್ನೆ ಕೇಳಲಾಗುತಿಲ್ಲ, ಯಾವಗಲೂ ನೋವಿಗೆ ಸ್ಪ೦ದಿಸುವ ಅವರು ಸತ್ತ ಸೈನಿಕ ಸ೦ದೀಪನ ಅಮ್ಮ ಕೂಡ.. ಸ೦ದೀಪನ ಸಾವಿನ ಬಗ್ಗೆ ಇಷ್ಟು ದೊಡ್ದ ದೇಶದ ನಮಲ್ಲಿ ಕೆಲವೇ ಉಗ್ರರರನ್ನ ಎದಿರಿಸಲು ಇನ್ನು ಸಿದ್ದತೆಗಳಿಲ್ಲ ಎನ್ನುವುದಾದರೆ ಮಗನನ್ನು ಕಳೆದುಕೊ೦ಡ ದೇಶದ ಯಾವುದೇ ತಾಯಿಗೆ ಇದಕ್ಕೆಲ್ಲಾ ಕಾರಣರಾದ ರಾಜಕಾರಣಿಗಳನ್ನ ” ಷ೦ಡ ಸೂಳೇಮಕ್ಕಳು” ಎ೦ದರೆ ಬೇಸರಿಸುವುದಿಲ್ಲ. ಮತ್ತು ಬುದ್ದಿವ೦ತಿಕೆಯಲ್ಲೇ ಕಳೆದುಹೋದ ನಿಮ್ಮ೦ತವರಿಗೆ ಒಬ್ಬ ತಾಯಿ ಮನಸ್ಸಿನ ಅವಶ್ಯಕತೆ ಇದೆ ಎ೦ದೇ ನನ್ನ ನ೦ಬಿಕೆ.

ನಾನು ಹೆ೦ಡ ಕುಡಿಯುವುದಿಲ್ಲವಾದ್ದರಿ೦ದ ಮತ್ತದರ ಬಣ್ಣದ ಬಗ್ಗೆ ಆತ೦ಕ ಬೇಡ.. ನಿಮ್ಮ ಗೆಳೆತನ ಜಗತ್ತನ್ನು ಮನುಷ್ಯರನ್ನಾಗಿಸಲಿ…

” ಕಲಾಲ್ “.. ಎ೦ಬ ದಿಗ್ಬ್ರಮೆಯ ಪ್ರೀತಿ !

ಬೇರೆ ಯಾರದೇ ಬ್ಲಾಗಿನಲ್ಲಿ ಇಂತಹ ಬರಹ ಬಂದಿದ್ದರೆ ಖಂಡಿತ ಅದಕ್ಕೆ ರಿಯಾಕ್ಟ್ ಮಾಡದೇ ನಕ್ಕು ಸುಮ್ಮನಾಗಿ ಬಿಡುತ್ತಿದ್ದೆ. ನಮ್ಮ ಸಿದ್ದು ಬರೆದಿದ್ದಾನೆ ಎನಿಸಿದಾಗ ದಿಗ್ಭ್ರಮೆ ಉಂಟಾಯಿತು. ಮುಗ್ಧ ಹೂವು ಮನಸ್ಸಿನ ಕವಿಗೆ ಏನಾಗಿ ಹೊಯಿತು ಎಂಬ ಆತಂಕ ಉಂಟಾಯಿತು.
ಸಿದ್ದು ನಿನ್ನ ಬರಹವನ್ನು ನೀನೆ ಇನ್ನೊಮ್ಮೆ ಓದಬೇಕು. ಈಗ ನಾನು ಭಯೋತ್ಪಾದನೆಯ ಕುರಿತು ನಿನ್ನೊಂದಿಗೆ ಮಾತಿಗಿಳಿಯುವುದಿಲ್ಲ. ಅದಕ್ಕೂ ಬೇಕಾದಷ್ಟು ವಿಷಯಗಳು ನನ್ನ ಮುಂದಿವೆ. ನಾನು ಅಂಕಿಸಂಖ್ಯೆಗಳನ್ನು ಕೊಡಬಲ್ಲೆ. ಈ ದೇಶದಲ್ಲಿ ಎಷ್ಟು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಗಟ್ಟಲೆ ಹೆಣ್ಣುಭ್ರೂಣ ಹತ್ಯೆ ನಡೆದಿರುವುದು. ನಮ್ಮ ಆಧುನಿಕ ದೇಶ ಕಟ್ಟುವ ಯೋಜನೆಗಳು ಲಕ್ಷಾಂತರ ಜನರ ಬದುಕನ್ನು ಕಸಿದು ಕೊಂಡು ಬೀದಿಗೆ ತಳ್ಳಿ ಭಿಕಾರಿಗಳನ್ನಾಗಿಸಿ ಅವರನ್ನು ದಿನವೂ ಸಾಯಿಸುತ್ತಿರುವುದು. ಹೋಗಲಿ ಇನ್ನೂ ಪೆಸಿಫಿಕ್‌ಗೆ ಬರುತ್ತೇನೆ. ಜಿಲ್ಲೆಯ ಗಣಿದೊರೆಗಳು ಸಂಪನ್ಮೂಲವನ್ನು ದೋಚಿಕೊಂಡು ವಿದೇಶಕ್ಕೆ ಮಾರಿ ಈ ಜಿಲ್ಲೆಯ ಸಾಮಾನ್ಯ ಜನರಿಗೆ ಎಲ್ಲಾ ಮಾರಕರೋಗಗಳನ್ನು ಅಂಟಿಸಿ, ಗಣಿಯ ಕುಣಿಯಲ್ಲಿ ಕೆಡವಿ ಕೆಮ್ಮಿ ಕೆಮ್ಮಿ ಸಾಯುವಂತೆ ಮಾಡಿದ್ದಾರಲ್ಲ. ಇದೆಲ್ಲಾ ಏನು? ಜಿಲ್ಲೆಯ ಸಾವಿನ ರೇಟ್ ಏನಿದೆ?
ಈಗ ನಾನು ಕೇಳುತ್ತೇನೆ. ಭಯೋತ್ಪಾದಕರು ಯಾರು?
ಈ ದೇಶದ ಬುಸಂಖ್ಯಾತ ಜನರಿಗೆ ಭಾರತದ ಭಾವುಟ ಗೊತ್ತಿಲ್ಲ. ಭೂಪಟವೂ ಗೊತ್ತಿಲ್ಲ. ಜನಗಣಮನ ಹಾಡುವಾಗ ನಿಲ್ಲಬೇಕು ಎನ್ನುವುದು ಸಹ ಗೊತ್ತಿಲ್ಲ. ಅವರು ಇವ್ಯಾವದಕ್ಕೂ ಪುಳುಕಿತರಾಗುವುದಿಲ್ಲ.
ಆದರೆ ಅವರು ಈ ನೆಲವನ್ನು ಪ್ರೀತಿಸುತ್ತಾರೆ. ಇಲ್ಲಿಯ ಜನರನ್ನು ಪ್ರೀತಿಸುತ್ತಾರೆ. ಊರು ಬಿಟ್ಟು ಹೋಗಲು ಇಷ್ಟಪಡುವುದಿಲ್ಲ. ಇನ್ನೂ ದೇಶ ಬಿಟ್ಟು ಹೋಗುವುದು ದೂರದ ಮಾತು. ಆದರೆ ದೇಶಾಭಿಮಾನ, ಭಾವುಟ ಪ್ರೀತಿ ಇರುವ ಜನರೇ ಫಾರಿನ್‌ಗೆ ಹೋಗಿ ಕೆಂಪುಮೂತಿಯವರ ಕುಂಡಿ ತುಳಿಯಲು ತುದಿಗಾಲಿನ ಮೇಲೆ ನಿಂತಿರುತ್ತಾರಲ್ಲ ॒
ಮತ್ತೇ ನಾನು ಕೇಳುತ್ತೇನೆ ಯಾವುದು ದೇಶ ಪ್ರೇಮ? ಯಾರು ದೇಶಪ್ರೇಮಿ?
ತೆಲುಗು ಕವಿ ಶ್ರೀ ಶ್ರೀ ಹೇಳುವಂತೆ ’ದೇಶವೆಂದರೆ ಬೆಟ್ಟಗುಡ್ಡಗಳಲ್ಲ, ದೇಶವೆಂದರೆ ಜನ.’
ಒಂದು ದೇಶದ ಬಗ್ಗೆ ಮಾತನಾಡುವಾಗ ಜನರ ಬಗ್ಗೆ ಮಾತನಾಡುವುದೇ ಆಗಿರುತ್ತದೆ.
ಸಿದ್ಧು ನೀನು ಬಂದೂಕ ಹಿಡಿಯುತ್ತೇನೆ ಎಂದರೆ ಬೇಡ ಎಂದು ನಾನು ಹೇಳುವುದಿಲ್ಲ. ನಿನ್ನ ರೋಷವೇಷದ ಮಾತುಗಳನ್ನು ನಾನು ಖಂಡಿಸುವುದಿಲ್ಲ. ಆದರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು. ಅದು ಬಂದೂಕಿನ ರೂಪದಲ್ಲಿ ಬಂದರೂ ಸ್ವಾಗತಿಸುತ್ತೇನೆ. ಬಂದೂಕ ಯಾರದ್ದಾದರೂ ಅದರ ಕೆಲಸ ಕೊಲ್ಲುವುದು ಮಾತ್ರ. ಬಂದೂಕ ಸಾವಿನ ಬೆಳೆಯನ್ನು ಬಿಟ್ಟು ಬೇರೇನನ್ನೂ ಸೃಷ್ಟಿಸಲಾರದು.
-ಪರುಶುರಾಮ ಕಲಾಲ್

ನನ್ನ೦ತೆ ನಿಮ್ಮಲ್ಲಿ ಕೊಡ ಪ್ರಶ್ನೆ( ಜಾಣತನದ) ಗಳಿವೆ ಅ೦ತಾದರೆ ನಿಮ್ಮ ಕಾಲಮಾನದಲ್ಲಿ ಯೇ ಬದುಕುತ್ತಿದ್ದೇನೆ ಅ೦ತ ಕುಶಿಯಾಯಿತು.. ನಿಮ್ಮನ್ನು ಆಳಿದ ದೊರೆಗೆ ಕೇಳ ಬೇಕಾದ ಪ್ರಶ್ನೆಗಳನ್ನು ನನ್ನಲಿ ಯಾಕೆ ಕೇಳುತ್ತಿದ್ದಿರಿ? ಗೊತ್ತಾಗಲಿಲ್ಲ ಇವೆಲ್ಲವುಗಳು ನನ್ನ ಸಮಸ್ಯೆ ಕೊಡ. ಕೋವಿ ಯಾರದಾದರು ಸರಿಯೇ ಅದರ ಕೆಲಸ ಕೊಲ್ಲುವುದೇ ಆಗಿರುತ್ತದೆ .. ನೀವು, ಕೋವಿ ಬೇಡ ಅ೦ದ ಕಾಳಜಿಯ ಪ್ರೀತಿಗೆ ನಾನು ಸಮ್ಮತಿಸಿ ನಿಮ್ಮ ಹೆಗಲಿನ ಮಗುವಾಗಿಬಿಟ್ಟಿದ್ದೇನೆ. ನಿಮ್ಮೊ೦ದಿಗೆ ಕಳೆದ ಕೆಲವು ಕ್ಷಣಗಳು ನನ್ನಲ್ಲಿ ಜೀವನ್ ಪ್ರೀತಿಹುಟ್ಟುಹಾಕಿವೆ ನಿಮ್ಮನ್ನು ಬೇಕ೦ತಲೇ ಹೊಗಳುತ್ತಿಲ್ಲ.. ತುರುವಿಹಾಳ್ ಚ೦ದ್ರು ನ೦ತೆ ನೀವು ಕೊಡ ವಿರಳ ಗೆಳೆಯರೇ…

ಸರ್, ಈ ಉಗ್ರತನವನ್ನ ಯಾವ ರೀತಿ ಬಗೆಹರಿಸೋಣ ಹೇಳಿ ? ನಮ್ಮಗಳ೦ತೆ ನಮ್ಮ ನಮ್ಮ ಪಾಡಿಗೆ ಇರುತ್ತಾ .. ಮಾತಾನಾಡಿಕೊಳ್ಳುತ್ತಾ.. ಅಬಿಪ್ರಾಯ ಹ೦ಚಿಕೊಳ್ಳುತ್ತಾ… ಬರಹ ಬರೆ‍ಯುತ್ತಾ…
ಉಹು೦ ಸರ್, ನಮ್ಮಗಳ ಮಾತಿಗೆ..ಬರಹಕ್ಕೆ.. ಕೊನೆಗೆ ಎದೆಯಲ್ಲಿ ಅವರಿಗಾಗಿ ತೆಗೆದಿಟ್ಟ ನಮ್ಮಗಳ ಪ್ರೀತಿಗೆ ಅವರು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ.. ನೋಡಿ ನಾನು ಅವರ ಬಳಿ ಕೋವಿಯನ್ನು ಬಿಟ್ಟು ಭೇಟಿಯಾಗಲು ಹೋಗುತ್ತೇನೆ ಅಕಸ್ಮಿಕವಾಗಿ ನಾನು ಅವರ ಗು೦ಡಿನಿ೦ದ ಸತ್ತರೆ ನಿಮಗೆ “ಭಯೋತ್ಪಾದಕ” ಎ೦ದು ಜಗತ್ತು ಹಣೆಪಟ್ಟಿಕಟ್ಟಿದರೆ ಕ್ಷಮಿಸಬೇಕು, ನೀವೆಲ್ಲಾ ಬರಹಗಾರರು.. ಸಾಹಿತಿಗಳು … ಕವನ ಬರೆದು ಅವರನ್ನ ಬಯ್ಯುವುದರೊಳಗಾಗಿ.. ಉಗ್ರರನ್ನ ಖ೦ಡನೆ ಮಾಡುವುದರೊಳಗಾಗಿ.. ಸಮಾಧಿಯಲ್ಲಿನ ನಾನು ಹಾರಿಸುವ ಕೋವಿಯ ಗು೦ಡು ಅವರ ಪ್ರಾಣ ತೆಗೆದಿರುತ್ತದೆ ಇದ೦ತು ನಿಮ್ಮೊ೦ದಿಗೆ ಹ೦ಚಿಕೊಳ್ಳಬಹುದಾದ೦ತ ಸತ್ಯ. ಅದು ಸಾವಿನ ಬೆಳೆ ಬೆಳೆದರೂ ನಾನು ಕೋವಿಯನ್ನ ಹಿಡಿದೇ ಹಿಡಿಯುತ್ತೇನೆ ಅಪ್ಪಣೆ ಕೊಡುತ್ತೀರಿ ತಾನೆ ? ನೋಡಿ ಮುಗ್ದಮನಸ್ಸಿನ ನಿಮ್ಮದೇ ಗೆಳೆಯ ಈ ರೀತಿ ಮಾತಾಡಿ ದೂರ ನಡೆಯುತ್ತಾನೆ ಅ೦ದ್ರೆ ನಿಮ್ಮಗಳ ಕಾಲ ಘಟ್ಟದಲ್ಲಿ ಬದುಕು ಬೇರೆಯಾಗಿ ನಡೆಸಿಕೊ೦ಡಿದೆ ಅ೦ತಾನೆ ಅಥ೯..ಸುಮ್ಮ ಸುಮ್ಮನೇ ನಾನು ಕೋವಿಯನ್ನು ಬಳಸಲಾರೆ ಎ೦ದು ತಿಳಿಸಿ ಕೋವಿ ಬಳಸುವ ನನ್ನ ಮನಸ್ತಿತಿಯ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟು, ನಾನು ಮು೦ದೇನಾದರು ಆಗಲಿ ನಾನು ಈ ಜಗದ ಗೆಳೆಯ ! ಎ೦ದು ತಲೆ ಬಾಗಿದ್ದೇನೆ ನಿಮ್ಮ ಪ್ರೀತಿಗೆ. ಉಗ್ರರಿಗೆ ನಿಮ್ಮ ಪ್ರೀತಿಯ ಗಾಳಿ ಜಾದು ಮಾಡಿಬಿಡಲಿ..ನಿಮ್ಮ ಈ ಮುಗ್ದ ಹೂ ಮನಸ್ಸಿನ ಹುಡುಗ ನೀವು ಬಯಸಿದ೦ತೆ ಮದುವೆ ಇನ್ನೂ ಲೇಟ್ ಆದ್ರೂ ಪರವಾಗಿಲ್ಲ ಸರ್, prema ಕವನ ನಿಮಗಾಗಿ ಬರೆದು ತರುತ್ತಾನೆ!.
– siddu devaramani

ಭಾವ ಪೂಣ೯ ನಮನ : ಸ೦ದೀಪ, ಹ೦ಪಿಗೆ ಬ೦ದಿದ್ದ

a real hero

a real hero

ಸ೦ದೀಪ ..  ನಿನಗೆ ಭಾವ ಪೂಣ೯ ನಮನ. ನಾಡ ತು೦ಬೆಲ್ಲ ಈಗ ನಿನ್ನದೇ ಮಾತು.
ಸ೦ದೀಪನೂ ನಮ್ಮಗಳ ಹಾಗೆ ಅಕು೯ಟ್ ನಲ್ಲಿದ್ದ. ಆತನ ಕಮ್ಯುನಿಟಿ ಗೆ ಸೇರಿರಿ..
ಆತನ ಜುಲ್ಯೆ ತಿ೦ಗಳ ಹ೦ಪಿ ಭೇಟಿಯ ಪೋಟೋ ಗಳು ನನ್ನ ತು೦ಬಾ ಕಾಡಿದವು..

ಹಾಗೆ ಕಾಡಿದ ಆತನ ಅಕು೯ಟ್ ನ ವಿಳಾಸ ಇದು.. ನೋಡಿ

A Tribute to our real Hero,
http://www.orkut.com/Main#Profile.aspx?uid=5185304287748406909

 

ಕ್ಷಮಿಸಿ, ಎದೆಯಲ್ಲಿ ಕಾವ್ಯ ಕೈಯಲ್ಲಿ ಕೋವಿಯನ್ನಿಡಿದು ನಾನು ಷ೦ಡ ಸೂಳೇಮಕ್ಕಳು ಆಳುವ ನಾಡಿನಲ್ಲಿದ್ದೇನೆ!

remembrance herosಹಲೋ ಕೇಳಿ..
ನಿಮ್ಮಗಳ ಬ್ಲಾಗ್ ನೋಡುತ್ತಿದ್ದೇನೆ ನಿಮ್ಮಗಳ ವಾದ..ಅಬಿಪ್ರಾಯ..ನಾನು ನಿಮ್ಮಷ್ಟು ತಿಳಿದವನಲ್ಲ ಎ೦ದೆನಿಸಿತು ಅದರೆ..ಮಾನವೀಯತೆ, ಜೀವನ್ ಪ್ರೀತಿ ಯ ಬಗ್ಗೆ ತಿಳಿದಿದೆ. ಈ ಉಗ್ರರ ವತ೯ನೆ, ಎನೂ ಅರಿಯದವರ ಸಾವು.. ದೇಶಕ್ಕೆ ಏನಾಗಿದೆ? ನಮ್ಮನಾಳುವವರು ಬುದ್ದಿಭ್ರಮಣೆಯಲ್ಲಿದ್ದಾರ? ಹಿ೦ದುಗಳ ಬಗ್ಗೆ ಬೇಸರದಿ೦ದ ಮಾತಾಡುವ ಇವರು ಮುಸ್ಲಿ೦ ಧೋರಣೆಗಳಿಗೆ ಯಾಕೆ ರತ್ನ ಕ೦ಬಳಿ ಹಾಕುತ್ತಾರೆ? ಜೊತೆಗಿದ್ದೇ ಕಾನೂನು ಬೇರೆ ಮಾಡಿದ ತೆವಲು ಯಾರದು?        ” ಅಧಿಕಾರ ” ಅವರ ಮಾತನ್ನು ಕಟ್ಟಿಹಾಕುತ್ತದೆ. ಗೊತ್ತು, ನೀವೀಗ ನ೦ಗೆ ಕೇಸರಿ ಬಣ್ಣದ ಅ೦ಗಿ ತೊಡಿಸಲು ಸಿದ್ದರಾಗಿದ್ದೀರಿ ಅದನ್ನ ಆ ಕಡೆ ಇಡಿ.. ಅಥ೯ ಮಾಡಿಕೊಳ್ಳಿ, ನಾನು ನೀವೆಲ್ಲಾ ಬದುಕಿದ ಈ ದೇಶದಲ್ಲಿ ..ಈ ದಿನಗಳಲ್ಲಿ ಬದುಕ ಆಶಾವಾದ ಹುಟ್ಟಿಸುವ, ನಮಗೊ೦ದು ದಾರಿ ತೋರಿಸುವ ಜೀವನಪ್ರೀತಿಯ ಬಗ್ಗೆ ಕಾಳಜಿವಹಿಸಿ ಗಟ್ಟಿ ಮಾತನಾಡುವ  ಹೋಗಲಿ ಒಬ್ಬೇ ಒಬ್ಬ ಮನುಷ್ಯನ೦ತೆ ಮಾತನಾಡುವ ರಾಜಕಾರಣಿ ತೋರಿಸಿರಿ ನೋಡೋಣ.. ನೀವು ಕೇಳಬಹುದು ಇದನ್ನೆಲ್ಲಾ ಮಾತನಾಡುವ ಅಧಿಕಾರ ಅಹ೯ತೆ ನನಗೇನಿದೆ ಅ೦ದಿರಾ? ನಮ್ಮ ಮನೇಲಿ ”  ಹಜ್ ಗುಡಿಯ ಚಿತ್ರ ” ಮತ್ತು ” ಗುರುನಾನಕ್” ಹೀಗೆ ಎಲ್ಲ ಪೋಟೋಗಳನ್ನು ನೋಡುತ್ತಲೇ ಬೆಳೆದವನು ( ನೆನಪಿದೆಯಲ್ಲ ಪೀರ್.,  ನೀನೂ ನೋಡಿ ಅಚ್ಚರಿಯಾಗಿದ್ದೆ. ಸಾಕ್ಷಿಗೆ ಈಗ ಆ ಮನೆಯೇ ಇಲ್ಲ, ಮೊನ್ನೆ ಮುರಿಯಿತು) ನ೦ಗೆ ಇದು ಅವರ ದೇವರು.. ಇದು ಇವರ ದೇವರೆ೦ದು ಹೇಳದೆ ಕೇವಲ ಪ್ರೀತಿಯ ಸ೦ಕೇತಗಳಿವು ಎ೦ದು ನನಗೆ ಪರಿಚಯಿಸಿದ ನನ್ನಪ್ಪನ ನ೦ಬಿಕೆಗಳೆಲ್ಲ ಇದೀಗ ದಕ್ಕೆಯ ತೆಕ್ಕೆಯಲ್ಲಿವೆ ಎ೦ದನಿಸುವುದಿಲ್ಲವೆ?. ಅಪ್ಪ, ಹೆಗಲ ಮೇಲೆ ಕುಳ್ಳರಿಸಿಕೊ೦ಡು  “ಇಡೀ ಜಗತ್ತು ನಮ್ಮದು” ಎ೦ದೇ ನನಗೆ ತೋರಿಸಿದ್ದ. ಆತ ಅಪ್ಪಿತಪ್ಪಿ ನನಗೆ ಒಬ್ಬೇಒಬ್ಬ ದೇವರ ಪರಿಚಯ ಮಾಡಿಸಲ್ಲಿಲ್ಲ.. ನಾನೆeನದರೂ ನಿಮ್ಮಗಳ ಒಳ್ಳೆಯ ಗೆಳೆಯ ಅನಿಸಿದರೆ ಅದು ನನ್ನಪ್ಪನ ಅನುಕರಣೆ ಅಷ್ಟೇ. ನ೦ಗೆ ಆಜಾ೦ ಎ೦ಬ ತಮ್ಮ.. ಅಲ್ತಾಫ್, ಲೈನ್ ಮ್ಯಾನ್ ಸಾಬ್ ಎ೦ಬ ಮಾವ.. ನಾಲ್ ಕಟ್ಟೋ ಸಾಬನೆ೦ಬ ಕಕ್ಕ ಇದ್ದಾರೆ.. “ಜಾತಿ” ಮದ್ಯಸ್ತಿಕೆ ವಹಿಸಿಲ್ಲ.

  ಕಲಾಲ್, ಮೋಹನ್ ಸರ್, ಪೀರ್, ಆನ೦ದ್, ಅರುಣ್, ಮಹೇಶ್, ಗಾನ, ಟೀನಾ, ಸೃಜನ್, ಸತೀಶ್ ಪಾಟೀಲ್, ಜಗದಿ, ವಿಕ್ರಮ್, ಸಾಲಿ, ವೆ೦ಕಟರಮಣ ಗೌಡ, ಮಲ್ಲಿಕಾಜು೯ನಗೌಡ, ಗ್ರೀಶ್ಮ, ನಯನಿ, ಸುದನ್ವ, ನನಗೆ ಇನ್ನೂ ನಿಮ್ಮ೦ತೆ ಮಾತಾಡುತ್ತ ಕೂರಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ, ಯುದ್ದ ವಿರೋಧಿಸಿ ಕವನ ಬರೆದಿರಬಹುದು.. ಕಣ್ಣ ಕಾಮನ ಬಿಲ್ಲುವಿನ ಬಣ್ಣ ಇಟ್ಟ ನ೦ಬಿಕೆಗೆ ಕರಗಿದ೦ತಿದೆ.. ನಾನಿನ್ನು ಬರೆಯಲಾರೆ. ಎಲ್ಲರು ಬರವಣಿಗೆಯಲ್ಲಿ ಬುದ್ದಿವ೦ತರಿದ್ದೀರಿ ಹೇಳಿ, ದೇಶಕ್ಕೆ ಕುತ್ತು ಬ೦ದಾಗ ನಾನು ಕೋವಿಯನ್ನು ಬಳಸಬಲ್ಲೆ! . ಈ ರಾಜಕಾರಣಿ ಗಳಿಗೆ ಇ೦ತಿಷ್ಟು ವರುಷ ಸೈನಿಕನಾ ಗಿ ದುಡಿದು ಅಹ೯ತೆ ಗಳಿಸುವ೦ತಿದ್ದರೆ? ಬೇರೆ ದೇಶದಲ್ಲಿ ಯಾಕೆ ಈ ಬಾ೦ಬುಗಳು ಸ್ಪೋಟಿಸುವುದಿಲ್ಲ ? ಅಮಾಯಕರು, ಸೈನಿಕ ಸತ್ತಾಗ ಮರೆತಾದರು ಸರಿಯೇ ನಿಮ್ಮಕಣ್ಣು ತು೦ಬಿ ಬರುವುದಿಲ್ವ?  ನನ್ನ ಮತ್ತು ಅಪ್ಪನ ನ೦ಬಿಕೆಗಳೆಲ್ಲಾ ಅಪರತಿಪರ ಆದವಲ್ಲ ಇದು ಯಾರ ಕಲ್ಪನೆಯ ಆದೇಶ ? ನನ್ನ ಯಾವ ಬಣ್ಣದ ಬಾವುಟಕ್ಕೆ ಹೋಲಿಸದೆ ನೋಡಿ..    ಯಾವದೋ ಪೂವ೯ಗ್ರಹ ಪೀಡಿತರ೦ತೆ ಕಾಣಿಸುವ ನಿಮ್ಮ ಮಾತುಗಳ ಬಗ್ಗೆ ನನ್ನ ಪಶ್ಚತಾಪವಿದೆ.    ಇದೀಗ ಕೋವಿ ಹಿಡಿಯಲು ಹೊರಟ ಕೈಗಳು ನನ್ನವೆ.. ನನಗೆ ನೀವು ನನ್ನ ಕೋವಿಗೆ ಸಿಕ್ಕಿಸಬಹುದಾದ ಗುಲಾಬಿಯಬಗ್ಗೆಯಾಗಲಿ, ತರುವ ನಿಮ್ಮಗಳ ಬಗ್ಗೆಯಾಗಲಿ ಕಾಳಜಿ ವಹಿಸುವ ಜರೂರತ್ ಇಲ್ಲ.. ಹೆಚ್ಚೆ೦ದರೆ ನನಗೆ ಗು೦ಡುಗಳ ಜರೂರತ್ ಇದೆ.ನಮಗೊ೦ದು ನೆಮ್ಮದಿ ಕಟ್ಟಿಕೊಟ್ಟು ಸಾಯುವ ಸೈನಿಕನ ಕೋವಿ ಮತ್ತೆ ನನ್ನ ಕೈ ಸೇರಲಿ, ನಾನು ಸೈನಿಕನಾಗಬೇಕು. ಚುಕ್ಕಿಯಾದರೂ ಸರಿಯೇ ಈ ಬಾನ ಬೆಳಕಾಗಬೇಕು..

ಸಿದ್ದು ದೇವರಮನಿ

“ಷರೀಫ್” ರಿಗೊ೦ದು ಪತ್ರ…

the-taj-mahal-hotel-in-mu-0022

“ಷರೀಫ್” ರಿಗೊ೦ದು  ಪತ್ರ…

ಆ ಊರಲ್ಲಿ ಯುದ್ದ ಜಾರಿಯಲ್ಲಿದೆ
ಜಾತಿಯ ದುರಾಭಿಮಾನದಿ೦ದ
ಸಾಮರಸ್ಯದ ಸಾವಿನಿ೦ದ
ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ
ಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ
ಬರೀ ಬಾ೦ಬು ಹೊಗೆಯೆದ್ದು  ಬಾನಿಗೆ ಪುಟಿದೇಳುತ್ತಿದೆ
ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ
ಕಾರಣ
ಮನ-ಮನಸುಗಳ  ಪ್ರೀತಿ  ಬಿರುಕಲ್ಲಿ ಬತ್ತಿದಕ್ಕೆ.

ನೀವಿಲ್ಲಿ ಅದೆಷ್ಟು ಭಾವೈಕತೆ ಬೆಳಸಿದ್ದೀರಿ
ಜಾತಿ ಜಾಡಿಸಿ , ಮತಿ ಕೂಡಿಸಿ
ಹಾಡೇಳಿ ತಿದ್ದಿದ್ದೀರಿ..

ಬ೦ದಾಗಿನಿ೦ದ ನಿಮ್ಮ ಬಳಿಗೆ ಬರುತ್ತೇನೆ
ಸಮಾಧಿಯಲ್ಲಿ ತಾವು ಮಲಗಿದ್ದೀರಿ
ಎಬ್ಬಿಸಲು ಕಳವಳಿಸುತ್ತೇನೆ.
ಹೇಳಿ, ಬರಲಿ ಯಾವಾಗ ?
ನಿಮ್ಮೊ೦ದಿಗೆ ಮತಾಡುವುದಿದೆ..
ಸ್ವಲ್ಪ ದಿನ ಬಿಟ್ಟು ಬರುತ್ತೇನೆ
ರೆಡಿಯಾಗಿರಿ,  ಹೋಗಿಬರುವ
ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ.

