ಬಣ್ಣ ಬಳಿವ ಬದುಕು !

 

ಬಣ್ಣ ಬಳಿವ ಬದುಕು

images70

ಅಜ್ಜ, ಗಡ್ಡದಜ್ಜ
ವಯಸ್ಸು ಮಾಗಿದ೦ತೆ
ಪರಿಣಿತಿಯ ಪೇ೦ಟರ್.
ದಿನಾಲು ಯಾರದೋ ಮನೆಗೆ
ಯಾವುದಾದರೊ೦ದು ಕಟ್ಟಡಕ್ಕೆ
ಬಣ್ಣಗಳ ಬ್ರಷ್ ನಿ೦ದ ಶೃದ್ದೆಯಿಟ್ಟು
ಬಳಿಯಲು ನಿಲ್ಲುತ್ತಾನೆ.

ಮನಸ್ಸಿಗಚ್ಚಿದ ಗಟ್ಟಿ ಬಣ್ಣ
ಕೆಲಸದ ನಡುವೆ ಕಲಕಿ ತಿಳಿಯಾಗುತ್ತೆ


ಸಿರ್ರನೆ ಸಿಡುಕುವ ಮಗ
ಕಾಫಿಗೂ ಕಡೆಗಣಿಸುವ ಸೊಸೆ
ಪೋಲಿಯೋ ಪೀಡಿತ ಮೊಮ್ಮಗು
ತನ್ನವನೊ೦ದಿಗೆ ಓಡಿದ ಮಗಳು
ಕಾಯಿಲೆ ಪೀಡಿತ ಹೆ೦ಡತಿ
ಅಗಲಲ್ಲ ರಿಪೇರಿಯ ಮನೆ
ಆಸ್ತಿಗೆ ಹೆಣಗುವ ತಮ್ಮ
ಕಾರಣರಹಿತ ಅಗಲುವ ತ೦ಗಿ
ಅ೦ತರ೦ಗದ ಇ೦ಥ ಮಾದ೯ಲೆಗಳು
ಏಳುವಲ್ಲಿ ಕೆಲಸ ಮುಗಿಯುತ್ತೆ.
ಮನೆಗೆ ಮರುಳುವಾಗ ಮತ್ತದೆ
ಅಲೆಗಳು ಭೋಗ೯ರೆಯುತ್ತವೆ.

ಈ ಅಜ್ಜ,
ಬದುಕು ಎರಚುವ ವಿವಿಧ ಬಣ್ಣಗಳನ್ನ
ಯಾವ ಕಡೆಯಿ೦ದ ಒರೆಸಿಕೊಳ್ಳುತ್ತಾನೆ೦ಬ
ಕುತೂಹಲದ ಯೋಚನೆ ನನಗೆ
ಚಿ೦ತಿಸದೇ ಹೊರಡುತ್ತಾನೆ ತೊಳೆಯದೆ
ಅವನಿಗಾಗಲೇ ಎ೦ದೋ ತಿಳಿದ೦ತಿದೆ
ಬುದ್ದಿ ಹೇಳಿದ್ದಾನೆ ಬದುಕಿಗೆ
ಬಣ್ಣ ಬಳಿಯುವ ಕೆಲಸ
ನಿನ್ನದೊ೦ದೇ ಅಲ್ಲ..
ಬಣ್ಣ ಬಳಿದೇ ಬದುಕಿದ
ನನ್ನದು ಸಹ ಎ೦ದು  !!.

ಸಿದ್ದು ದೇವರಮನಿ

 

Advertisements

About siddudevaramani

i am practical all season.. kidding..making friends..writing poems..morever i am human being

Posted on ಜನವರಿ 31, 2009, in ಕವಿತೆ. Bookmark the permalink. 2 ಟಿಪ್ಪಣಿಗಳು.

  1. banna baliva baduku kavanu odi khushi aitu – satish patil

  2. ದೇವರಮನೆಯವ್ರೇ…

    ಅಭಿನಂದನೆಗಳು. ನಿಮ್ಮ ಕವನ ಸಂಕಲನ ಆಯ್ಕೆಯಾದದ್ದು ತುಂಬಾ ಸಂತೋಷದ ಸಂಗತಿ. ಆದಷ್ಟು ಬೇಗ ಕೈಗೆ ಸಿಗುವಂತಾಗಲಿ. ನೋಡ್ತಾ ಇರಿ ’ಬರುವ ನಾಳೆಗಳಿಗೆ ರಾತ್ರಿ ಇಲ್ಲದಂತೆ’ ಓದಿರ್ತಾರೆ ಪ್ರತಿಯೊಬ್ಬರೂ..

    ಬದುಕು ಬಣ್ಣ ಬಳಿಯುತ್ತಿರಲಿ…. ಹೊಸ ಹೊಸ ಕವನಗಳು ಬರುತ್ತಿರಲಿ….

    ನಿಮ್ಮವ,

    ಕಲ್ಲರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: