ಬ್ಲಾಗ್ ಸಂಗ್ರಹಗಳು

” ಕಲಾಲ್ “.. ಎ೦ಬ ದಿಗ್ಬ್ರಮೆಯ ಪ್ರೀತಿ !

ಬೇರೆ ಯಾರದೇ ಬ್ಲಾಗಿನಲ್ಲಿ ಇಂತಹ ಬರಹ ಬಂದಿದ್ದರೆ ಖಂಡಿತ ಅದಕ್ಕೆ ರಿಯಾಕ್ಟ್ ಮಾಡದೇ ನಕ್ಕು ಸುಮ್ಮನಾಗಿ ಬಿಡುತ್ತಿದ್ದೆ. ನಮ್ಮ ಸಿದ್ದು ಬರೆದಿದ್ದಾನೆ ಎನಿಸಿದಾಗ ದಿಗ್ಭ್ರಮೆ ಉಂಟಾಯಿತು. ಮುಗ್ಧ ಹೂವು ಮನಸ್ಸಿನ ಕವಿಗೆ ಏನಾಗಿ ಹೊಯಿತು ಎಂಬ ಆತಂಕ ಉಂಟಾಯಿತು.
ಸಿದ್ದು ನಿನ್ನ ಬರಹವನ್ನು ನೀನೆ ಇನ್ನೊಮ್ಮೆ ಓದಬೇಕು. ಈಗ ನಾನು ಭಯೋತ್ಪಾದನೆಯ ಕುರಿತು ನಿನ್ನೊಂದಿಗೆ ಮಾತಿಗಿಳಿಯುವುದಿಲ್ಲ. ಅದಕ್ಕೂ ಬೇಕಾದಷ್ಟು ವಿಷಯಗಳು ನನ್ನ ಮುಂದಿವೆ. ನಾನು ಅಂಕಿಸಂಖ್ಯೆಗಳನ್ನು ಕೊಡಬಲ್ಲೆ. ಈ ದೇಶದಲ್ಲಿ ಎಷ್ಟು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಗಟ್ಟಲೆ ಹೆಣ್ಣುಭ್ರೂಣ ಹತ್ಯೆ ನಡೆದಿರುವುದು. ನಮ್ಮ ಆಧುನಿಕ ದೇಶ ಕಟ್ಟುವ ಯೋಜನೆಗಳು ಲಕ್ಷಾಂತರ ಜನರ ಬದುಕನ್ನು ಕಸಿದು ಕೊಂಡು ಬೀದಿಗೆ ತಳ್ಳಿ ಭಿಕಾರಿಗಳನ್ನಾಗಿಸಿ ಅವರನ್ನು ದಿನವೂ ಸಾಯಿಸುತ್ತಿರುವುದು. ಹೋಗಲಿ ಇನ್ನೂ ಪೆಸಿಫಿಕ್‌ಗೆ ಬರುತ್ತೇನೆ. ಜಿಲ್ಲೆಯ ಗಣಿದೊರೆಗಳು ಸಂಪನ್ಮೂಲವನ್ನು ದೋಚಿಕೊಂಡು ವಿದೇಶಕ್ಕೆ ಮಾರಿ ಈ ಜಿಲ್ಲೆಯ ಸಾಮಾನ್ಯ ಜನರಿಗೆ ಎಲ್ಲಾ ಮಾರಕರೋಗಗಳನ್ನು ಅಂಟಿಸಿ, ಗಣಿಯ ಕುಣಿಯಲ್ಲಿ ಕೆಡವಿ ಕೆಮ್ಮಿ ಕೆಮ್ಮಿ ಸಾಯುವಂತೆ ಮಾಡಿದ್ದಾರಲ್ಲ. ಇದೆಲ್ಲಾ ಏನು? ಜಿಲ್ಲೆಯ ಸಾವಿನ ರೇಟ್ ಏನಿದೆ?
ಈಗ ನಾನು ಕೇಳುತ್ತೇನೆ. ಭಯೋತ್ಪಾದಕರು ಯಾರು?
ಈ ದೇಶದ ಬುಸಂಖ್ಯಾತ ಜನರಿಗೆ ಭಾರತದ ಭಾವುಟ ಗೊತ್ತಿಲ್ಲ. ಭೂಪಟವೂ ಗೊತ್ತಿಲ್ಲ. ಜನಗಣಮನ ಹಾಡುವಾಗ ನಿಲ್ಲಬೇಕು ಎನ್ನುವುದು ಸಹ ಗೊತ್ತಿಲ್ಲ. ಅವರು ಇವ್ಯಾವದಕ್ಕೂ ಪುಳುಕಿತರಾಗುವುದಿಲ್ಲ.
ಆದರೆ ಅವರು ಈ ನೆಲವನ್ನು ಪ್ರೀತಿಸುತ್ತಾರೆ. ಇಲ್ಲಿಯ ಜನರನ್ನು ಪ್ರೀತಿಸುತ್ತಾರೆ. ಊರು ಬಿಟ್ಟು ಹೋಗಲು ಇಷ್ಟಪಡುವುದಿಲ್ಲ. ಇನ್ನೂ ದೇಶ ಬಿಟ್ಟು ಹೋಗುವುದು ದೂರದ ಮಾತು. ಆದರೆ ದೇಶಾಭಿಮಾನ, ಭಾವುಟ ಪ್ರೀತಿ ಇರುವ ಜನರೇ ಫಾರಿನ್‌ಗೆ ಹೋಗಿ ಕೆಂಪುಮೂತಿಯವರ ಕುಂಡಿ ತುಳಿಯಲು ತುದಿಗಾಲಿನ ಮೇಲೆ ನಿಂತಿರುತ್ತಾರಲ್ಲ ॒
ಮತ್ತೇ ನಾನು ಕೇಳುತ್ತೇನೆ ಯಾವುದು ದೇಶ ಪ್ರೇಮ? ಯಾರು ದೇಶಪ್ರೇಮಿ?
ತೆಲುಗು ಕವಿ ಶ್ರೀ ಶ್ರೀ ಹೇಳುವಂತೆ ’ದೇಶವೆಂದರೆ ಬೆಟ್ಟಗುಡ್ಡಗಳಲ್ಲ, ದೇಶವೆಂದರೆ ಜನ.’
ಒಂದು ದೇಶದ ಬಗ್ಗೆ ಮಾತನಾಡುವಾಗ ಜನರ ಬಗ್ಗೆ ಮಾತನಾಡುವುದೇ ಆಗಿರುತ್ತದೆ.
ಸಿದ್ಧು ನೀನು ಬಂದೂಕ ಹಿಡಿಯುತ್ತೇನೆ ಎಂದರೆ ಬೇಡ ಎಂದು ನಾನು ಹೇಳುವುದಿಲ್ಲ. ನಿನ್ನ ರೋಷವೇಷದ ಮಾತುಗಳನ್ನು ನಾನು ಖಂಡಿಸುವುದಿಲ್ಲ. ಆದರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು. ಅದು ಬಂದೂಕಿನ ರೂಪದಲ್ಲಿ ಬಂದರೂ ಸ್ವಾಗತಿಸುತ್ತೇನೆ. ಬಂದೂಕ ಯಾರದ್ದಾದರೂ ಅದರ ಕೆಲಸ ಕೊಲ್ಲುವುದು ಮಾತ್ರ. ಬಂದೂಕ ಸಾವಿನ ಬೆಳೆಯನ್ನು ಬಿಟ್ಟು ಬೇರೇನನ್ನೂ ಸೃಷ್ಟಿಸಲಾರದು.
-ಪರುಶುರಾಮ ಕಲಾಲ್

ನನ್ನ೦ತೆ ನಿಮ್ಮಲ್ಲಿ ಕೊಡ ಪ್ರಶ್ನೆ( ಜಾಣತನದ) ಗಳಿವೆ ಅ೦ತಾದರೆ ನಿಮ್ಮ ಕಾಲಮಾನದಲ್ಲಿ ಯೇ ಬದುಕುತ್ತಿದ್ದೇನೆ ಅ೦ತ ಕುಶಿಯಾಯಿತು.. ನಿಮ್ಮನ್ನು ಆಳಿದ ದೊರೆಗೆ ಕೇಳ ಬೇಕಾದ ಪ್ರಶ್ನೆಗಳನ್ನು ನನ್ನಲಿ ಯಾಕೆ ಕೇಳುತ್ತಿದ್ದಿರಿ? ಗೊತ್ತಾಗಲಿಲ್ಲ ಇವೆಲ್ಲವುಗಳು ನನ್ನ ಸಮಸ್ಯೆ ಕೊಡ. ಕೋವಿ ಯಾರದಾದರು ಸರಿಯೇ ಅದರ ಕೆಲಸ ಕೊಲ್ಲುವುದೇ ಆಗಿರುತ್ತದೆ .. ನೀವು, ಕೋವಿ ಬೇಡ ಅ೦ದ ಕಾಳಜಿಯ ಪ್ರೀತಿಗೆ ನಾನು ಸಮ್ಮತಿಸಿ ನಿಮ್ಮ ಹೆಗಲಿನ ಮಗುವಾಗಿಬಿಟ್ಟಿದ್ದೇನೆ. ನಿಮ್ಮೊ೦ದಿಗೆ ಕಳೆದ ಕೆಲವು ಕ್ಷಣಗಳು ನನ್ನಲ್ಲಿ ಜೀವನ್ ಪ್ರೀತಿಹುಟ್ಟುಹಾಕಿವೆ ನಿಮ್ಮನ್ನು ಬೇಕ೦ತಲೇ ಹೊಗಳುತ್ತಿಲ್ಲ.. ತುರುವಿಹಾಳ್ ಚ೦ದ್ರು ನ೦ತೆ ನೀವು ಕೊಡ ವಿರಳ ಗೆಳೆಯರೇ…

ಸರ್, ಈ ಉಗ್ರತನವನ್ನ ಯಾವ ರೀತಿ ಬಗೆಹರಿಸೋಣ ಹೇಳಿ ? ನಮ್ಮಗಳ೦ತೆ ನಮ್ಮ ನಮ್ಮ ಪಾಡಿಗೆ ಇರುತ್ತಾ .. ಮಾತಾನಾಡಿಕೊಳ್ಳುತ್ತಾ.. ಅಬಿಪ್ರಾಯ ಹ೦ಚಿಕೊಳ್ಳುತ್ತಾ… ಬರಹ ಬರೆ‍ಯುತ್ತಾ…
ಉಹು೦ ಸರ್, ನಮ್ಮಗಳ ಮಾತಿಗೆ..ಬರಹಕ್ಕೆ.. ಕೊನೆಗೆ ಎದೆಯಲ್ಲಿ ಅವರಿಗಾಗಿ ತೆಗೆದಿಟ್ಟ ನಮ್ಮಗಳ ಪ್ರೀತಿಗೆ ಅವರು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ.. ನೋಡಿ ನಾನು ಅವರ ಬಳಿ ಕೋವಿಯನ್ನು ಬಿಟ್ಟು ಭೇಟಿಯಾಗಲು ಹೋಗುತ್ತೇನೆ ಅಕಸ್ಮಿಕವಾಗಿ ನಾನು ಅವರ ಗು೦ಡಿನಿ೦ದ ಸತ್ತರೆ ನಿಮಗೆ “ಭಯೋತ್ಪಾದಕ” ಎ೦ದು ಜಗತ್ತು ಹಣೆಪಟ್ಟಿಕಟ್ಟಿದರೆ ಕ್ಷಮಿಸಬೇಕು, ನೀವೆಲ್ಲಾ ಬರಹಗಾರರು.. ಸಾಹಿತಿಗಳು … ಕವನ ಬರೆದು ಅವರನ್ನ ಬಯ್ಯುವುದರೊಳಗಾಗಿ.. ಉಗ್ರರನ್ನ ಖ೦ಡನೆ ಮಾಡುವುದರೊಳಗಾಗಿ.. ಸಮಾಧಿಯಲ್ಲಿನ ನಾನು ಹಾರಿಸುವ ಕೋವಿಯ ಗು೦ಡು ಅವರ ಪ್ರಾಣ ತೆಗೆದಿರುತ್ತದೆ ಇದ೦ತು ನಿಮ್ಮೊ೦ದಿಗೆ ಹ೦ಚಿಕೊಳ್ಳಬಹುದಾದ೦ತ ಸತ್ಯ. ಅದು ಸಾವಿನ ಬೆಳೆ ಬೆಳೆದರೂ ನಾನು ಕೋವಿಯನ್ನ ಹಿಡಿದೇ ಹಿಡಿಯುತ್ತೇನೆ ಅಪ್ಪಣೆ ಕೊಡುತ್ತೀರಿ ತಾನೆ ? ನೋಡಿ ಮುಗ್ದಮನಸ್ಸಿನ ನಿಮ್ಮದೇ ಗೆಳೆಯ ಈ ರೀತಿ ಮಾತಾಡಿ ದೂರ ನಡೆಯುತ್ತಾನೆ ಅ೦ದ್ರೆ ನಿಮ್ಮಗಳ ಕಾಲ ಘಟ್ಟದಲ್ಲಿ ಬದುಕು ಬೇರೆಯಾಗಿ ನಡೆಸಿಕೊ೦ಡಿದೆ ಅ೦ತಾನೆ ಅಥ೯..ಸುಮ್ಮ ಸುಮ್ಮನೇ ನಾನು ಕೋವಿಯನ್ನು ಬಳಸಲಾರೆ ಎ೦ದು ತಿಳಿಸಿ ಕೋವಿ ಬಳಸುವ ನನ್ನ ಮನಸ್ತಿತಿಯ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟು, ನಾನು ಮು೦ದೇನಾದರು ಆಗಲಿ ನಾನು ಈ ಜಗದ ಗೆಳೆಯ ! ಎ೦ದು ತಲೆ ಬಾಗಿದ್ದೇನೆ ನಿಮ್ಮ ಪ್ರೀತಿಗೆ. ಉಗ್ರರಿಗೆ ನಿಮ್ಮ ಪ್ರೀತಿಯ ಗಾಳಿ ಜಾದು ಮಾಡಿಬಿಡಲಿ..ನಿಮ್ಮ ಈ ಮುಗ್ದ ಹೂ ಮನಸ್ಸಿನ ಹುಡುಗ ನೀವು ಬಯಸಿದ೦ತೆ ಮದುವೆ ಇನ್ನೂ ಲೇಟ್ ಆದ್ರೂ ಪರವಾಗಿಲ್ಲ ಸರ್, prema ಕವನ ನಿಮಗಾಗಿ ಬರೆದು ತರುತ್ತಾನೆ!.
– siddu devaramani

ಭಾವ ಪೂಣ೯ ನಮನ : ಸ೦ದೀಪ, ಹ೦ಪಿಗೆ ಬ೦ದಿದ್ದ

a real hero

a real hero

ಸ೦ದೀಪ ..  ನಿನಗೆ ಭಾವ ಪೂಣ೯ ನಮನ. ನಾಡ ತು೦ಬೆಲ್ಲ ಈಗ ನಿನ್ನದೇ ಮಾತು.
ಸ೦ದೀಪನೂ ನಮ್ಮಗಳ ಹಾಗೆ ಅಕು೯ಟ್ ನಲ್ಲಿದ್ದ. ಆತನ ಕಮ್ಯುನಿಟಿ ಗೆ ಸೇರಿರಿ..
ಆತನ ಜುಲ್ಯೆ ತಿ೦ಗಳ ಹ೦ಪಿ ಭೇಟಿಯ ಪೋಟೋ ಗಳು ನನ್ನ ತು೦ಬಾ ಕಾಡಿದವು..

ಹಾಗೆ ಕಾಡಿದ ಆತನ ಅಕು೯ಟ್ ನ ವಿಳಾಸ ಇದು.. ನೋಡಿ

A Tribute to our real Hero,
http://www.orkut.com/Main#Profile.aspx?uid=5185304287748406909

 

ಈ ವಸ೦ತನೇ ಹೀಗೆ…

 

ನಾನು ಚೆ ಗುವಾರ.. ಅ೦ತನೇ ಹ೦ಪಿ ಯುನಿವಸಿ೯ಟಿ ಲೇಡಿಸ್ ಹಾಸ್ಟೆಲ್ನಲ್ಲಿ ವಲ್ಡ್ ಫೇಮಸ್ ಇದ್ದ ದಿನಗಳವು.
ಅದ್ಯಾಕೆ ಫೋನ್ ನಲ್ಲಿ ರಿ೦ಗಾಯಿಸಿ ಹೆಸರು ಹೇಳದೆ ಕಾಡಿದಳೋ…
ನಿಮ್ಮೂರು ಯಾವುದು? ಕೇಳಿದೆ
ನಮ್ಮೂರಿಗೆ ಹೆಸರೇ ಇಲ್ಲ.. ಹೇಳಿದಳು
ಅಶ್ಚಯ೯..ನ೦ಗೆ.
ಅರುಣ್ ನಿಗೆ ಹೇಳಿದರೆ ಕಥೆ ಬರೀತಿದ್ದ ಅ೦ದೆ..
ನೀವು ಯಾಕೆ ಕವನ ನನ್ನ ಮೇಲೆ ಬರೀಬಾರದು? ಅ೦ದಳು

ಹೀಗೆ ದಿನಗಟ್ಟಲೇ ಹೆಸರೇಳದೇ ಕಾಡಿಸಿದ ಗೆಳತಿಯ ಬಗ್ಗೆ ಬರೆದಿದ್ದು..

images183
 

 

 

 

 

ಇಲ್ಲೀಗ ನೆತ್ತಿಯ ಮೇಲೆ
ಉಸಿರ ಚೌಕಟ್ಟಿನ ಹ೦ದರ..
ಕಣ್ಣ ಮಿಟುಕಿಸಿ ಕಾಲಿಟ್ಟ

ಹೆಸರಿಲ್ಲದ ಊರ ಹುಡುಗಿಯ
ಮನದೊಳಗಿನ ಮಾತು..
ಅವಳಿಟ್ಟುಕೊ೦ಡ ಹೆಸರು ..
ಕಾಡಿಸುವ ಹುನ್ನಾರ ..ಏನಿತ್ತೋ ಎನೋ

ನಮ್ಮೂರ ಕೆರೆ ಅ೦ಗಳದ
ಹಾಡು ಹಕ್ಕಿಯ ಜಡದ ಕ೦ಗಳಿಗೆ
ಜಡಿ ಜಡಿದು ಬಿದ್ದ ಮಳೆ ಇ೦ಗದೆ..
ನೆನಪ ನು೦ಗದೆ .. ದಿನಗಳೆಲ್ಲವು ತಿ೦ಗಳಾಗಿವೆ.

ಈ ವಸ೦ತನೇ ಈಗೇ
ಬೆರಗು ಬಿನ್ನಾಣಗಳ ಕಡತ೦ದು
ಸೊಬಗ ಸೃಷ್ಟಿಸಿ ಕೈಗಿಟ್ಟು
ಲೆಕ್ಕವಿಡದೆ ಹೊರಟುಬಿಡುತ್ತಾನೆ
ನಾನೋ ಸಹಜ ಚಿತ್ತಾರದ ಕಲೆ !

ನನ್ನ ಕನಸುಗಳೇ ಹೀಗೆ
ಸಾವ ಸವಲತ್ತುಗಳನೆಲ್ಲಾ ಮರೆತು
ಕಟ್ಟಿಕೊ೦ಡ ಕ೦ತೆ ಹರಡಿಕೊ೦ಡು
ಕಣ್ಗಾವಲಿಗೆ ನಿದ್ರೆ ತಿ೦ದು ಕೂರುತ್ತವೆ.

ನೀನೋ ದೂರ ದಿಗ೦ತದ ಸಿ೦ಗಾರ!
ನಿಜ, ನನ್ನೆದುರಿಗಿನ ಮರದಲ್ಲಿ
ಚಿಗುರುವ ಎಲೆ, ಉದುರಿದ ಮಾತಿಲ್ಲ ..!

ಹೆಸರು ಹೇಳದೆ ನಿನ್ನ೦ತೆ ಅದೆಷ್ಟು ತಾರೆಗಳು
ಮಿನುಗುತ್ತಿಲ್ಲ ಇಲ್ಲಿ…!?
ಅಲ್ಲೆಲ್ಲೋ ಈಚೆಗೆ ಆಕಾಶ
ಅವಡುಗಚ್ಚಿ ಅತ್ತ ಸುದ್ದಿಯ೦ತೆ !

-ಸಿದ್ದು ದೆeವರಮನಿ