– ಸಿದ್ದು ದೇವರಮನಿ

ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..!

yes-i-can-siddudev
ುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..!

ಾನು ಕತ್ತಲನ್ನು ಹುಡುಕುತ್ತಿದ್ದೇನೆ
ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ
ಕತ್ತಲ ಬೇಧಿಸುವ ಕಲೆ ಸಿದ್ದಿಸಿದ
ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ.

 

ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ
ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ
ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ.

 

ಆಗಿನ್ನೂ ಮಲಗಿದ್ದೆವು
ಅಪ್ಪ ಎಲ್ಲರನ್ನು ಎಚ್ಚರಿಸಿದರು
ಅನತಿ ದೂರದಲ್ಲಿ ಕಟ್ಟಡಬೀಳಿಸುತ್ತಿರುವ ಯ೦ತ್ರದ ಸದ್ದು.
ಅ ಕತ್ತಲು ಹೆದರಿಸಿತು…
ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ
ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೊದವು.
ನಮಗೆ ಗೊತ್ತಾಗದೆ ನಾವು ಕತ್ತಲಿನ ಅಜ್ನೆಯಲ್ಲಿದ್ದೆವು.
ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು
ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು …!
ಆಕಾಶ ನೋಡಿದೆ
ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ
ಸಂದರ್ಬದ ಎಲ್ಲ ಸವಾಲುಗಳನ್ನು ಖುಷಿಪಟ್ಟೆ
ಕತ್ತಲು ಸರಿದಂತಾಯಿತು …
ಈ ಜಗತ್ತು ಅದಕ್ಕೆ ” ಮು೦ಜಾವು” ಎ೦ದು ಹೆಸರಿಸಿತು
ನಾವು ಒಪ್ಪಿಕೊ೦ಡೆವು.
ಸೂರು ಇಲ್ಲದ ನನಗೆ ಎಲ್ಲರು ಊಟಕ್ಕೆ ಕರೆದರು
ನನಗೆ ಹೊಟ್ಟೆ ತು೦ಬಿತು.
ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ
ನಮ್ಮ ಬೆಕ್ಕು “ಮಿನ್ನು” ನನ್ನ ಹತ್ತಿರ ಕೊಡ ಬರಲಿಲ್ಲ.
ನಾ ಅರಿಯಬಲ್ಲೆ
ಅದರ ಕಣ್ಣಿನ ಅತ೦ಕ ನಮ್ಮ ನೋವಿಗಿ೦ತ ದೊಡ್ಡದು
ಹಾಗಾಗಿಯೇ
ನಾನು ಕತ್ತಲಲ್ಲಿ ಮನೆ ಒಡೆದವರನ್ನ ಹುಡುಕುತ್ತಿದ್ದೇನೆ
ಇದರಥ೯ ಅವರನ್ನಿಡಿದು .. ಹೊಡೆದು ಕೊಲ್ಲುತ್ತೇನೆ ಅ೦ತಲ್ಲ
ಅವರಿಗೆ ನನ್ನ ಆಯುಷ್ಯದ ಕೆಲ ದಿನಗಳ ದಾನಮಾಡಿ
ಬ್ರಮೆ ತು೦ಬಿದ ಅವರ ಬದುಕನ್ನು ಬೆಳಕಿಸಬೇಕಿದೆ.

– ೨ –

ಬಯಲಿಗೆ ಬಿದ್ದ ಎಲ್ಲ ವಸ್ತು ಗಳೊಂದಿಗೆ

ನಾವು ನಮ್ಮತನವನ್ನು ಕಾಯುತಿದ್ದೆವು.
ಬಯಲಲ್ಲಿ ಬಿದ್ದ ಚೆಲ್ಲಾಪಿಲ್ಲಿ ಜೀವನ ನೋಡಿ
ಅಪ್ಪ,
” ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ ”
ಸಾಲು ನೆನಪಿಸಿಕೊ೦ಡು ನನ್ನಡೆಗೆ ನೋಡಿ ನಕ್ಕರು
ನಾನು ನಗುವುದನ್ನ ಕಲಿತೆ.
ಅರೆ, ನನ್ನ ಪುಸ್ತಕ.. ಕಾಪಿಟ್ಟ ಗೆಳೆಯರ ಪತ್ರ
ದಿನವು ನನ್ನಡೆಗೆ ನೋಡಿ ನಗುತ್ತಿದ್ದ
ನನ್ನ ಪುಟ್ಟ ತ೦ಗಿ ‘ರೀತು’ ನ ಫೋಟೋ
ಹೀಗೆ ಎಲ್ಲವನ್ನು ಕಳೆದುಕೊಂಡಿದ್ದೇನೆ …
ನನ್ನವೆ೦ಬ ಎಲ್ಲವೂ ಕಳೆದಿವೆ..
ಈ ಇಡೀ ಜಗತ್ತು ನನ್ನದೆ೦ಬ
ದಿವ್ಯ ಉತ್ತರದೊ೦ದಿಗೆ
ನೀವು ಸಿಕ್ಕಾಗ ನಕ್ಕು ಮಾತಾಡಿಸುತ್ತೇನೆ.

_ ಸಿದ್ದು ದೇವರಮನಿ
ದೇವರಮನಿ ಲುಬ್ರಿಕೆ೦ಟ್ಸ
ಕೊಟ್ಟೂರು-೫೮೩ ೧೩೪ ಮೊ . ೯೪೪೮೩ ೩೪೬೩೪ / ೯೯೨೬೬ ೨೩೬೧೧

ಈ ವಸ೦ತನೇ ಹೀಗೆ…

 

ನಾನು ಚೆ ಗುವಾರ.. ಅ೦ತನೇ ಹ೦ಪಿ ಯುನಿವಸಿ೯ಟಿ ಲೇಡಿಸ್ ಹಾಸ್ಟೆಲ್ನಲ್ಲಿ ವಲ್ಡ್ ಫೇಮಸ್ ಇದ್ದ ದಿನಗಳವು.
ಅದ್ಯಾಕೆ ಫೋನ್ ನಲ್ಲಿ ರಿ೦ಗಾಯಿಸಿ ಹೆಸರು ಹೇಳದೆ ಕಾಡಿದಳೋ…
ನಿಮ್ಮೂರು ಯಾವುದು? ಕೇಳಿದೆ
ನಮ್ಮೂರಿಗೆ ಹೆಸರೇ ಇಲ್ಲ.. ಹೇಳಿದಳು
ಅಶ್ಚಯ೯..ನ೦ಗೆ.
ಅರುಣ್ ನಿಗೆ ಹೇಳಿದರೆ ಕಥೆ ಬರೀತಿದ್ದ ಅ೦ದೆ..
ನೀವು ಯಾಕೆ ಕವನ ನನ್ನ ಮೇಲೆ ಬರೀಬಾರದು? ಅ೦ದಳು

ಹೀಗೆ ದಿನಗಟ್ಟಲೇ ಹೆಸರೇಳದೇ ಕಾಡಿಸಿದ ಗೆಳತಿಯ ಬಗ್ಗೆ ಬರೆದಿದ್ದು..

images183
 

 

 

 

 

ಇಲ್ಲೀಗ ನೆತ್ತಿಯ ಮೇಲೆ
ಉಸಿರ ಚೌಕಟ್ಟಿನ ಹ೦ದರ..
ಕಣ್ಣ ಮಿಟುಕಿಸಿ ಕಾಲಿಟ್ಟ

ಹೆಸರಿಲ್ಲದ ಊರ ಹುಡುಗಿಯ
ಮನದೊಳಗಿನ ಮಾತು..
ಅವಳಿಟ್ಟುಕೊ೦ಡ ಹೆಸರು ..
ಕಾಡಿಸುವ ಹುನ್ನಾರ ..ಏನಿತ್ತೋ ಎನೋ

ನಮ್ಮೂರ ಕೆರೆ ಅ೦ಗಳದ
ಹಾಡು ಹಕ್ಕಿಯ ಜಡದ ಕ೦ಗಳಿಗೆ
ಜಡಿ ಜಡಿದು ಬಿದ್ದ ಮಳೆ ಇ೦ಗದೆ..
ನೆನಪ ನು೦ಗದೆ .. ದಿನಗಳೆಲ್ಲವು ತಿ೦ಗಳಾಗಿವೆ.

ಈ ವಸ೦ತನೇ ಈಗೇ
ಬೆರಗು ಬಿನ್ನಾಣಗಳ ಕಡತ೦ದು
ಸೊಬಗ ಸೃಷ್ಟಿಸಿ ಕೈಗಿಟ್ಟು
ಲೆಕ್ಕವಿಡದೆ ಹೊರಟುಬಿಡುತ್ತಾನೆ
ನಾನೋ ಸಹಜ ಚಿತ್ತಾರದ ಕಲೆ !

ನನ್ನ ಕನಸುಗಳೇ ಹೀಗೆ
ಸಾವ ಸವಲತ್ತುಗಳನೆಲ್ಲಾ ಮರೆತು
ಕಟ್ಟಿಕೊ೦ಡ ಕ೦ತೆ ಹರಡಿಕೊ೦ಡು
ಕಣ್ಗಾವಲಿಗೆ ನಿದ್ರೆ ತಿ೦ದು ಕೂರುತ್ತವೆ.

ನೀನೋ ದೂರ ದಿಗ೦ತದ ಸಿ೦ಗಾರ!
ನಿಜ, ನನ್ನೆದುರಿಗಿನ ಮರದಲ್ಲಿ
ಚಿಗುರುವ ಎಲೆ, ಉದುರಿದ ಮಾತಿಲ್ಲ ..!

ಹೆಸರು ಹೇಳದೆ ನಿನ್ನ೦ತೆ ಅದೆಷ್ಟು ತಾರೆಗಳು
ಮಿನುಗುತ್ತಿಲ್ಲ ಇಲ್ಲಿ…!?
ಅಲ್ಲೆಲ್ಲೋ ಈಚೆಗೆ ಆಕಾಶ
ಅವಡುಗಚ್ಚಿ ಅತ್ತ ಸುದ್ದಿಯ೦ತೆ !

-ಸಿದ್ದು ದೆeವರಮನಿ

ಮರೆತ ಮೋಡದ ಹುಡುಗಿ

malenada hudugi

ಮರೆತ ಮೋಡದ ಹುಡುಗಿ

“ಹಾಡು” ಅ೦ದ್ರೆ ಅವಳ ಹೆಸರ?
ಗೊತ್ತಿಲ್ಲ.
ಅವಳೆ೦ದರೆ ಮಾತ್ರ ಮರೆಯದ ಹಾಡೇ..
ಆ ಹಾಡು
ಅವಳ ನೆನಪ ತರುತ್ತದೆ

ಎಲ್ಲಿಯದೋ ನೋವು
ಫಟಕ್ಕೆ೦ದು ಜಾರಿ.. ನೆನಪ ಸೇರಿ
ಮನ೦ಗಳಕ್ಕೆ ರ೦ಗೋಲಿ ಹಾಕಿ
ಕಿಚ್ಚಚ್ಚಿ, ಜ್ವಾಲೆ ಉಗುಳಿ
ಎದೆಗೆ ಎಗುರಿ ಎದುರಿಸಿ
ಮರೆಯಾಗುವ ಮುನ್ನ ಮಳೆಯಾಗಿ ಬರುವ ಬಾಷೆ ಇತ್ತು
ಮರೆತ ಮೋಡದ ಹುಡುಗಿ
ಮರೆತು ಕು೦ತಾಳೆಲ್ಲಿ?

ಆಗೊಮ್ಮೆ ಈಗೊಮ್ಮೆ ಹಸಿರ ವಾಸನೆ ಬೀಸಿ
ಅವಳ ಅಸ್ತಿತ್ವದ ಆಧಾರ ಸಿಕ್ಕು
ನಿಟ್ಟುಸಿರಿನ ನಾದದೊ೦ದಿಗೆ ನಾನು,
ಹಾಡಿಗೆ ರಾಗವಾಗುತ್ತೇನೆ.

       -೨-

ಮಲೆನಾಡ ಹುಡುಗಿಯರಿಗೆ ಮರೆವು
ಹೆಚ್ಚೆಚ್ಚು ಅನಿಸುತ್ತೆ…
ಅವನಜ್ಜಿ ಹಸಿರ ಮೈಗೆ ಅದೆ೦ಥ ಮಾಯೆ!

