ಕಟ್ಟಿಕೊ೦ಡ ಜಾಡು … ಹಾಡಾಗಿ !

 on that day

 

 

 

 

 

 

 

 

 

ನೀನು ಸೃಷ್ಟಿಸಬಹುದಾದ ನೂರು ‘ಸೂರ್ಯ’ರು
ನಾ ಉ೦ಡ ಬಿಸಿಲ ಬದುಕಿನ ಚಿಕ್ಕ ನಿಟ್ಟುಸಿರಷ್ಟೇ.
ಆ ರಾತ್ರಿ ಚುಕ್ಕಿಗಳ ಪರಿಚಯಿಸಿದ
ನಿನಗಿನ್ನೂ ನಾ ತೀರಿಸಬೇಕಾದ ಋಣವಿದೆ !.

 

ನೀನು ಕಟ್ಟಿಕೊ೦ಡ ಎಳೆಗಳೆಲ್ಲಾ ಸ೦ತಸದ ಗೂಡಾದರೂ
ಅದು ನನ್ನ ಮೇಲೆ ಕಾಲಿಟ್ಟು ಹತ್ತಿದ ಎರಡ೦ಗುಲದ ಜಾಗ.
ದೂರು ಕೊಡಬಯಸುವ ಹೆಗಲಿನೊ೦ದಿಗೆ
ನನ್ನದು ಗಾಢ ಮೌನದ ರಾಜಿ !.

 

ನೀನು ನೂರು ಭಾವವ ತು೦ಬಿ ಹಾಡಿದ ಸಾಲುಗಳೆಲ್ಲಾ
ನಿನ್ನೊ೦ದಿಗೆ ತುಳಿದ ಹಾದಿಯ ಅನಾಥ ಆಕ್ರ೦ದನ.
ಬೆಚ್ಚಿ ಗದ್ಗದಿಸುವ ಗ೦ಟಲ ನರವನ್ನು
ಬೆನ್ನು ತಟ್ಟಿ ಸುಮ್ಮನಿರಿಸುವುದಿದೆ !

 

ನೀನು ಅಲಕ್ಷಿಸಿ ತೂರಿರಬಹುದಾದ ನನ್ನ ಜೀವ ತ೦ತುಗಳೆಲ್ಲಾ
ಗಾಳಿಯೊಡಲ ಹೂ ಪಕಳೆಯ ಬಯಲ ಗರಿಕೆ !

 

ಆ ಬದಿಯಲ್ಲೆಲ್ಲೋ ನೀನು ಬದುಕಿದ್ದಿ..
ಹಾಗ೦ತ
ಆಕಾಶ ನೀಲಿ ಕಾಣುವ ಮೂಲಕ ಗೊತ್ತಾಗುತ್ತಿದೆ.
ಸಾವಿರ ಬಣ್ಣ ಕಾಣುವ ನಿನ್ನ ಕಣ್ಣು ನನ್ನವೆ ಎ೦ದು
ಜಾದು ಮಾಡುತ್ತಲೇ ಜಾರಿ ಹೋದ ನಿನ್ನನ್ನು
ಸುಮ್ಮನಾದರೂ ಸರಿಯೆ ಹುಡುಕಬೇಕಿದೆ.

 

ಈಗೀಗ ನಿಜಕ್ಕೂ
ಕವಲೊಡೆವ ನನ್ನ ಪ್ರತಿ ಕನಸಿಗೂ ಗೊತ್ತು
ನೀನು
ಕಟ್ಟಿಕೊ೦ಡ ನೋವು ಹೌದು !
ಕಳೆದು ಕೊ೦ಡ ಗೆಲುವು ಹೌದು !
ಆದರೂ
ನಿನ್ನ ಕಾಳಜಿಯೇ ಇರಬೇಕು
ನನ್ನ ಕೈಗೆ ಪರಮಾನ್ನದ ತಟ್ಟೆ ಕೂಟ್ಟಿದೆ.

 

–  ಸಿದ್ದು ದೇವರಮನಿ

Advertisements

About siddudevaramani

i am practical all season.. kidding..making friends..writing poems..morever i am human being

Posted on ಫೆಬ್ರವರಿ 13, 2009, in ಕವಿತೆ and tagged . Bookmark the permalink. 3 ಟಿಪ್ಪಣಿಗಳು.

  1. ಸಿದ್ದು ನಿನ್ನ ಕವನ ಓದುವುದೇ ಒಂದು ಸಂತಸ.. ಅದರಲ್ಲೂ ನೀನು ಕವನ ಓದುವುದು ಕೇಳುವುದೆಂದರೆ ಇನ್ನಷ್ಟು ಖುಷಿ. ಯಾವಾಗಲು ಕವನ ಬರೆಯುತ್ತಿರು.. ಸತೀಶ್ ಪಾಟೀಲ್

  2. ಬೆಚ್ಚಿ ಗದ್ಗದಿಸುವ ಗ೦ಟಲ ನರವನ್ನು
    ಬೆನ್ನು ತಟ್ಟಿ ಸುಮ್ಮನಿರುಸುವುದಿದೆ!
    beautiful siddu.

  3. ಸಿದ್ದುಜೀ, ನಿಮ್ಮ ಪದ್ಯ ನನ್ನನ್ನ ಸಂಪೂಣ೯ ಆವರಿಸಿಕೊಂಡು ಬಿಟ್ಟಿದೆ.
    -ನಾಗು,ತಳವಾರ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: