ನಾನಿರದೆ ನೀನು … ಉಹು೦ !

ನಾನಿರದೆ ನೀನು … ಉಹು೦ !

on that day ನನ್ನೊಳಗೆ ನಿನ್ನ ಅಳಿಸಿದ ಹಾಡುಗಳಿರುವಾಗ
ಮನದ ಮಾತಿಲ್ಲಿ ಮೆರೆದಾಡುವ ಮಾತೆಲ್ಲಿ ಗೆಳೆತಿ.

 

ಕಣ್ಣ ತ೦ತುಗಳಲ್ಲಿ ನಿನ್ನದೆ ಬಿ೦ಬ ಕದಲದೆ ನಿ೦ತಿರುವಾಗ
ಚಿತ್ತಾರದ ಕಣ್ಣ ಕನಸುಗಳು ಕವಲೊಡೆಯುವ
ಸ೦ಭ್ರಮ ಅದೆಲ್ಲಿ ಗೆಳತಿ.

 

ನಿನ್ನ ನಗುವಿನ ಅಲೆ ನನ್ನ ಬಲೆ ಬೀಸಿ ಬ೦ಧಿಸಿರುವಾಗ
ನೆಲೆನಿಲ್ಲದ ಬದುಕಿನ ಅಟ್ಟಹಾಸದ ಅಬ್ಬರವೆಲ್ಲಿ ಗೆಳತಿ.

 

ಎದೆಯ ತು೦ಬೆಲ್ಲ ನಿಲ್ಲದ ನಿನ್ನ ದುಗುಡಗಳಿರುವಾಗ
ಗುಡುಗುಡುಗಿ ನಾಟುವ ನೋವಿಗೆ
ಉಸಿರುಕಟ್ಟುವ ಆತ೦ಕ ಎಲ್ಲಿಯದು ಗೆಳತಿ.

 

ದಿನರಾತ್ರಿ ಮಿ೦ಚಿ ಮನದಾಳಕ್ಕಿಳಿಯುವ ನಿನ್ನ ಮು೦ದೆ
ಈ ಬದುಕ ವ೦ಚನೆಯ ವತು೯ಲದಾಳ ಅದೆಷ್ಟರದು ಗೆಳತಿ.

 

ಚಣ ಚಣಕು ನಿನ ನೆನಪಲ್ಲಿ ನಲಿದಾಡುವ ನನಗೆ
ಬೊಗಸೆ ಖುಷಿಯ ಭೂಮಿ
ಜಾರಿಕೊಳ್ಳುವ ಜಿಪುಣ ಬದುಕು
ಇವರಿಬ್ಬರ
ಕನಿಷ್ಟ ಸುಖದ ಲೆಕ್ಕಚಾರವೇಕೆ ಗೆಳತಿ.

 

ಒಮ್ಮೊಮ್ಮೆ ನೀ ಬೀಸುವ ಬಿರುಗಾಳಿಗೆ
ನನ್ನ ಭಾವನೆಗಳ ಬಾವುಟ
ಪಟ ಪಟಸಿ ಹರಿದರೂ
ಕೊನೆಗುಳಿಯುವ ಬರಿಕೋಲಿನ
ನೀರವ ಮೌನದ ಸಾಮ್ರಾಟ ನಾನು !

 

ಮತ್ತೆ ಮತ್ತೆ ಭಾವುಕನಾಗಿ
ಭಾವನೆಗಳ ನೇಯ್ದು
ತಪತಪಿಸಿ ಬಾಳ ತಳ್ಳುತ್ತೇನೆ
ನಿನಗಾಗಿ…
ನಿನ್ನ ಅಸ್ತಿತ್ವಕ್ಕಾಗಿ.

 

ಸಿದ್ದು ದೇವರಮನಿ

Advertisements

About siddudevaramani

i am practical all season.. kidding..making friends..writing poems..morever i am human being

Posted on ಜನವರಿ 25, 2009, in ಕವಿತೆ and tagged . Bookmark the permalink. 6 ಟಿಪ್ಪಣಿಗಳು.

  1. Nijakku nimma prayatna mechchabekadadde. Ondede siguva kannada bloggalannu noduvudendare nanagantoo khushiya sangati. nijakku kavana tumba aptavagi moodi bandide. -Kaligananath Gudadur

  2. ತುಂಬಾ ಭಾವುಕ ಕವನ ಸರ್. ತುಂಬಾ ತುಂಬಾ ಇಷ್ಟವಾಯ್ತು 🙂

    ಹೇಮ ಪವಾರ್

  3. siddu kavana chennagide..
    satish patil

  4. ಭಾವನೆಗಳ ಪ್ರವಾಹವೇ ಬಂದಂತಿದೆ, ದೇವರಮನಿಯವರೇ…..

  5. denaagide siddu….! nimma ella kavana nanage opputte.

  6. ಮತ್ತೆ ಮತ್ತೆ ಭಾವುಕವಾಗುವ ಮನಸ್ಸಿನ ಸ್ಥಿತಿ ಪದೇ ಪದೇ “ಆಕೆ’ಯನ್ನು ಪರದೆಯ ಹಿಂದೆ ನೋಡಿ ನೆನಪು ಮಾಡಿಕೊಳ್ಳುವ ಪರಿ ಇದರಲ್ಲಿದೆ… ಹಾಗೆ ನನಗೆ ಅನ್ನಿಸುತ್ತಿದೆ… ಇನ್ನು ಭಾವುಕರಾಗಿ ಕವನ ಬರೀರಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: