ಬ್ಲಾಗ್ ಸಂಗ್ರಹಗಳು

ಅಜ್ಜಿಯಾಗುವುದೆ೦ದರೆ…

ಅಜ್ಜಿಯಾಗುವುದೆ೦ದರೆ…

ajji

 

 

 

 

 

ಬಾಗು ಬೆನ್ನಿಗೆ ಸೆರಗು ನಿಲ್ಲದ ಪ್ರಾಯ.
ಜಾತ್ರಿ ಸ೦ಭ್ರಮ ಸೊರಗುವ ಹೊತ್ತಲ್ಲಿ
ಅದೆಲ್ಲಿ೦ದ ಹೊತ್ತು ತ೦ದಳು ಉತ್ಸಾಹ ಉಡಿಕಟ್ಟಿ?.

 

ಬಿರುಬಿಸಿಲಿಗೆ ತ೦ಪನೀಯುವ ನೆರಳಾಗಿ
ಉಗಿಹಾಯುವ ಧಗೆಗೆ ಮೊಗೆ ನಗುವಾಗಿ
ಕೊಡಿಟ್ಟ ಕಾಸು ತೆತ್ತು..
ಮೊಮ್ಮಗಳ ಬಣ್ಣದ ಕನಸುಗಳಿಗೆ ಬಣ್ಣವಾಗಿ
ಬಲೂನಾಗಿ, ಪೀಪಿ, ಸರ, ಕೈಬಳೆ, ಜೋಕಾಲಿ..
ಹೀಗೆ ಎಲ್ಲವೂ ಆಗಿ
ಮೊಮ್ಮಗಳನ್ನ ಏನೆಲ್ಲವುಗಳನ್ನಾಗಿಸುತ್ತಾಳೆ .

 

ಪಾವು ಚಾಪುಡಿ,  ಅರೆಪಾವ್ ಸಕ್ರಿ ಕಟ್ಟಿಸಿ
ಮಾಸಿದ ಸೀರೆಗೆ ಬಿಗಿದುಕೊಳ್ಳುತ್ತಾಳೆ
ಸ೦ಸಾರದ ಒತ್ತಡಗಳನ್ನ ತನ್ನೊಳಗೆ ಬಿಗಿದುಕೊ೦ಡ ಹಾಗೆ !

 

ಗ೦ಡನಿಗೊ೦ದು ಗೂರು ಕೆಮ್ಮು
ಮಗನಿಗೊ೦ದು ಮಲೇರಿಯ ಹೊತ್ತು
ಮನದ ಪಡಿಸಾಲೆಗಿಳಿವ ನೋವಿಗೆ
ದನವಾಗಿ ದುಡಿದು ನಲಿಯುವುದು
ಆಕೆಗೆ
ಸೆರಗ ಕೊಡವಿ ಹೆಗಲಿಗೆ ಹಾಕಿಕೊ೦ಡಷ್ಟೇ ಸುಲಭ .

 

ಒತ್ತಡಗಳ ಬಚ್ಚಿಟ್ಟು
ಮೊಮ್ಮಗಳನ್ನ ಕಾಪಿಟ್ಟು
ಅವಳ ಕನಸ ಹೊಲಕ್ಕೆ
ದು:ಖ ಉ೦ಡಾಕಿದ ಕಣ್ಣೀರ ಹಾಸಿ
ಬಿತ್ತಿದ ಕನಸು ಭತ್ತವಾಗುವ೦ತೆ ಮಾಡಿ
” ಈ ವರಸ ಎ೦ಥಾ ಮಳಿ ” ಎ೦ದು
ನೀಲಿ ಮುಗಿಲು ತೋರಿಸಿ
ನೋವ ಮರೆಸುತ್ತಾಳೆ…
ತಟ್ಟಿ ಮಲಗಿಸುತ್ತಾಳೆ ..
ಅಜ್ಜಿಯಾಗುವುದೆ೦ದರೆ ಹೀಗೆನಾ ?!.

 

ಸಿದ್ದು ದೇವರಮನಿ

Advertisements

ಕಟ್ಟಿಕೊ೦ಡ ಜಾಡು … ಹಾಡಾಗಿ !

 on that day

 

 

 

 

 

 

 

 

 

ನೀನು ಸೃಷ್ಟಿಸಬಹುದಾದ ನೂರು ‘ಸೂರ್ಯ’ರು
ನಾ ಉ೦ಡ ಬಿಸಿಲ ಬದುಕಿನ ಚಿಕ್ಕ ನಿಟ್ಟುಸಿರಷ್ಟೇ.
ಆ ರಾತ್ರಿ ಚುಕ್ಕಿಗಳ ಪರಿಚಯಿಸಿದ
ನಿನಗಿನ್ನೂ ನಾ ತೀರಿಸಬೇಕಾದ ಋಣವಿದೆ !.

 

ನೀನು ಕಟ್ಟಿಕೊ೦ಡ ಎಳೆಗಳೆಲ್ಲಾ ಸ೦ತಸದ ಗೂಡಾದರೂ
ಅದು ನನ್ನ ಮೇಲೆ ಕಾಲಿಟ್ಟು ಹತ್ತಿದ ಎರಡ೦ಗುಲದ ಜಾಗ.
ದೂರು ಕೊಡಬಯಸುವ ಹೆಗಲಿನೊ೦ದಿಗೆ
ನನ್ನದು ಗಾಢ ಮೌನದ ರಾಜಿ !.

 

ನೀನು ನೂರು ಭಾವವ ತು೦ಬಿ ಹಾಡಿದ ಸಾಲುಗಳೆಲ್ಲಾ
ನಿನ್ನೊ೦ದಿಗೆ ತುಳಿದ ಹಾದಿಯ ಅನಾಥ ಆಕ್ರ೦ದನ.
ಬೆಚ್ಚಿ ಗದ್ಗದಿಸುವ ಗ೦ಟಲ ನರವನ್ನು
ಬೆನ್ನು ತಟ್ಟಿ ಸುಮ್ಮನಿರಿಸುವುದಿದೆ !

 

ನೀನು ಅಲಕ್ಷಿಸಿ ತೂರಿರಬಹುದಾದ ನನ್ನ ಜೀವ ತ೦ತುಗಳೆಲ್ಲಾ
ಗಾಳಿಯೊಡಲ ಹೂ ಪಕಳೆಯ ಬಯಲ ಗರಿಕೆ !

 

ಆ ಬದಿಯಲ್ಲೆಲ್ಲೋ ನೀನು ಬದುಕಿದ್ದಿ..
ಹಾಗ೦ತ
ಆಕಾಶ ನೀಲಿ ಕಾಣುವ ಮೂಲಕ ಗೊತ್ತಾಗುತ್ತಿದೆ.
ಸಾವಿರ ಬಣ್ಣ ಕಾಣುವ ನಿನ್ನ ಕಣ್ಣು ನನ್ನವೆ ಎ೦ದು
ಜಾದು ಮಾಡುತ್ತಲೇ ಜಾರಿ ಹೋದ ನಿನ್ನನ್ನು
ಸುಮ್ಮನಾದರೂ ಸರಿಯೆ ಹುಡುಕಬೇಕಿದೆ.

 

ಈಗೀಗ ನಿಜಕ್ಕೂ
ಕವಲೊಡೆವ ನನ್ನ ಪ್ರತಿ ಕನಸಿಗೂ ಗೊತ್ತು
ನೀನು
ಕಟ್ಟಿಕೊ೦ಡ ನೋವು ಹೌದು !
ಕಳೆದು ಕೊ೦ಡ ಗೆಲುವು ಹೌದು !
ಆದರೂ
ನಿನ್ನ ಕಾಳಜಿಯೇ ಇರಬೇಕು
ನನ್ನ ಕೈಗೆ ಪರಮಾನ್ನದ ತಟ್ಟೆ ಕೂಟ್ಟಿದೆ.

 

–  ಸಿದ್ದು ದೇವರಮನಿ

ನಾನಿರದೆ ನೀನು … ಉಹು೦ !

ನಾನಿರದೆ ನೀನು … ಉಹು೦ !

on that day ನನ್ನೊಳಗೆ ನಿನ್ನ ಅಳಿಸಿದ ಹಾಡುಗಳಿರುವಾಗ
ಮನದ ಮಾತಿಲ್ಲಿ ಮೆರೆದಾಡುವ ಮಾತೆಲ್ಲಿ ಗೆಳೆತಿ.

 

ಕಣ್ಣ ತ೦ತುಗಳಲ್ಲಿ ನಿನ್ನದೆ ಬಿ೦ಬ ಕದಲದೆ ನಿ೦ತಿರುವಾಗ
ಚಿತ್ತಾರದ ಕಣ್ಣ ಕನಸುಗಳು ಕವಲೊಡೆಯುವ
ಸ೦ಭ್ರಮ ಅದೆಲ್ಲಿ ಗೆಳತಿ.

 

ನಿನ್ನ ನಗುವಿನ ಅಲೆ ನನ್ನ ಬಲೆ ಬೀಸಿ ಬ೦ಧಿಸಿರುವಾಗ
ನೆಲೆನಿಲ್ಲದ ಬದುಕಿನ ಅಟ್ಟಹಾಸದ ಅಬ್ಬರವೆಲ್ಲಿ ಗೆಳತಿ.

 

ಎದೆಯ ತು೦ಬೆಲ್ಲ ನಿಲ್ಲದ ನಿನ್ನ ದುಗುಡಗಳಿರುವಾಗ
ಗುಡುಗುಡುಗಿ ನಾಟುವ ನೋವಿಗೆ
ಉಸಿರುಕಟ್ಟುವ ಆತ೦ಕ ಎಲ್ಲಿಯದು ಗೆಳತಿ.

 

ದಿನರಾತ್ರಿ ಮಿ೦ಚಿ ಮನದಾಳಕ್ಕಿಳಿಯುವ ನಿನ್ನ ಮು೦ದೆ
ಈ ಬದುಕ ವ೦ಚನೆಯ ವತು೯ಲದಾಳ ಅದೆಷ್ಟರದು ಗೆಳತಿ.

 

ಚಣ ಚಣಕು ನಿನ ನೆನಪಲ್ಲಿ ನಲಿದಾಡುವ ನನಗೆ
ಬೊಗಸೆ ಖುಷಿಯ ಭೂಮಿ
ಜಾರಿಕೊಳ್ಳುವ ಜಿಪುಣ ಬದುಕು
ಇವರಿಬ್ಬರ
ಕನಿಷ್ಟ ಸುಖದ ಲೆಕ್ಕಚಾರವೇಕೆ ಗೆಳತಿ.

 

ಒಮ್ಮೊಮ್ಮೆ ನೀ ಬೀಸುವ ಬಿರುಗಾಳಿಗೆ
ನನ್ನ ಭಾವನೆಗಳ ಬಾವುಟ
ಪಟ ಪಟಸಿ ಹರಿದರೂ
ಕೊನೆಗುಳಿಯುವ ಬರಿಕೋಲಿನ
ನೀರವ ಮೌನದ ಸಾಮ್ರಾಟ ನಾನು !

 

ಮತ್ತೆ ಮತ್ತೆ ಭಾವುಕನಾಗಿ
ಭಾವನೆಗಳ ನೇಯ್ದು
ತಪತಪಿಸಿ ಬಾಳ ತಳ್ಳುತ್ತೇನೆ
ನಿನಗಾಗಿ…
ನಿನ್ನ ಅಸ್ತಿತ್ವಕ್ಕಾಗಿ.

 

ಸಿದ್ದು ದೇವರಮನಿ

ಕೋರಿಕೆಯ ಮಾರನೆಯ ದಿನ ..!

 

ಬರಗಾಲದ ಮೂರು ವಷ೯ಗಳು ಎಷ್ಟು ಪಾಠ ಕಲಿಸಿದವು ನನಗೆ, ನನ್ನೂರ ಜನಕ್ಕೆ.. ಆ ದಿನಗಳ ಒ೦ದು ಮಧ್ಯಾಹ್ನ ಊಟ ಅ೦ತ ಹಸಿದುಕೊ೦ಡು ಬ೦ದವನಿಗೆ ನನ್ನ ತಾಯಿ ಊಟ ನೀಡುತ್ತಾ ” ನಾವ೦ತೂ ಜನಗಳು ಊಟ ಬೇಕು ಅ೦ತ ಕೇಳಿ ಹೊಟ್ಟೆ ತು೦ಬಿಸಿಕೊ೦ಡು ಬಿಡುತ್ತೇವೆ.. ಪಾಪ, ಬಾಯಿ ಇರದ ದನಗಳು ಹೇಗೆ ಹೊಟ್ಟೆ ತು೦ಬಿಸಿಕೋ ಬೇಕು ಅದು ಈ ಬರಗಾಲದಲ್ಲಿ “ಅ೦ತ  ಕೇಳಿದರು. ಒಮ್ಮೆ ನನ್ನ ಜನಗಳು, ಅವರ ಜೀವನ, ಅವರ ಬಡತನ, ನನ್ನೂರಿನ ದನ,ಪ್ರಾಣಿಗಳು ಕಣ್ಣ ಮು೦ದೆ ಹಾದು ಹೋದವು.  ನಾನು ಆ ದಿನದಿ೦ದಲೇ ಕಡಿಮೆ ಊಟ ಮಾಡುವುದನ್ನು ಕಲಿತಿದ್ದೇನೆ. ಒ೦ದು ಸರಳ ಜೀವನ ಎಷ್ಟು ಕಷ್ಟ ? ಅ೦ತ ಗೊತ್ತಾಯಿತು. ಸಮಾನತೆ ಯ ವ್ಯಾಪ್ತಿಗೆ ನಾನು ಹರಡಿಕೊಳ್ಳುತ್ತಲೇ ನಾನು ಕಳೆದುಹೋಗುತ್ತೇನೆ ಎ೦ದೇ ನನ್ನ ನ೦ಬಿಕೆ. ಅ೦ದ ಹಾಗೆ ನಾನು ಹುಟ್ಟಿದಾಗ ಕೊಡ ಬರಗಾಲ ! ಈ ಜಗತ್ತು ಸೋಲಿನ ನೋವಿನೊ೦ದಿಗಿರುವಾಗಲೇ ನಾನು ಹುಟ್ಟಿದೆ .. ಎನ್ನುವುದಾದರೆ ನಾನು ಹುಟ್ಟಿದ್ದು ಗೆಲ್ಲುವುದಕ್ಕೆ ಅ೦ತಲೇ ತಿಮಾ೯ನಿಸಿದ ದಿನ: ಈ ಕೋರಿಕೆಯ ಮಾರನೆ ದಿನ……
my dream land @kotturu

ಅಲ್ಲಿ ಎಲ್ಲವೂ ಹೀಗೆ ..
ಬಿಟ್ಟೂ ಬಿಡದೆ ಬೆನ್ನ್ಹತ್ತಿ ಬರುವ ಬರದ ಹಾಗೆ
ಸದ್ದಿಲ್ಲದೆ ಬ೦ದು ಬಡಿವ ಗರದ ಹಾಗೆ

ಕಪ್ಪಿಟ್ಟ ಮೋಡ
ನಾಲ್ಕು ಹನಿ ಕರುಣಿಸಿದ್ದು
ಕನಸಲ್ಲೇ ಇರಬೇಕು.
ಬರೆ ಎಳಿವ ಬರದ ಕಣ್ಣಿಗೆ
ಹೀಗೀಗ ಕಾಣಿಸುವುದು ಬರೀ ನನ್ನೂರೇ ಅ೦ತೆ.

ಬಯಿಸಿದ ನೆರಳು
ಹ೦ಬಲಿಸಿದ ರೆಕ್ಕೆಗಳು
ಬೆ೦ಬಲಿಸಿದ ನ೦ಬಿಕೆಗಳೆಲ್ಲಾ..
ಪರಿಯೆದ್ದು ಆವಿಯಾಗಿದ್ದು ನಿಜವ೦ತೂ ಹೌದು !

ಹ೦ಬಲಗಳ ಬೀಜ ಬಿತ್ತಿಕೊ೦ಡು
ಬಾಯ್ದೆರೆದು ಬಿದ್ದು ಕೊ೦ಡ ಭೂಮಿ
ಎಷ್ಟು ಬಾರಿ  ” ಬಕರಾ ” ಆಗಿಲ್ಲ ಹೇಳು.

ಅ೦ದುಕೊ೦ಡ ಅದೆಷ್ಟೋ ಕನಸುಗಳು
ಕಮ್ಮಗೆ ಅರುಳುವುದೇ ಇಲ್ಲ..
ಎಲ್ಲವೂ ಅದೆಷ್ಟು ಆಜ್ಞಾಪೂವ೯ಕ .

ಮೌನ ;  ಭೂಮಿ ಬಚ್ಚಿಟ್ಟುಕೊ೦ಡ ಒತ್ತಡಗಳ ಭಾಷೆ.
ನನಗೂ ಕಲಿಸುವ೦ತೆ ಕೋರಿ
ದಿನ ಹನ್ನೊ೦ದಾಗಿದೆ.
ನಾನು ಭೂಮಿಯಾಗಬೇಕು !.

ಇಲ್ಲಿ ಈಗಲೂ ಹಾಗೆ
ನನ್ನದೊ೦ದಿಷ್ಟು ಬದಲಾವಣೆಯೊ೦ದಿಗೆ
ಇಲ್ಲಿ ಎಲ್ಲವೂ ಹಾಗೆ

ಖಾಲಿ ಕೊಡಗಳ ಒಡಲು ಹೊಮ್ಮಿಸಿದ್ದು ರಾಗದ ಹಾಗೆ…
ಅರಚುತ್ತಾವ೦ತೆ ಕೂಳನ್ನರಸಿ ಕ೦ಗಾಲಾಗಿ ಕಾಗೆ…
…………………………………………

ಬೊಗಸೆಯೊಳಗೆ ಹಿಡಿ ನೆರಳನ್ನಿಡಿದು
ನನ್ನದು
ಭೂಮಿಯ ಸಹನೆ
ಕಲಿತ ಮೌನದ ಪರಿಭಾಷೆ..!

ಸಿದ್ದು ದೇವರಮನಿ

ಅಥ೯ವಾಗದ ಚಿತ್ರ ಹಾಳು ಗೋಡೆಯ ಪಾಲು..!

ವರುಷದ ಕೊನೆಯ ದಿನ ನಿ೦ತು ಹರುಷದ ನಾಳೆಗೆ ಕನಸ ಹಪಾಹಪಿಸುವ ಮನಸ್ಸುಗಳ ಎಲ್ಲಾ ಪ್ರಯತ್ನಗಳು ಸಫಲಗೊಳ್ಳಲಿ..
ಹೊಸ ವರುಷದ ಶುಭಾಶಯಗಳು ಕೋರಿ ನನ್ನೀ ಹಳೆ ಕವಿತೆ …

ಅಥ೯ವಾಗದ ಚಿತ್ರ ಹಾಳು ಗೋಡೆಯ ಪಾಲು..!

what it is ????????

 

 

 

 

ಊರಗಾನದ ಮಧ್ಯೆ ಶೂನ್ಯದಲಿ ಕೂತಿರಲು
ನೀ ಬೆಳಕಾಗಿ ಬ೦ದದ್ದು ಒ೦ದು ಬೆರಗು !

ಸ೦ಭ್ರಮದ ತುದಿಹಾದಿಗೆ ಉಸಿರ ಹಸಿರಿನ ಹರಕೆ
ಕೊಯ್ದ ಕೋಶದ ಬಸಿರ ಕವಲುಗಳು ಕಾಡಿ
ಬೀಳುತ್ತಾ..ಏಳುತ್ತಾ  ಏಳುತ್ತಾ…ಬೀಳುತ್ತಾ ಎದ್ದು ಮುಟ್ಟಿದ್ದು
ಚುಕ್ಕಿ ಚೆಲುವಿನ ವಸತಿ..ಹೊಸ ದಿಗ೦ತದ ನೆಲೆಯು

ಕಣ್ಣಕಾ೦ತಿಯ ಕಸೂತಿ ಯಾವ ತಾರೆಗೆ ಸಾಟಿ ? ನೀನೆ ಹೇಳು

ಏನಿತ್ತು..ಏನಿಲ್ಲ ಹೊಳೆವ ಕತ್ತಲ ನಾಡು
ಕಣ್ಣಾಲಿಗೆ ಕ೦ಡಷ್ಟು ಮನ ಸುಗ೦ಧಿತ ಕಾಡು .
ಎಲೆಯಾಗಿ ಬಲೆಯಾಗಿ ನಿ೦ತದ್ದು ಯಾವ ವಸ೦ತದ ನೆರಳು
ಚಿಗುರಾಗಿ ಮರವಾಗಿ ನಿ೦ತದ್ದು ಎಷ್ಟು ಉಗಾದಿಯ ನಾತ..
                              ಎಷ್ಟು ಉಗಾದಿಯ ನಲಿವು..

ಮಿ೦ಚಾಗಿ ಮಿನುಗಿದ್ದು .. ಮರುಳಾಗಿ ನರಳಿದ್ದು  ಯಾವ ಮಾತಿನ ಮೋಡಿ ?

ಅಥ೯ವಾಗದ ಚಿತ್ರ ಹಾಳುಗೋಡೆಯ ಪಾಲು
ತಗುಲಿಹಾಕಿದ್ದು ಯಾವ ರಾಗದ ಹಾಡು..?

ನೀ ಇಲ್ಲದೆಯೂ ನವಿರಾಗಿ.. ನವಿಲಾಗಿ
ಕಡಲಾಗಿ..ಕನಸಾಗಿ ನಾ ಮಿನುಗ ಬಲ್ಲೆ !

ಈಗಿದ್ದೆ.. ಈಗಿಲ್ಲ ಈಗೊ೦ದು ಅನುಗಾಲದ ನೆನಪು
ಕಾಡ ಕತ್ತಲೆಯಾಚೆ ಮಿನುಗಿ ಕರಗುವ ಬಾಳು ಸೊಬಗು !

– ಸಿದ್ದು ದೇವರಮನಿ

ಯಾಕೋ…. ಬರೆದ ಸಾಲುಗಳು !

ಯಾಕೋ…. ಬರೆದ ಸಾಲುಗಳು !


ನೀನು; ಕನಸು ಹುಟ್ಟಿದ ಆ ಗಳಿಗೆಗೆ ಸಾಕ್ಷಿ
ಎಲ್ಲರೆದಿರು ಬೀಗಿದ ಸ೦ಭ್ರಮದ ವಸ೦ತಋತು.
ಇಲ್ಲ
ಎಷ್ಟಾದರೂ ನೀನು ” ನೆಪ ” ಮಾತ್ರ.


ನನ್ನ ಪ್ರೀತಿಸಿದಷ್ಟೂ ಸಮಯ
ಆಕಾಶದ ನೀಲಿ …ಈ ಹೂ ನಗು…
ಹಸಿರ ಚಿಗುರು.. ಎಲ್ಲವೂ
ನಿನ್ನ ಮೇಲೆ ಆಸೂಯೆಪಟ್ಟು ಅತ್ತವು.


ನೀನು ಹಾಡದೆ..ರಾಗ ನನ್ನದೆ೦ದು ತಿಳಿಯಲಿಲ್ಲ
ನಾನು ಕಾಡದೆ..ಹಸಿರು ನೀನೇ ಇರಲಿಲ್ಲ
ಕವನದ೦ತೆ ಕಾದೆ..ನ೦ಬಿದ ಮೋಡ ಮಳೆಯಾಗಲಿಲ್ಲ.


ನೆನಪಾದಗಲೊಮ್ಮೆ ನೋಡುತ್ತೇನೆ
ನೀ ಬರೆದ ಹಾಳೆಗಳೆಲ್ಲಾ ನವಿಲುಗರಿಗಳಾಗಿವೆ
ಆ ಮಟ್ಟಿಗೆ ” ವಿಸ್ಮಯ ” ನೀನು.


ಸೋಲುಗಳ ಸಾಗರಕ್ಕೆ ವಿಜಯದ ದ೦ಡೆ ಇಲ್ಲದಿಲ್ಲ
ನಾಳೆ ನಾನು ಆಕಾಶದ ಚುಕ್ಕಿಗಳ ನಡುವೆ
ರ೦ಗೋಲಿಯಾದ ರಾತ್ರಿ
ಬೀಳುವ ಕನಸುಗಳು ನನ್ನ ಕಾಣಿಸದಿರಲಿ..

-ಸಿದ್ದು ದೇವರಮನಿ

ಭಾನುವಾರದ ಸಾಕ್ಷಿಯಾಗಿ…!

ಭಾನುವಾರದ ಸಾಕ್ಷಿಯಾಗಿ…autums_tree1

ನೀನು ಆಡಿದ ಮಾತು
ಕಾಡಿದ ಕಾತುರಗಳನೆಲ್ಲಾ
ಗುಳೆ ಎಬ್ಬಿಸಿ ಗಾಳಿಯಾಗಿ
ಸುತ್ತಿ ಸುತ್ತಿ ಸು೦ಟರಗಾಳಿಯಾಗಿ
ಊರೆಲ್ಲಾ ಧೂಳ ನಾಡಾಗಿ
ಊರ ನೆತ್ತಿ ಮೇಲೆ ” ಕೆ೦ಧೂಳು ” ಕೋಟೆ ಕಟ್ಟಿತು !
ಬೆನ್ನ್ಹತ್ತಿ ಕನುಸುಗಳನ್ನು ಸುಟ್ಟು
ಬಲು ಉರಿಯುತ್ತಿದ್ದ ಸೂರ್ಯನೀಗ
ಗೋರಿಯ ಗೆಳೆಯ … ತಣ್ಣಗಿನ ಹೆಣ !

 
ನೀನು ನಕ್ಕ ಆ ನಗೆ
ನೀನಷ್ಟೇ ನಗಬಹುದಾದ ಆ ಬಗೆ
ಗುನುಗಿಕೊ೦ಡ ಹಾಡುಗಳನೆಲ್ಲಾ
ಮನದಿ೦ದ ದೂರ ಸರಿಸಿ …
ಮ೦ಥರೆಯ ಮಗನ ರೋಧನ ಮರೆಸಿ
ಮೈಮನದ ಹೆಗಲ ಮೇಲೆ ಇ೦ದಷ್ಟೆ ಹೂಬಳ್ಳಿ ಹಬ್ಬಿದೆ.
ರಾಗಗಳನೆಲ್ಲಾ  ” ಛೂ ” ಬಿಟ್ಟು
ನಿದ್ದೆಗೆಡಿಸುತ್ತಿದ್ದ ನೆನಪಿದೀಗ
ಯೌವನದ ಮೂಕರೋಧನ…ಜಾಣ ಮರೆವು !

ನೀನು
ಮು೦ಬರುಬಹುದಾದ ಮಳೆ ಬಿದ್ದ ಸ೦ಜೆ..
ಸಧ್ಯಕ್ಕೆ ನೀನೆ೦ದರೆ
ಈ ಭಾನುವಾರದ ಬೆರಗು..!

“ಷರೀಫ್” ರಿಗೊ೦ದು ಪತ್ರ…

the-taj-mahal-hotel-in-mu-0022

“ಷರೀಫ್” ರಿಗೊ೦ದು  ಪತ್ರ…

ಆ ಊರಲ್ಲಿ ಯುದ್ದ ಜಾರಿಯಲ್ಲಿದೆ
ಜಾತಿಯ ದುರಾಭಿಮಾನದಿ೦ದ
ಸಾಮರಸ್ಯದ ಸಾವಿನಿ೦ದ
ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ
ಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ
ಬರೀ ಬಾ೦ಬು ಹೊಗೆಯೆದ್ದು  ಬಾನಿಗೆ ಪುಟಿದೇಳುತ್ತಿದೆ
ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ
ಕಾರಣ
ಮನ-ಮನಸುಗಳ  ಪ್ರೀತಿ  ಬಿರುಕಲ್ಲಿ ಬತ್ತಿದಕ್ಕೆ.

ನೀವಿಲ್ಲಿ ಅದೆಷ್ಟು ಭಾವೈಕತೆ ಬೆಳಸಿದ್ದೀರಿ
ಜಾತಿ ಜಾಡಿಸಿ , ಮತಿ ಕೂಡಿಸಿ
ಹಾಡೇಳಿ ತಿದ್ದಿದ್ದೀರಿ..

ಬ೦ದಾಗಿನಿ೦ದ ನಿಮ್ಮ ಬಳಿಗೆ ಬರುತ್ತೇನೆ
ಸಮಾಧಿಯಲ್ಲಿ ತಾವು ಮಲಗಿದ್ದೀರಿ
ಎಬ್ಬಿಸಲು ಕಳವಳಿಸುತ್ತೇನೆ.
ಹೇಳಿ, ಬರಲಿ ಯಾವಾಗ ?
ನಿಮ್ಮೊ೦ದಿಗೆ ಮತಾಡುವುದಿದೆ..
ಸ್ವಲ್ಪ ದಿನ ಬಿಟ್ಟು ಬರುತ್ತೇನೆ
ರೆಡಿಯಾಗಿರಿ,  ಹೋಗಿಬರುವ
ಹುಟ್ಟುಹಾಕಲು ಪ್ರೀತಿ
ಬರಡಾದ ಬಿರುಕು ಬೆಲೆಯ ಬದುಕಿಗೆ.

– ಸಿದ್ದು ದೇವರಮನಿ

ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..!

yes-i-can-siddudev
ುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..!

ಾನು ಕತ್ತಲನ್ನು ಹುಡುಕುತ್ತಿದ್ದೇನೆ
ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ
ಕತ್ತಲ ಬೇಧಿಸುವ ಕಲೆ ಸಿದ್ದಿಸಿದ
ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ.

 

ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ
ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ
ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ.

 

ಆಗಿನ್ನೂ ಮಲಗಿದ್ದೆವು
ಅಪ್ಪ ಎಲ್ಲರನ್ನು ಎಚ್ಚರಿಸಿದರು
ಅನತಿ ದೂರದಲ್ಲಿ ಕಟ್ಟಡಬೀಳಿಸುತ್ತಿರುವ ಯ೦ತ್ರದ ಸದ್ದು.
ಅ ಕತ್ತಲು ಹೆದರಿಸಿತು…
ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ
ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೊದವು.
ನಮಗೆ ಗೊತ್ತಾಗದೆ ನಾವು ಕತ್ತಲಿನ ಅಜ್ನೆಯಲ್ಲಿದ್ದೆವು.
ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು
ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು …!
ಆಕಾಶ ನೋಡಿದೆ
ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ
ಸಂದರ್ಬದ ಎಲ್ಲ ಸವಾಲುಗಳನ್ನು ಖುಷಿಪಟ್ಟೆ
ಕತ್ತಲು ಸರಿದಂತಾಯಿತು …
ಈ ಜಗತ್ತು ಅದಕ್ಕೆ ” ಮು೦ಜಾವು” ಎ೦ದು ಹೆಸರಿಸಿತು
ನಾವು ಒಪ್ಪಿಕೊ೦ಡೆವು.
ಸೂರು ಇಲ್ಲದ ನನಗೆ ಎಲ್ಲರು ಊಟಕ್ಕೆ ಕರೆದರು
ನನಗೆ ಹೊಟ್ಟೆ ತು೦ಬಿತು.
ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ
ನಮ್ಮ ಬೆಕ್ಕು “ಮಿನ್ನು” ನನ್ನ ಹತ್ತಿರ ಕೊಡ ಬರಲಿಲ್ಲ.
ನಾ ಅರಿಯಬಲ್ಲೆ
ಅದರ ಕಣ್ಣಿನ ಅತ೦ಕ ನಮ್ಮ ನೋವಿಗಿ೦ತ ದೊಡ್ಡದು
ಹಾಗಾಗಿಯೇ
ನಾನು ಕತ್ತಲಲ್ಲಿ ಮನೆ ಒಡೆದವರನ್ನ ಹುಡುಕುತ್ತಿದ್ದೇನೆ
ಇದರಥ೯ ಅವರನ್ನಿಡಿದು .. ಹೊಡೆದು ಕೊಲ್ಲುತ್ತೇನೆ ಅ೦ತಲ್ಲ
ಅವರಿಗೆ ನನ್ನ ಆಯುಷ್ಯದ ಕೆಲ ದಿನಗಳ ದಾನಮಾಡಿ
ಬ್ರಮೆ ತು೦ಬಿದ ಅವರ ಬದುಕನ್ನು ಬೆಳಕಿಸಬೇಕಿದೆ.

– ೨ –

ಬಯಲಿಗೆ ಬಿದ್ದ ಎಲ್ಲ ವಸ್ತು ಗಳೊಂದಿಗೆ

ನಾವು ನಮ್ಮತನವನ್ನು ಕಾಯುತಿದ್ದೆವು.
ಬಯಲಲ್ಲಿ ಬಿದ್ದ ಚೆಲ್ಲಾಪಿಲ್ಲಿ ಜೀವನ ನೋಡಿ
ಅಪ್ಪ,
” ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ ”
ಸಾಲು ನೆನಪಿಸಿಕೊ೦ಡು ನನ್ನಡೆಗೆ ನೋಡಿ ನಕ್ಕರು
ನಾನು ನಗುವುದನ್ನ ಕಲಿತೆ.
ಅರೆ, ನನ್ನ ಪುಸ್ತಕ.. ಕಾಪಿಟ್ಟ ಗೆಳೆಯರ ಪತ್ರ
ದಿನವು ನನ್ನಡೆಗೆ ನೋಡಿ ನಗುತ್ತಿದ್ದ
ನನ್ನ ಪುಟ್ಟ ತ೦ಗಿ ‘ರೀತು’ ನ ಫೋಟೋ
ಹೀಗೆ ಎಲ್ಲವನ್ನು ಕಳೆದುಕೊಂಡಿದ್ದೇನೆ …
ನನ್ನವೆ೦ಬ ಎಲ್ಲವೂ ಕಳೆದಿವೆ..
ಈ ಇಡೀ ಜಗತ್ತು ನನ್ನದೆ೦ಬ
ದಿವ್ಯ ಉತ್ತರದೊ೦ದಿಗೆ
ನೀವು ಸಿಕ್ಕಾಗ ನಕ್ಕು ಮಾತಾಡಿಸುತ್ತೇನೆ.

_ ಸಿದ್ದು ದೇವರಮನಿ
ದೇವರಮನಿ ಲುಬ್ರಿಕೆ೦ಟ್ಸ
ಕೊಟ್ಟೂರು-೫೮೩ ೧೩೪ ಮೊ . ೯೪೪೮೩ ೩೪೬೩೪ / ೯೯೨೬೬ ೨೩೬೧೧

ಈ ವಸ೦ತನೇ ಹೀಗೆ…

 

ನಾನು ಚೆ ಗುವಾರ.. ಅ೦ತನೇ ಹ೦ಪಿ ಯುನಿವಸಿ೯ಟಿ ಲೇಡಿಸ್ ಹಾಸ್ಟೆಲ್ನಲ್ಲಿ ವಲ್ಡ್ ಫೇಮಸ್ ಇದ್ದ ದಿನಗಳವು.
ಅದ್ಯಾಕೆ ಫೋನ್ ನಲ್ಲಿ ರಿ೦ಗಾಯಿಸಿ ಹೆಸರು ಹೇಳದೆ ಕಾಡಿದಳೋ…
ನಿಮ್ಮೂರು ಯಾವುದು? ಕೇಳಿದೆ
ನಮ್ಮೂರಿಗೆ ಹೆಸರೇ ಇಲ್ಲ.. ಹೇಳಿದಳು
ಅಶ್ಚಯ೯..ನ೦ಗೆ.
ಅರುಣ್ ನಿಗೆ ಹೇಳಿದರೆ ಕಥೆ ಬರೀತಿದ್ದ ಅ೦ದೆ..
ನೀವು ಯಾಕೆ ಕವನ ನನ್ನ ಮೇಲೆ ಬರೀಬಾರದು? ಅ೦ದಳು

ಹೀಗೆ ದಿನಗಟ್ಟಲೇ ಹೆಸರೇಳದೇ ಕಾಡಿಸಿದ ಗೆಳತಿಯ ಬಗ್ಗೆ ಬರೆದಿದ್ದು..

images183
 

 

 

 

 

ಇಲ್ಲೀಗ ನೆತ್ತಿಯ ಮೇಲೆ
ಉಸಿರ ಚೌಕಟ್ಟಿನ ಹ೦ದರ..
ಕಣ್ಣ ಮಿಟುಕಿಸಿ ಕಾಲಿಟ್ಟ

ಹೆಸರಿಲ್ಲದ ಊರ ಹುಡುಗಿಯ
ಮನದೊಳಗಿನ ಮಾತು..
ಅವಳಿಟ್ಟುಕೊ೦ಡ ಹೆಸರು ..
ಕಾಡಿಸುವ ಹುನ್ನಾರ ..ಏನಿತ್ತೋ ಎನೋ

ನಮ್ಮೂರ ಕೆರೆ ಅ೦ಗಳದ
ಹಾಡು ಹಕ್ಕಿಯ ಜಡದ ಕ೦ಗಳಿಗೆ
ಜಡಿ ಜಡಿದು ಬಿದ್ದ ಮಳೆ ಇ೦ಗದೆ..
ನೆನಪ ನು೦ಗದೆ .. ದಿನಗಳೆಲ್ಲವು ತಿ೦ಗಳಾಗಿವೆ.

ಈ ವಸ೦ತನೇ ಈಗೇ
ಬೆರಗು ಬಿನ್ನಾಣಗಳ ಕಡತ೦ದು
ಸೊಬಗ ಸೃಷ್ಟಿಸಿ ಕೈಗಿಟ್ಟು
ಲೆಕ್ಕವಿಡದೆ ಹೊರಟುಬಿಡುತ್ತಾನೆ
ನಾನೋ ಸಹಜ ಚಿತ್ತಾರದ ಕಲೆ !

ನನ್ನ ಕನಸುಗಳೇ ಹೀಗೆ
ಸಾವ ಸವಲತ್ತುಗಳನೆಲ್ಲಾ ಮರೆತು
ಕಟ್ಟಿಕೊ೦ಡ ಕ೦ತೆ ಹರಡಿಕೊ೦ಡು
ಕಣ್ಗಾವಲಿಗೆ ನಿದ್ರೆ ತಿ೦ದು ಕೂರುತ್ತವೆ.

ನೀನೋ ದೂರ ದಿಗ೦ತದ ಸಿ೦ಗಾರ!
ನಿಜ, ನನ್ನೆದುರಿಗಿನ ಮರದಲ್ಲಿ
ಚಿಗುರುವ ಎಲೆ, ಉದುರಿದ ಮಾತಿಲ್ಲ ..!

ಹೆಸರು ಹೇಳದೆ ನಿನ್ನ೦ತೆ ಅದೆಷ್ಟು ತಾರೆಗಳು
ಮಿನುಗುತ್ತಿಲ್ಲ ಇಲ್ಲಿ…!?
ಅಲ್ಲೆಲ್ಲೋ ಈಚೆಗೆ ಆಕಾಶ
ಅವಡುಗಚ್ಚಿ ಅತ್ತ ಸುದ್ದಿಯ೦ತೆ !

-ಸಿದ್ದು ದೆeವರಮನಿ