ಪ್ರೀತಿಗೆರಡೇ ಅಕ್ಷರ : ನಾ ಮತ್ತು ನೀ

ಪ್ರೀತಿಗೆರಡೇ ಅಕ್ಷರ  : ನಾ ಮತ್ತು ನೀ

¥ï

 

 

 

 

 

 

ಕಾದ ಕೊನೆ ಭೇಟಿಗೆ
ಜೀವ ತು೦ಬದ ಈ ಬದುಕಿನಡೆಗೆ
ತೀರದ ಮುನಿಸಿದೆ ನನಗೆ.

ಎದೆಯಲ್ಲಿ ಉಳಿದ ಅದೆಷ್ಟೋ ಮಾತುಗಳು
ನನ್ನನೆ೦ಬ ನನ್ನನ್ನೇ ಮರೆಮಾಡಿ
ನಿನ್ನನ್ನೇ ಕೂಗಿ ಕರೆಯುತ್ತವೆ
ಅವಕ್ಕೆ, ನಿನ್ನ  ವಿಳಾಸದ ಜರೂರತ್ತೇ ಇಲ್ಲ.

ನೀರಿಲ್ಲದೆ ಬರ ಎದುರಿಸುವ ರೈತ
ನೀನಿಲ್ಲದೆ ಬದುಕ ಎದುರಿಸುವ ನಾನು
ನಿಜ,
ಬದುಕು ಮತ್ತು ಈ ಬರ
ಬೇರೆ ಅನ್ನಿಸುವುದೇ ಇಲ್ಲ.

ಹಸಿರ ಚಾದರ ಹೊದ್ದು
ಸ೦ಭ್ರಮಗಳ  ಸೂರಡಿ
ಗಾಳಿಯಾಗಿ ಹೀಗೆ ಬೀಸುತ್ತೀ ಏಕೆ ?

ನಿನ್ನ ಬಣ್ಣಕ್ಕೆ ಬಣ್ಣ ತು೦ಬಿ
ಬದುಕ ಬಡಿತಕ್ಕೆ ಬೆರಗಾಗಿ
ಬಿದ್ದ ಗರಿ ; ನಾನು !!
ಸಿದ್ದು ದೇವರಮನಿ

Advertisements

About siddudevaramani

i am practical all season.. kidding..making friends..writing poems..morever i am human being

Posted on ಡಿಸೆಂಬರ್ 28, 2008, in ಕವಿತೆ. Bookmark the permalink. 6 ಟಿಪ್ಪಣಿಗಳು.

 1. ಸಿದ್ದುಜೀ, ಪದ್ಯ ನಿಜಕ್ಕೂ ಹಿಡಿಸಿತು. ಪ್ರೀತಿಗೆ ಎರಡೇ ಅಕ್ಷರ ಶೀರ್ಷಿಕೆಯಡಿಲ್ಲಿ ಮೂಡಿ ಬಂದ; ನೀರಿಲ್ಲದೆ ಬರ ಎದುರಿಸುವ ರೈತ, ನೀನಿಲ್ಲದೆ ಬದುಕ ಎದುರಿಸುವ ನಾನು…… ಈ ..ಎರಡೇ ಸಾಲಿಗೆ ಪುಳಿಕಿತಗೊಂಡು ಮೂಕವಿಸ್ಮಿತ ನಾದೆ ಮತ್ತು ಮುದ ಪಡೆದೆ.
  …..ನಾಗು,ತಳವಾರ್.

 2. ಸಮಾಜಮುಖಿ ಪ್ರೀತಿ ಪದ್ಯಕ್ಕೆ ನಮೋನಮಃ. ಸಿದ್ದು ನಿನ್ನ ಪ್ರೀತಿಯ ಕವಿತೆಗಳು ಹೊಸ ಆಯಾಮವೊಂದಕ್ಕೆ ತೆರೆದುಕೊಳ್ಳುತ್ತಿವೆ. ನಿನ್ನಿಂದ ಇನ್ನೂ ಉತ್ತಮ ಪದ್ಯದ ನಿರೀಕ್ಷೆಯಲ್ಲಿರುವೆ.
  – ಪರುಶುರಾಮ ಕಲಾಲ್

 3. ಕಾಡುವ ಕವಿತೆ.
  ಚೆನ್ನಾಗಿದೆ.
  – ಚೇತನಾ

 4. siddu padya neenu helidaga keliddakkinta odidaga aaptavaytu.
  bara mattu baduku eradannu noduva ninna jeevana priti ananya.
  Thanks for good poem

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: