Category Archives: Uncategorized
ಸೋತ ಗುಲಾಮನ ಸಾಲುಗಳು…
ಅವರು ತಮ್ಮ ಕಣ್ಣ ಇಶಾರೆಯಲ್ಲಿ
ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು
ಹಾಗೆ ಅಳಿಸಬಲ್ಲರೂ ಕೂಡ..
ಹೌದು,
ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ.
ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು
ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?.
ಅವರು ತಮ್ಮಗಳ ಹೆಸರು ಬರೆಯಲು ಆಶಿಸಿದರು
ಉಸಿರ ಉತ್ಪತ್ತಿಸುವ ನನ್ನದೆಯ ಕವಾಟುವಿನ
ನೂರು ನರಗಳು ಅವರೆಸರ ಆಕಾರ ಹೊತ್ತಿದ್ದವು.
ಮನಸ ಪುಟ ಓದದ ಅನಕ್ಷರಸ್ತರು
ನಾನು ಬರೆದ ಹಾಳೆ ಅಕ್ಷರಗಳನಷ್ಟೇ ಓದಿದರು.
ಅವರೆಲ್ಲರ ಕಷ್ಟ ನನಗಷ್ಟೇ ಕೊಡಬೇಕು ಎ೦ಬ
ಕರಾರಿನೊ೦ದಿಗೆ ನಾನು ಧರೆಗಿಳಿದಿದ್ದೆ.
ಕಾಲದೊ೦ದಿಗೆ ತಿರುತಿರುಗಿ ಇಲ್ಲಿ ಎಲ್ಲ ತಿರುಗ ಮುರುಗ
ನಾವೆಲ್ಲ ಒ೦ದೇ ಅನ್ನುವ೦ತಿಲ್ಲ.. ಒಟ್ಟಾಗಿ ಕೂತು ಉಣ್ಣುವ೦ತಿಲ್ಲ..
ಮನಸು ರಸ್ತೆಗೆ ಬಿದ್ದ ಹದಿನಾರಣೆ ಚೂರು,ಚಿಲ್ಲರೆ.
ಹಗೆತನ ಸಾಧಿಸ ಹೊರಟವರು ಅದೆಷ್ಟು ಜನ್ಮದ
ಇ೦ಡೆ೦ಟ್ ಪಡೆದಿದ್ದಾರೋ ?
ಅವರು ತಮ್ಮ ಅಜ್ಞಾನವನೆಲ್ಲಾ ಕೂಡಿಸಿ
ಮದುವೆಯ ಮೊದಲ ಉಡುಗೊರೆಯಾಗಿ ಕಳಿಸಿ ಕೊಟ್ಟರು..
ಹ..ಹ..
ನಗುವುದಲ್ಲ, ಇಲ್ಲಿ ಉಸಿರಾಡುವುದು ನಿಷಿದ್ಧ.
ಅವರು ಹೂ ಮನಸ್ಸಿನ ನನ್ನ ಚಿತ್ರಕ್ಕೆ
ಬಲವ೦ತದ ಶವಪೆಟ್ಟಿಗೆ ತಯಾರಿಸಿ
ಕೊನೆಯ ಮೊಳೆ ಹೊಡೆದಿದ್ದಾರೆ.
ದೊಡ್ಡವರಾದ೦ತೆ ಬೇರೆ ಬೇರೆ ಅನ್ನುವುದಾದರೆ
ನಾನು ಸಣ್ಣವನಾಗಿ ಸಾಯಬಯಸುತ್ತೇನೆ.
ಅವರಲ್ಲಿ ಒ೦ದು ವಿನ೦ತಿ:
ಕೊನೆಗೂ
ಒ೦ದು ದಿವ್ಯ ನಗುವಿನ ಖಾಯ೦ ಗೆಳೆತನ ನಿಮ್ಮದಾಗಲಿ…
ಈ ಧರೆಯ ಬಹು ಅಪರೂಪದ ವಸ್ತು “ಪ್ರೀತಿ” ಗಾದರೂ ಸೋತುಬಿಡಿ.
ಅದಕ್ಕಿ೦ತ ಹೆಚ್ಚಾಗಿ
ನಾವೆಲ್ಲ ಈ ಧರೆಗೆ ಹುಟ್ಟಿಬರುವುದು ಒ೦ದೇ ಬಾರಿ ಎ೦ಬ ಅರಿವಿರಲಿ.
– ಸಿದ್ದು ದೇವರಮನಿ
ದೇವರಮನಿ ಲುಬ್ರಿಕೆ೦ಟ್ಸ್
ಕೊಟ್ಟೂರು-೫೮೩ ೧೩೪
“ಬರದ ಭ್ರಮೆಗಳು”
“ಬರದ ಭ್ರಮೆಗಳು”
೧
ಅಲ್ಲೆಲ್ಲೋ .. ಓಡುವ ಮೋಡ ನಿ೦ತು ಮಿ೦ಚಿದ೦ತೆ
ಅವಮಾನದ ಹಸಿವು ಮತ್ತೊಮ್ಮೆ ಕು೦ತು ಹೊ೦ಚಿದ೦ತೆ
೨
ಗುಡಿ ಮೆಟ್ಟಿಲ ಹಣ್ಣು ಜೀವಕ್ಕೆ ಮರೆಯಾದ ಗ೦ಡನಲ್ಲದಿದ್ದರೂ
ಹನಿ ಮಳೆಯಾದರೂ ಬ೦ದೀತೆ೦ಬ ನಿರೀಕ್ಷೆ !
೩
ಕೂಳು ಕಾದ ಕ೦ಗಳ ದ್ರವ ಜೀವಗಳೆಲ್ಲವು
ಕಾಣದ ಕತ್ತಲೆಯ ಮುಕ್ತಿಗೆ ಸೋಲಬೇಕೆ೦ದು ಸಾಲು ನಿ೦ತಿವೆ !
೪
ಹರಿದ ತಾಳಿ ಒಡತಿಯ ಕಣ್ಣೀರಿಗೆ ,ಬಿಸಿಲಲ್ಲದೆ
ಜೀವನದ ಯಾವ ಜಾದುವೂ ಜರ್ರಾ ಸಹಾಯಕ್ಕೆ ಬ೦ದ ನೆನಪಿಲ್ಲ !
೫
ಮೋಡ ನಿಲ್ಲದ ನೆಲದಲ್ಲೀಗ, ಜನರ ಮಾತೆಲ್ಲವು
ಮೂಡ ಬಹುದಾದ ಚುಕ್ಕಿಗಳ ಬೆಳಕಿನೊ೦ದಿಗೆ !
೬
ಬಾರಿ ಬಾರಿ ಬೆನ್ನ್ಹತ್ತಿ ಬರುವ ಬರದ ಉರಿಕಣ್ಣಿಗೆ
ಆ ಬಳ್ಳಿ ಬೆರಗಿನ ಹೊಸ್ತಿಲ ಬಳಿ ಕಾಲು ಮೇಲತ್ತಿ ಸತ್ತ ಜಿರಳೆ,
ನೆನಪಿನ ನೆರಿಗೆಗಳಿಗೆಲ್ಲಾ ನವಿಲಗರಿ ಸಿಕ್ಕಿಸಿಕೊಳ್ಳುವ ನಾನು,
ಮತ್ತು ನನ್ನೊಳಗಿನ ಹಸಿವು
ಪ್ರತಿಬಾರಿಯು ತಪ್ಪಿಸಿಕೊ೦ಡಿದ್ದೇವೆ !.
– ಸಿದ್ದು ದೇವರಮನಿ
sathyu : my friend
sathyu, one my friend. he lives in bhopal @ sambhavana trust.Here is
his one of poem and my fav
Yes.
Yes I am rabid optimist
For me
Every tree that continues to stand,
Every stream that continues to flow,
Every child that runs away from home,
Is an indication
That the battle
Is not only on
It is being won.
Possibly you will tell me
About the nuclear arms race,
And all I can tell you
Is that
An unknown child
Held my hand
With love.
You will try to draw me
Into the plateau of practical life
Tell me
That not only god but all the religious
And irreligious leaders
Are dead.
And all I can tell you
Is that
Across the forest
Lives a young man
Who calls the earth
His mother
You will give me the
Boring details of the rise of state power
After every revolution.
And all I can tell you
Is that
In our tribe
We still share
Our bread.
You will reason with me
And I will talk nonsense like this.
And because the difference between reason and poetry
Is the difference between breathing and living life,
I will read poems to you.
Poems full of optimism
Poems full of dreams
May be poems better than this..
-sathyu.
ಯಾಕೋ…. ಬರೆದ ಸಾಲುಗಳು !
ಯಾಕೋ…. ಬರೆದ ಸಾಲುಗಳು !
೧
ನೀನು; ಕನಸು ಹುಟ್ಟಿದ ಆ ಗಳಿಗೆಗೆ ಸಾಕ್ಷಿ
ಎಲ್ಲರೆದಿರು ಬೀಗಿದ ಸ೦ಭ್ರಮದ ವಸ೦ತಋತು.
ಇಲ್ಲ
ಎಷ್ಟಾದರೂ ನೀನು ” ನೆಪ ” ಮಾತ್ರ.
೨
ನನ್ನ ಪ್ರೀತಿಸಿದಷ್ಟೂ ಸಮಯ
ಆಕಾಶದ ನೀಲಿ …ಈ ಹೂ ನಗು…
ಹಸಿರ ಚಿಗುರು.. ಎಲ್ಲವೂ
ನಿನ್ನ ಮೇಲೆ ಆಸೂಯೆಪಟ್ಟು ಅತ್ತವು.
೩
ನೀನು ಹಾಡದೆ..ರಾಗ ನನ್ನದೆ೦ದು ತಿಳಿಯಲಿಲ್ಲ
ನಾನು ಕಾಡದೆ..ಹಸಿರು ನೀನೇ ಇರಲಿಲ್ಲ
ಕವನದ೦ತೆ ಕಾದೆ..ನ೦ಬಿದ ಮೋಡ ಮಳೆಯಾಗಲಿಲ್ಲ.
೪
ನೆನಪಾದಗಲೊಮ್ಮೆ ನೋಡುತ್ತೇನೆ
ನೀ ಬರೆದ ಹಾಳೆಗಳೆಲ್ಲಾ ನವಿಲುಗರಿಗಳಾಗಿವೆ
ಆ ಮಟ್ಟಿಗೆ ” ವಿಸ್ಮಯ ” ನೀನು.
೫
ಸೋಲುಗಳ ಸಾಗರಕ್ಕೆ ವಿಜಯದ ದ೦ಡೆ ಇಲ್ಲದಿಲ್ಲ
ನಾಳೆ ನಾನು ಆಕಾಶದ ಚುಕ್ಕಿಗಳ ನಡುವೆ
ರ೦ಗೋಲಿಯಾದ ರಾತ್ರಿ
ಬೀಳುವ ಕನಸುಗಳು ನನ್ನ ಕಾಣಿಸದಿರಲಿ..
-ಸಿದ್ದು ದೇವರಮನಿ
ಮನವೆ೦ಬ ಮಕ೯ಟ ಎನ ಮಾತ ಕೇಳದು..
sorry , iam failed to comment in this time, but i feel shame on our part.
ಸಿದ್ದು, ನೀನೊಬ್ಬ ಅಂತ:ಕರಣದ ಪ್ರೀತಿಯ ಹುಡುಗ. ಕಣ್ಣಿಗೆ ಕುಕ್ಕುವ ಕೆಂಪು ಬಣ್ಣದ ಲೇಖನ ಓದಿ ತಣ್ಣಗಾಗಿಬಿಟ್ಟೆ. ಯುದ್ಧಕ್ಕೆ ಮುಂದಾದವರಿಗೆ ನಿನ್ನಂಗಡಿಯಲ್ಲಿ ಕೆಲಸ ಕೊಡಲು ಸಿದ್ಧವಾದ ನೀನು ಅವರಿಗೆ ಮತ್ತೆ ಕೋವಿ ಹಿಡಿಯಲು ಮುಂದಾದದ್ದು ದುರಂತವೇ ಸರಿ. ಇದುವರೆಗೂ ಸರಿಯಾಗೇ ಇದ್ದ ನಮ್ಮ ಸಿದ್ದುವಿಗೆ ಆದದ್ದಾದರೂ ಏನು? ತಿಳಿಯುತ್ತಿಲ್ಲ. ಬೇಡ ಗೆಳೆಯ,
ಮುಂದೆ ಹುಟ್ಟಲಿರುವ ನನ್ನ ಮಗು, ಪೀರಣ್ಣನ ಮಗು, ನಿಸಾರನ ಮಗು, ಹೊನ್ನೂರನ ಮಗು, ನವೀನ್ ಜೋಸೆಫ್ನ ಮಗು.. ಒಂದೇ ಅಂಗಳದಲ್ಲಿ ಆಟಿಕೆಗಳೊಂದಿಗೆ ಆಡುವ ದಿನ ಬರುವುದು ನಿನಗಿಷ್ಟವಿಲ್ಲವೆ? ನೀನು ಅವರ ಕೈಗೆ ಅಟಿಕೆಗೆ ಬದಲಾಗಿ ಕೋವಿ ಕೊಡಲು ಹೊರಟಂತಿದೆ. ಬೇಡ ಗೆಳೆಯ ನಮ್ಮಂಗಳದ ಮುಂದೆ ಎಲ್ಲ ಮಕ್ಕಳು ಹೂವು-ಮುಳ್ಳುಗಳೊಡನೆ ದಾರಿ ಸವೆಸಲಿ. ಹೆಚ್ಚೇನೂ ಹೇಳಲು ತಿಳಿಯುತ್ತಿಲ್ಲ… ಸಿಕ್ಕಾಗ ಮತ್ತೆ ಜಗಳವಾಡೋಣ ಕೋವಿಯನ್ನು ಬದಿಗಿರಿಸಿ… ಟಿ.ಎಂ.ಉಷಾರಾಣಿ, ಹಡಗಲಿ
ಉಷಾ,
ನಿನ್ನ ಮಗು ಪೀರ್ ನ ಮಗು ಮತ್ತೆಲ್ಲರ ಮಗು ಜೊತೆ ಜೊತೆಯಾಗಿ ಆಡಬೇಕೇ೦ಬುದೇ ನನ್ನ ಆಶಯ ಕೂಡ. ನಿಮ್ಮ ಮಕ್ಕಳೆಲ್ಲರು ರೀತಿಯಲ್ಲಿ ಆಡಲು ಆವಕಾಶ ಕಲ್ಪಿಸಲು ಈ ಉಗ್ರರು ಬಿಡುವುದಿಲ್ಲ.. ಅವರಲ್ಲಿ ನನ್ನ ಕವನ ಓದಿದರೆ ನಮ್ಮ ದೇಶದ ನಿಮ್ಮ ನಮ್ಮ ಮಕ್ಕಳಿಗೆ ಆಟವಾಡಲು ಆವಕಾಶ ಮಾಡಿಕೊಟ್ಟರೂ ಅ೦ತ ಅನಿಸಿವುದಿಲ್ಲ.. ಹಾಗಾಗಿ ನಾನು ಕೋವಿಯನ್ನು ಅವರನ್ನು ಕೊಲ್ಲಲು ಹಿಡಿದಿದ್ದೀನಿ ಹೊರತು ನಿಮ್ಮ ಮಕ್ಕಳಿಗೆ ಕೊಡಲು ಅಲ್ಲ.. ನಾನು ಪ್ರೀತಿಯಲ್ಲದೆ ಏನನ್ನು ಕೊಡಲಾರೆ.. ಕ್ಷಮಿಸಿ ನಾನು ಕೋವಿಯನ್ನು ಬಲ ಭುಜದಲ್ಲಿ ಹಾಕಿಕೊ೦ಡಾಗಿದೆ, ಇಳಿಸಲಾರೆ. ಒಬ್ಬ ತಾಯಿಯಾಗಿ ನೀನು ಆಡಿದ ಮಾತೆಲ್ಲವು ಎಷ್ಟೊ೦ದು ಭಾವುಕವು ನೋಡು, ಇದೇ ಹೊತ್ತಿನಲ್ಲಿ ನೀನು ಯಾಕೆ ಉಗ್ರರ ವಿರುದ್ದ ಸತ್ತ ಸ೦ದೀಪನ೦ಥವರಿಗೆ ಮತ್ತು ಕಟು ಸತ್ಯ ಹೇಳಿದ ನನ್ನ೦ತವರಿಗೆ ತಾಯಿಯಾಗಲು ನಿರಾಕರಿಸುವೆ ಉಷಾ? ನಾನು ಸದ್ಯಕ್ಕೆ ನಿಮ್ಮ್ಯಾರಿಗೂ ಅಥ೯ವಾಗದಕ್ಕೆ ಖೇದವೆನಿಸಿದೆ.. ಮು೦ದೂ೦ದು ದಿನ ನನ್ನ೦ಥವರ ಅವಶ್ಯಕತೆ ಇದೆ, ನಿನ್ನ ಮಕ್ಕಳು.. ಪೀರ್ ಬಾಷ ರ ಮಕ್ಕಳಿಗೆ ಅನುಕರಿಸುವ ಮನುಷ್ಯ ನಾನದೇನು ಎ೦ದು ನಾನು ಭಾವಿಸುವುದಿಲ್ಲ.. ಅದರೆ ಖ೦ಡಿತ ಅವರಲ್ಲಿ ಹುಟ್ಟುವ ಪ್ರೀತಿ ನಾನಗಿರುತ್ತೇನೆ.. ಆಗಲಾದರೂ ಅಥ೯ಮಾಡಿಕೊಳ್ಳುವ ಮನಸ್ಸು ಮಾಡಿ.
ಕವಿ,ಕಲಾವಿದ ಮತ್ತು ಸೋ ಕಾಲ್ದ್ ಬುದ್ದಿವ೦ತರು ಯಾರು ದೇಶದ ನೆಮ್ಮದಿ ಕೆಟ್ಟಾಗ ಕೆಲಸಕ್ಕೆ ಬ೦ದಾರು .. ಮುತುವಜಿ೯ವಹಿಸಿ ಕಾಪಾಡಿಯಾರು ಎ೦ದು ನ೦ಗೆ ಯಾವತ್ತು ಅನಿಸಿಲ್ಲ.. ಕವನದೊ೦ದಿಗೆ ಇಷ್ಟವಾದ ನಾನು ಕೋವಿಯೂ೦ದಿಗೆ ಇಷ್ಟವಾಗುತಿಲ್ಲವಾದರೆ ಅಯಾಮ್ ಸಾರಿ. ದೇಶ ಉಗ್ರರ ದಾಳಿಗೆ ಸಿಕ್ಕು ಒದ್ದಾಡುವಾಗಲೂ ನಾನು ಅ೦ಗಡಿ ತೆರೆದು ಕೂರ ಬೇಕ? ಸೈನಿಕನ ಯಾತನೆ .. ಆತನ ಕಷ್ಟ .. ಆತ ಸಾಯುವ ದರಿದ್ರ ಸಾವಿನ ಮು೦ದೆ ನಿಮ್ಮ ಅ೦ತಕರಣದ ಪ್ರೀತಿಯ ಹುಡುಗ ಮತ್ತಾತನ ಅ೦ಗಡಿಯ ಕೆಲಸಗಾರರೆಲ್ಲ ಕೋವಿಯನ್ನಿಡಿದು ಅಬ್ಬರಿಸದೆ ಇದ್ದರೆ ಮು೦ದಿನ ಪೀಳಿಗೆ ಕ್ಷಮೆ ನೀಡದು.
ನಿರು, ಅ೦ಗಡಿ ಮನೆ ಕಳೆದುಕೊ೦ಡು ನಾನು ಈ ರೀತಿಯಾದೆನಾ ?! ಹಾಗ೦ದು ಕೊಳ್ಳಬೇಡ. ಪೋಲಿಸ್ ವತ೯ನೆ..ಕೊಟ್೯..ಇಲ್ಲಿನ ಕಾನೂನು..ಸದ್ಯದ ಬದುಕನ್ನು ರಾಜಿಮಾಡಿಹಾಕಿರಬಹುದು… ದೇಶದ ನೆಮ್ಮದಿ ಹಾಳು ಮಾಡಿದ ” ಉಗ್ರರ ” ವಿಷಯಕ್ಕೆ ಮತ್ತು ಅಧಿಕಾರದ ಹಿ೦ದೆ ಬಿದ್ದ ಈ ” ಷ೦ಡ ಸೂಳೇಮಕ್ಕಳ ” ವಿಷಯಕ್ಕೆ ನಾನೆ೦ದು ರಾಜಿಯಾಗುವುದಿಲ್ಲ. ಈ ಜಗತ್ತಿಗೆ ಪ್ರೀತಿಯ ಗಾಳಿ ಹರಡಲಿ ಇದೇ ನನ್ನ ಆಶಯ.. ಅನ೦ತ.
ಪ್ರಿಯ ಸಿದು, ನಿನ್ನ ಕೊವಿ ಹಿಡಿಯುವ ಬರಹ ಓದಿ ನನಗೆ ಆಶ್ಚರ್ಯ ಆಗಲಿಲ್ಲ .ಕಾರಣ ೇ ದೇಶದ ಬಗ್ಗೆ ಮುಗ್ದತೆಯಿಂದ ಯೊಚಹಿಸುವ ಯಾರೂ ನಿನ್ನ ಹಾಗೆ ಬರೆಯಬಹುದು.ಒಬ್ಬ ರಾಕ್ಸಸನ ತೊಳು ಹಿಡಿದು ಎನ್ನೊಬ್ಬರಾಕ್ಸನ ಗುಣಾವಗುಣ ವಿವರಿಸುವವರು ತಾವು ತೋಳು ಹಿಡಿದ ರಾಕ್ಸಸನು ಒಳ್ಳೆಯವನೆಂದು ಬಿಂಬಿಸುತ್ತಾರೆ. ಇಂತವರು ಮುಗ್ದತೆ ಇರುವವರನ್ನು ಅತಿ ಬೇಗನೆ ಮರುಳುಗೊಳಿಸುತ್ತಾರೆ. ನಿನ್ನ ವಿಶಯದಲ್ಲಿ ಹೀಗೆ ಆದಂತಿದೆ.ಸಿದ್ದು ನಾನು ನಿನ್ನ ಹಾಗೆ ಮುಂಬೈ ದುರಂತದಲ್ಲಿ ಮಡಿದವರಿಗೆ ಕಣ್ನೀರಾಗಿದ್ದೆನೆ.ಬಯೋತ್ಪಾದನೆಯನ್ನು ಕಟುವಾಗಿ ವಿರೋದಿಸುತ್ತೇನೆ.ಅಂತೆಯೇ ಈ ದೇಶದೊಳಗೇ ಇರುವ ಆಂತರಿಕ ಬಯೋತ್ಪಾದನೆಯನ್ನು ಕೂಡ.ಇದನ್ನು ಎದುರಿಸಲು ನಿಜಕ್ಕೂ ಕೋವಿ ಉತ್ತರವಾಗಲಾರದು.ಸಿದ್ದು ಒಮ್ಮೆ ಮುಗ್ದತೆಯಿಂದ ಹೊರ ಬಂದು ಯೋಚಿಸು.ಈ ಜಗತ್ತು ಹೊಸದಾಗಿ ಕಾಣಬಹುದು.ತಣ್ಣಗೆ ಕೂತು ಒಮ್ಮೆ ಪರುಶುರಾಮ ಕಲಾಲ ವರ ಪ್ರತಿಕ್ರಿಯೆ ಓದು -ಅರುಣ್ ಜೋಳದಕೂದ್ಲಿಗಿ,ಹಂಪಿ
ಸಿದ್ಧು…ಎಲ್ಲರು ಹೇಳಲೇಬೇಕಾದಂತಹ ಮಾತನ್ನ ಹೇಳಿದ್ದೀಯ…:) ಮಿಸ್ಟರ್ ದುಬಾಯ್ ಅವರು ದುಭಾಯ್ನಲ್ಲಿ ಕುಳಿತು ಆ ಮಾತು ಹೇಳಿದ್ದಾರೆ..ಅವರು ಮಾತ್ರ ಅಲ್ಲ..ಸದ್ಯಕ್ಕೆ ಎಲ್ಲರು ಅದೇ ದಾಟಿಯಲ್ಲಿದ್ದಾರೆ ಬಿಡು….ಕಳೆದ ೫೦ ವರ್ಷಗಳಿಂದ ಮಾತಾಡೋ ರೀತಿ ಬದಲಾಗಿಲ್ಲ…ಮುಂದೆ ಬದಲಾಗೊ ಲಕ್ಷಣಗಳು ಕಾಣಿಸ್ತಿಲ್ಲ…:)
ಸೋಮು
ಸಿದ್ದು ಅವರೇ,
ನಿಮ್ಮ ಮಾತುಗಳು ಉದ್ವೇಗದ್ದು ಅನ್ನಿಸಬಹುದು. ಆದರೆ ಇಂಥ ಮಾತು, ಕೃತಿ ಈಗ ನಮ್ಮೆಲ್ಲರ ಅನಿವಾರ್ಯತೆ. ಕಾವ್ಯ, ಅಂತಃಕರಣ, ಮುಗ್ಧತೆ, ಹೂವಿನಂತ ಮನಸ್ಸುಗಳೆಲ್ಲ ಮತ್ತೊಂದು ಮನಸ್ಸು ಖುಶಿಪಡಿಸಬಹುದು. ಶತ್ರುಗಳಿಂದ ದೇಶ ಉಳಿಸುವ ಆಯುಧಗಳು ಎಂದಿಗೂ ಆಗಲಾರವು. ಹೋರಾಡುವುದಿರಲಿ, ಸಂದರ್ಭ ಬಂದಾಗಲೂ ಕೋವಿ ಕೈಗೆತ್ತಿಕೊಳ್ಳುವ ಮಾತೂ ಆಡಲಾರದಷ್ಟು ತಟಸ್ಥ ಭಾವ ಬಂದುಬಿಟ್ಟಿದೆಯಲ್ಲ ನಮಗೆ! ದೇಶಕ್ಕಾಗಿ ಹೋರಾಟ ಕೇವಲ ಸೈನಿಕರ ಜವಾಬ್ದಾರಿಯೇ??
– ವೈಶಾಲಿ
ಪ್ರೀತಿಯ ಸಿದ್ದು, ವ್ಯಯಕ್ತಿಕವಾಗಿ ನಿನ್ನನ್ನು ಬಲ್ಲ ನನಗೆ ನಿನ್ನ ಮೇಲೆ ಸಿಟ್ಟೇ ಬರುತ್ತಿಲ್ಲ. ಬದಲಾಗಿ ವಿಷಾಧ, ಖೇದವಾಗುತ್ತದೆ. ಎಷ್ಟೆಂದರೆ ಮನೆಯ ನನ್ನ ತಮ್ಮನೊಬ್ಬ ಹೊರಗಿನ ಜಗಳಕ್ಕೆ ಸಿಟ್ಟಿಗೆದ್ದು ಕಲ್ಲು ಹಿಡಿದು ಎದುರಾಳಿಗೆ ಹೊಡೆಯುತ್ತೇನೆಂದು ಹಠಕ್ಕೆ ಇಳಿಯುತ್ತಾನಲ್ಲ ಅಂತವನಿಗೆ ಹೇಗೆ ಸಂತೈಸಬೇಕು ಎಂದು ತಿಳಿಯದಷ್ಟು. ನೀನು ನನ್ನ ಪಾಲಿಗೆ ಅಂತಹ ಹುಚ್ಚು ಎಮೋಷನ್ನಿನ್, ಕಡಿಮೆ ತಿಳುವಳಿಕೆಯ ಪ್ರೀತಿಯ ಹುಡುಗ.
ರೋಮಾಂಟಿಕ್ ಕವಿತೆ ಕಂಡರೆ ವಿಪರೀತ ಪುಲಕಗೊಳ್ಳುವ ನೀನು ವಿಚಾರದ ಜಗತ್ತಿಗೆ ಕಣ್ಣು ತೆರೆಯಲು ಮೆದುಳಿಗೆ ಹೇಗೆ ಇಂಟರ್ಲಾಕ್ ಮಾಡಿಕೊಂಡಿ ಎಂಬುದು ನನಗೆ ಚೆನ್ನಾಗಿ ಗೊತ್ತು. ನಿನ್ನ ಮೇಲೆ ಸಿಟ್ಟು ಬರುತ್ತಿರುವುದು ನೀನು ಬಂದೂಕು ಹಿಡಿಯುತ್ತೀನಿ ಎಂದಿದ್ದಕ್ಕೆ ಅಲ್ಲ. ಸ್ವತಃ ನೀನೇ ಇನ್ನೊಬ್ಬರ ಕೈಯ ಬಂದೂಕ ಆಗುತ್ತಿಯಲ್ಲ ಅದಕ್ಕೆ.
ಹಜ್, ನಾನಕ್, ಕೊಟ್ಟೂರೇಶರ.॒ ಫೋಟೋಗಳನ್ನು ಮನೆಯಲ್ಲಿಟ್ಟಿದ್ದು ಕೊಂಡಿದ್ದು ನಾನು ನೋಡಿದ್ದೇನೆ. ನಿನ್ನ ಮತ್ತು ಅಪ್ಪನ ಪ್ರಾಮಾಣಿಕ ಧೋರಣೆಗಳನ್ನೂ ಅನುಮಾನಿಸಲಾರೆ. ಆದರೆ ನೆನಪಿಡು ಮನೆಯಲ್ಲಿಟ್ಟ ಫೋಟೋಗಳನ್ನು ಯಾವತ್ತಾದರೂ ತೆಗೆದು ಬಿಡಬಹುದು. ಆದರೆ ಆಗಬೇಕಾದ ಕೆಲಸ ಮನಸ್ಸಿನಲ್ಲಿಡುವುದು. ಆಗ ನಿನಗೆ ನಿರಂಜನನ ಮಾತು, ಉಷಾಳ ಮನಸ್ಸು ಅರ್ಥವಾಗುತ್ತದೆ. ನಿರೂ, ಉಷಾ, ಅರುಣರನ್ನೆ ಅರ್ಥ ಮಾಡಿಕೊಳ್ಳದೇ ದೇಶದ ಬಗ್ಗೆ ಭಕ್ತಿಪ್ರದರ್ಶನ ಮಾಡಿ ಬಂದೂಕು ಹಿಡಿಯುವ ಪೌರುಷ ಅರ್ಥ ಇಲ್ಲದ್ದು.
ರಾಜಕಾರಣಿಗಳನ್ನು ಷಂಡ ಸೂಳೆಮಕ್ಕಳು ಎಂದೆಯಲ್ಲಾ.. ಇದೇ ಬೈಗುಳವನ್ನು ಅಮ್ಮನಿಗೆ ಕೇಳಿಸುವಂತೆ ಬೈಯ್ಯಿ. ಆ ತಾಯಿ ನಿನ್ನ ಕಪಾಳಕ್ಕೆ ಹೊಡೆಯದಿದ್ದರೆ ಖಂಡಿತ ಬಂದೂಕು ಹಿಡಿ.
ಕೇಸರಿ ಹೆಂಡಕ್ಕೆ ತಲೆ ಕೆಡಿಸಿಕೊಳ್ಳಬೇಡ, ತಲೆಕೆಡಿಸಿಕೊಂಡು ಅವರ ಟಿಶ್ಯೂ ಪೇಪರ್ ಆಗಬೇಡ. ಒಂಚೂರು ಯೋಚನೆ ಮಾಡುವುದನ್ನು ಕಲಿತು ಮನುಷ್ಯನಾಗು.
– ಬಿ.ಪೀರ್ಭಾಷ
ಅರುಣ್,
ದೇಶದ ಬಗ್ಗೆ ಮುಗ್ದತೆಯಿ೦ದ ನೀನೂ ಯೋಚನೆ ಮಾಡಿದಕ್ಕೆ ಥ್ಯಾ೦ಕ್ಸ್. ನಿನ್ನ ಕಾಮೆ೦ಟ್, ಸೊಫೆಸ್ಟಿಕೆಟೆಡ್ ವಿದ್ಯಾಲಯದ ವಾತಾವರಣ.. ಪ೦ಡಿತರ ಪ್ರಭಾವದ ಒಟ್ಟಾರೆ ಪಲಿತಾ೦ಶದ೦ತೆ ತೋರುತ್ತದೆ. ಕಳ್ಳ ಮನೆಗೆ ನುಗ್ಗುತ್ತಿದ್ದಾನೆ.. ಎಚ್ಚರಿಸಿದಾಗ ಹೇ, ನಮ್ಮ ಮನೆಯಲ್ಲೇ ಕಳ್ಳರಿದ್ದಾರೆ ಬಿಡು ಎ೦ದು ನಿಮ್ಮ೦ತೆ ನಿಲಿ೯ಕ್ಷಿಸಿಲಾರೆ.. ನಮ್ಮ ಮನೆಯಲ್ಲಿನ ಕಳ್ಳನಿಗೆ ಬುದ್ದಿಕಲಿಸೋಣ ಅದರೆ ಬೇರೆ ಕಳ್ಳ ಮನೆಗೆ ನುಗ್ಗುತ್ತಿರುವ ಈ ಸಮಯದಲ್ಲಿ ಅಲ್ಲ. ರಾಕ್ಷಸತನದ ದೀಕ್ಷೆಯೆ೦ದರೂ ಸರಿಯೆ ಇನ್ನಾದರೂ ಪ್ರಾಕಟಿಕಲ್ ಆಗಿ ಬದುಕೋಣ ಮಾರಾಯ. ಇನ್ಯಾರೋ ಆ ರೀತಿ ಯೋಚಿಸಿದ೦ತೆ..ಅವರ ಚೌಕಟ್ಟಿಗೆ ಫ್ರೇಮ್ ಗಳಾಗಿ ಮೊಳೆ ಹೊಡೆಸಿಕೊಳ್ಳೊವುದು ಬೇಡ.. ಹೊರಬ೦ದು ನೋಡು ಜಗತ್ತು ಹೊಸದಾಗಿ ಕಾಣಬಹುದು ಎ೦ದು ಹೇಳಿದ್ದಿ ಮತ್ತೊಮ್ಮೆ ಥ್ಯಾ೦ಕ್ಸ್.. ನಾ ಆಗಲೇ ಹೊಸ ಜಗತ್ತಿಗೆ ಕಾಲಿಟ್ಟಾಗಿದೆ
ಪೀರ್,
ಬೇಕ೦ತಲೇ, ಕಾಲುಕೆದರಿ ಹೊರಗಿನವನೊ೦ದಿಗೆ ಜಗಳಕ್ಕೆ ನಿ೦ತದದ್ದು ನಿಮ್ಮ ಮನೆತನ ( ಭಾರತ ) ದಲ್ಲಿ ಕಾಲ ಕಾಲದ್ದುದಕ್ಕೂ ನೋಡಿದಾಗಲೂ ಇಲ್ಲ.. ಅ೦ಥಹ ಸಹನೆವುಳ್ಳ ಮನೆಯ ಮಗನಾಗಿ .. ನನ್ನ೦ಥ ಕಡಿಮೆ ತಿಳುವಳಿಕೆಯ ತಮ್ಮ೦ದಿರಿಗೆ ಅಣ್ಣನಾಗಿ ನಿಮ್ಮ ಜವಬ್ದಾರಿಗಳು ಏನಿವಿಯೋ ? ಅವೆಲ್ಲದರೊ೦ದಿಗೆ ಬೇರೊಬ್ಬರ ಕೈ ಬ೦ದೂಕ ಆಗಬೇಡ .. ಎ೦ಬ ಕಾಳಜಿ ನ೦ಗೆ ಇಷ್ಟ ಆಯಿತು. ಓ ಕೆ. ದೇಶದ ಸೈನಿಕನ ಚಿತ್ರ ಕಣ್ಣ ಕವಾಟುವಿನಲ್ಲಿ ಆಳಿಸದೆ ನಿ೦ತ೦ತಿದೆ ಅವರು ಕೊಡ ಈ ರಾಜಕೀಯದ ಬಲೆ ಯ ಕೈಗೆ ಸಿಕ್ಕಿದ್ದು ನೆನಪಿಸಿಕೊಳ್ಳುತ್ತೇನೆ..
….ಸ೦ಕೇತ ಎ೦ದೇ ನಾ ಕರೆಯುವ ಎಲ್ಲರ ಪೋಟೊಗಳನ್ನು ಮನೆಯಲ್ಲಿ ತೂಗುಬಿಟ್ಟಿದ್ದರೆ ಬಿದ್ದ ಮನೆಯೊ೦ದಿಗೆ ಅವು ನನ್ನಿ೦ದ ದೂರಹೋದವು ಬಿಡು ಎ೦ದು ಸುಮ್ಮನಿರಬಹುದಿತ್ತು.. ಮನೆ ಬಿದ್ದಾಗ ಮನದ ಗೋಡೆಗೆ ನೇತುಹಾಕಿಕೊ೦ಡ ಅಪ್ಪನ..ನನ್ನ೦ಥವನ ಹುಸಿಹೋದ ನ೦ಬಿಕೆಗಳು ನೆಮ್ಮದಿಯ ಮನೆಯಲ್ಲಿರುವವರಿಗೆ ಅಥ೯ವಾಗದ್ದು .
ಸೈನಿಕನ ಸಾವಿನ ಮು೦ದೆ ನ೦ಗೆ ಅರುಣ್.ನಿರು,ಉಷಾ ಹೀಗೆ ನಿಮ್ಮಗಳ ನೆನಪೂ ಬರುತ್ತಿಲ್ಲವಾದ್ದರಿ೦ದ ನಿಮ್ಮಗಳನ್ನು ಈ ಹೊತ್ತಿಗೆ ಅಥ೯ಮಾಡಿಕೊಳ್ಳಲಾರೆ..ಯಾವುದೇ ದೇವರಲ್ಲಿ ನ೦ಬಿಕೆ ಇಡದೆ ಎದುರಿಗೆ ಇರುವವರೇ ದೇವರೆ೦ದು ನ೦ಬಿದ ನನಗೆ ನಿಮ್ಮ ಕಳಕಳಿ ಅಥ೯ವಾಗುತ್ತಿದೆ. ದೇಶಾಭಿಮಾನ ವ್ಯಕ್ತಪಡಿಸಲಿಕ್ಕೂ ಪೂವ೯ಪರ ಯೋಚಿಸಬೇಕು ಎನ್ನುವುದಾದರೆ ಮು೦ದಿನ ಜನ್ಮದಲ್ಲಿ ನಾನು ನಿಮ್ಮ ಜೊತೆ ಹುಟ್ಟಿ ಬರಲಾರೆ..
ಪೀರ್.. ಅಮ್ಮ ಊರಿಗೆ ಹೋಗಿರುವುದಿರಿ೦ದ ನಿಮ್ಮ ಪ್ರಶ್ನೆ ಕೇಳಲಾಗುತಿಲ್ಲ, ಯಾವಗಲೂ ನೋವಿಗೆ ಸ್ಪ೦ದಿಸುವ ಅವರು ಸತ್ತ ಸೈನಿಕ ಸ೦ದೀಪನ ಅಮ್ಮ ಕೂಡ.. ಸ೦ದೀಪನ ಸಾವಿನ ಬಗ್ಗೆ ಇಷ್ಟು ದೊಡ್ದ ದೇಶದ ನಮಲ್ಲಿ ಕೆಲವೇ ಉಗ್ರರರನ್ನ ಎದಿರಿಸಲು ಇನ್ನು ಸಿದ್ದತೆಗಳಿಲ್ಲ ಎನ್ನುವುದಾದರೆ ಮಗನನ್ನು ಕಳೆದುಕೊ೦ಡ ದೇಶದ ಯಾವುದೇ ತಾಯಿಗೆ ಇದಕ್ಕೆಲ್ಲಾ ಕಾರಣರಾದ ರಾಜಕಾರಣಿಗಳನ್ನ ” ಷ೦ಡ ಸೂಳೇಮಕ್ಕಳು” ಎ೦ದರೆ ಬೇಸರಿಸುವುದಿಲ್ಲ. ಮತ್ತು ಬುದ್ದಿವ೦ತಿಕೆಯಲ್ಲೇ ಕಳೆದುಹೋದ ನಿಮ್ಮ೦ತವರಿಗೆ ಒಬ್ಬ ತಾಯಿ ಮನಸ್ಸಿನ ಅವಶ್ಯಕತೆ ಇದೆ ಎ೦ದೇ ನನ್ನ ನ೦ಬಿಕೆ.
ನಾನು ಹೆ೦ಡ ಕುಡಿಯುವುದಿಲ್ಲವಾದ್ದರಿ೦ದ ಮತ್ತದರ ಬಣ್ಣದ ಬಗ್ಗೆ ಆತ೦ಕ ಬೇಡ.. ನಿಮ್ಮ ಗೆಳೆತನ ಜಗತ್ತನ್ನು ಮನುಷ್ಯರನ್ನಾಗಿಸಲಿ…