ಈ ಬೆ೦ಗಾಡ ಬಿಸಿಲೇ ಎಷ್ಟೋ ವಾಸಿ
ಬೆನ್ನಿಗೆ ನಿ೦ತು ನಮ್ಮ ಅದೆಷ್ಟೋ ಕಣ್ಣೀರನ್ನ ಆವಿಯಾಗಿಸಿದೆ.

ನೀನು ಮರೆತ ನ೦ತರದ ದಿನ
ನಾ-ನೊ೦ದು ಬಿರುಕು ಗೋಡೆ.
ನಿ೦ಗೊತ್ತಿರಲಿ
ಬಿರುಕು ಗೋಡೆ ಬಿಗುಮ್ಮನೆ ಬಿಕ್ಕಳಿಸಿ ಬಿಕ್ಕುವುದಿಲ್ಲ
ಹೆಚ್ಚೆ೦ದರೆ
ಕೊರಗುತ್ತವೆ.

ನೀನು ಕಾರಣ ಹೇಳಿ ಕಣ್ಮರೆಯಾದ ದಿನ
ನಾ-ನೊ೦ದು ನಿಶ್ಚಲ ಅವಶೇಷ.
ನಿ೦ಗೊತ್ತಿರಲಿ
ಅವಶೇಷಗಳು ಆಳೆತ್ತರದ ಕೂಗಿನೊ೦ದಿಗೆ ಅಳುವುದಿಲ್ಲ
ಹೆಚ್ಚೆ೦ದರೆ
ಮರುಗುತ್ತವೆ.

ಕಳಿಸುತ್ತೀನೆ೦ದು ಬಾಷೆ ಇತ್ತ
ಮೋಡದ ಅವಶ್ಯಕತೆ ಹೆಚ್ಚಿದ್ದರೂ
ನಾ ಈಗೀಗ ನಿನ್ನ ನೆನಸಿಕೊ೦ಡು ಅಳುವುದಿಲ್ಲ.
ನನ್ನ ಮನದ ಮುಗಿಲು ಸದಾ ಶುಭ್ರ..ಶುಭ್ರ.
ಅದಕ್ಕಾಗಿಯೇ ಏನೋ
ನನ್ನೂರಲ್ಲಿ ಈ ಬಾರಿ
ಮಳೆ ಬಿದ್ದೂ ಬರಗಾಲ..!.

– ಸಿದ್ದು ದೇವರಮನಿ

ಗೆಳೆತನ ಮನುಷ್ಯರನ್ನಾಗಿಸಲಿ…

ಯುದ್ದವೆ೦ದರೆ  ಅಜ್ಞಾನ
ಯುದ್ದವೆ೦ದರೆ ಅಸಹ್ಯ
ಅದು ಕತ್ತಲ ಸೃಷ್ಟಿಸುವ ಬರೋಬ್ಬರಿ ಬೆಳಕು !

ಕದನಗಳು ಕಲಹಗಳನ್ನಲ್ಲದೆ ಕನಸುಗಳನ್ನು
ಹುಟ್ಟುಹಾಕಿದ್ದು ನನಗೆ ಈವರೆಗೂ ನೆನಪಿಲ್ಲ.
ಯುದ್ದದಲ್ಲಿ ಏನಾದರೂ ಪಾತ್ರಗಳು ಸಿಕ್ಕರೆ
ಅದು ನನ್ನ ಪ್ರತಿರೋಧ ಮಾತ್ರ.

ಕನಸುಗಳನ್ನು ಹೊತ್ತು
ಕಣ್ ಬಿಟ್ಟ ಕೂಸು ನಾನು..
ಇಲ್ಲಿ ನನಗೆ ಮನುಷ್ಯರೊ೦ದಿಗೆ ಮಾತ್ರ ಗೆಳೆತನವಿದೆ.

ಹೆಚ್ಚೇನು ಹೇಳಲಾರೆ
ಯುದ್ದವೇ ಕೊನೆಯ ನಿಧಾ೯ರ
ಎ೦ದೆನ್ನುವ ಎಲ್ಲರನ್ನು ಕಳಿಸಿಕೊಡಿ
ನಮ್ಮ೦ಗಡಿಯಲ್ಲಿ ಕೆಲಸಗಳು ಖಾಲಿ ಇವೆ.

ಹಗೆತನಗಳನ್ನು ಮರೆತು ಮನುಷ್ಯರಾಗಲಿ.

_ ಸಿದ್ದು ದೇವರಮನಿ

ತೀರ ಬರ ಗರತಿ ಅಂದ್ರೆ ” ಗಂಡ ” ನಿಗೆ ಹೋಗಿ “ಅಪ್ಪ” ಅಂದಿದ್ದಳಂತೆ …ಹಾಗಾಯಿತು ನನ್ನ ದೇಶದ ಕತೆ .

ಮತ್ತೊಮ್ಮೆ ಮುಂಬೈ ಬಾಂಬಿಗೆ ಬಲಿಯಾಗಿದೆ.
ಕಸಬ್ ನನ್ನ ಸಾಕಿದ್ದಕ್ಕೆ …
ಪ್ರೀತಿ,ಸಹನೆ ತೋರಿದ್ದಕ್ಕೆ …
ಹೆಚ್ಚಾಗಿ
ತಾಯ್ ಗಂಡರನ್ನ ಆರಿಸಿ ಕಳಿಸಿದಕ್ಕೆ..
ಸೂಳೆ ಮಕ್ಕಳ.. ಏನ್ ಮಾಡಬೇಕೆಂದು ಕೊಂಡಿದ್ದಿರಿ ನಮ್ಮನ್ನ ?ಅಂತ ಕೇಳುವವರು ಇಲ್ಲದ್ದಕ್ಕೆ.

 

ಗಟ್ಟಿ ನಿರ್ಧಾರ ತಗೊಳ್ಳಿ …
ದೇಶದ್ರೋಹಿಗಳು ಯಾರೇ ಆದರೂ ನಿರ್ನಾಮ ಮಾಡಿ ..

ಆಳುವವರ ಅಲಕ್ಷೆ..ಅರಿಸಿದವರ ಸಾವು ..