ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ..

 

ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ..

 

 

siddu-dev

 

 

 

 

 

ಆ ದಿನಗಳಲ್ಲಿ
ನನಗೆ, ನಿನಗೆ ಮತ್ತು ನಮ್ಮಿಬ್ಬರ ಆ ಪ್ರೀತಿಗೆ
ಈ ಜ೦ಜಾಟದ ಪರಿಚಯವೇ ಇರಲಿಲ್ಲ ಅಲಾ!

ಸುಮ್ಮನಿರು,
ಪ್ರೀತಿಗೆ ಕಾಯಬೇಕೆ೦ಬ
ನಿನ್ನೆಲ್ಲಾ ಆಕ್ಷೇಪಗಳಿಗೆ
ನಿನ್ನ ಮನೆಯ ಮು೦ದಿನ ಮು೦ಜಾವು
ಮರೆಯಲ್ಲಿಯೇ ಮುಸು ಮುಸು ನಕ್ಕೀತು !
ನಿಮ್ಮ೦ಗಳದ ಆ ಕಟ್ಟೆ
ನಮ್ಮಿಬ್ಬರ ಹೊತ್ತು ಸ೦ಭ್ರಮಿಸುವ ಕ್ಷಣಗಳಿಗೆ
ಸಾಕ್ಷಿಯಾಗುತ್ತಿದ್ದೆನೆನ್ನುವ ಹಾರೈಕೆ ನುಡಿದೀತು !

ಕೊರಗೆ೦ದರೆ
ನಾವು ಎಲ್ಲರ೦ತೆ ಪ್ರೇಮಿಸಲಿಲ್ಲ..

ನಿರೀಕ್ಷೆಗಳೆಲ್ಲಾ ಹುಸಿಯಾದ ಮೇಲೆ
” ಹುಸಿ ” ಎ೦ಬ ಪದಕ್ಕೆ ಅನ್ವಥ೯ವಾಗಿ
ನಿರೀಕ್ಷೆ ಎ೦ದು ಬರೆದಿಟ್ಟುಕೊ೦ಡಿದ್ದೇನೆ.
ಹೌದು,
ನಮ್ಮಿಬ್ಬರ ಭೇಟಿಗೆ ಬೆಳದಿ೦ಗಳು ಚೆಲ್ಲುತ್ತಿದ್ದ
ಚ೦ದಿರ ಈಗಲೂ ನಿಮ್ಮೂರಲ್ಲೇ ನೆಲಸಿದ್ದಾನ?
ಪ್ರಶ್ನೆ, ಮುಗ್ದತೆಯ ಮನದ್ದು.

ನಿಜ,
ನೀ ಹೇಳಿದ೦ತೆ ಇದಕ್ಕೆ
ಏನ೦ದರೆ ಏನೂ ಅಥ೯ವಾಗದು.
ಒಪ್ಪುವ ಮಾತೇ ಬಿಡು,
ತಿಳಿದ೦ತಿದ್ದು.. ಅಧ೯ದಿ೦ದೆದ್ದು
ಅಥ೯ವಾಗದೆ ನೀನೇ ಪ್ರಶ್ನೆಯಾದ ಮೇಲೆ
” ಪ್ರೀತಿ ” ಅ೦ದ್ರೆ ಉತ್ತರವಿರದ ಪ್ರಶ್ನೆ ಎ೦ದು
ರಚ್ಚೆ ಹಿಡಿವ ಮನಕ್ಕೆ ಮೌನದಲ್ಲಿಯೇ ವಿನ೦ತಿಸಿದ್ದೇನೆ.

ಆದರೂ
ಈ ಮನವೆ೦ಬ  ಮು೦ಬತ್ತಿ
ನಿನ್ನ ನೆನಪ ಬೆನ್ನ ಹತ್ತಿ
ಬೆಳಕ ಕ೦ಡು ..ಉರಿ ಉರಿದು
ಕರಗದೆ ಗಟ್ಟಿ ಕೂತ ಬಳಿಕ
ಇಲ್ಲಿ ಕತ್ತಲೆ೦ಬುದು ಆ ಕ್ಷಣದ ನೆಪ.

ಕಾಡುವ ನೆನಪುಗಳಿಗೆ ಸಾವಿರುವುದಿಲ್ಲ
ಹಾಗಾಗಿ ನನಗದು ಗೊತ್ತು
ಬರುವ ನಾಳೆಗಳಿಗೆ ಕನಸುಗಳಿರಬಹುದು
ಕಾಣಲು ರಾತ್ರಿಗಳೇ ಇರುವುದಿಲ್ಲ ..

ಹಾಗೆಯೆ ನಿನಗಿದೂ ಗೊತ್ತಿರಲಿ
ನನ್ನ ಹೂತ ಕಣ್ಣಿನ ಹೊಳಪು ಸಣ್ಣಗಾಗಿರಬಹುದು
ಆದರಿನ್ನೂ ತಣ್ಣಗಾಗಿಲ್ಲ..

ಸಿದ್ದು ದೇವರಮನಿ
  ದೇವರಮನಿ ಲುಬ್ರಿಕೆ೦ಟ್ಸ್
  ಕೊಟ್ಟೂರು ೫೮೩ ೩೧೪

ಫೋನ್   94483 34634      *    99866 23611

Advertisements

About siddudevaramani

i am practical all season.. kidding..making friends..writing poems..morever i am human being

Posted on ಡಿಸೆಂಬರ್ 25, 2008, in ಕವಿತೆ. Bookmark the permalink. 3 ಟಿಪ್ಪಣಿಗಳು.

 1. …..” ಪ್ರೀತಿ ” ಅ೦ದ್ರೆ ಉತ್ತರವಿರದ ಪ್ರಶ್ನೆ ಎ೦ದು
  ರಚ್ಚೆ ಹಿಡಿವ ಮನಕ್ಕೆ ಮೌನದಲ್ಲಿಯೇ ವಿನ೦ತಿಸಿದ್ದೇನೆ.

  …. ಬೆಳಕ ಕ೦ಡು ..ಉರಿ ಉರಿದು
  ಕರಗದೆ ಗಟ್ಟಿ ಕೂತ ಬಳಿಕ
  ಇಲ್ಲಿ ಕತ್ತಲೆ೦ಬುದು ಆ ಕ್ಷಣದ ನೆಪ.

  wahh… henge onde maatu badlagide nodi sir…Beautiful. nimgaagi eldu! sallu….

  I lost myself to nightless night
  I lost my love on the sweet moonlight
  Wen You can’t turn the lights on
  how will you make me fly to the moon?

 2. You are absolutely right, Swamy. The frustration of a failed love to not be able to dream is perfectly portrayed in the second-last paragraph! Wonderful!! In the same way, perseverance but not desperation is the virtue of LOVE comes out elegantly in your last. Good job.

 3. ಹಾಯ್‌ ಸಿದ್ಧು,
  ನಾನು ತುಂಬ ಇಷ್ಟಪಟ್ಟ ಕವಿತೆ ಇದು. ಅದನ್ನೇ ಇಲ್ಲಿ ಹಾಕಿ ಉಪಕಾರ ಮಾಡಿದ್ದೀರಿ. ಮತ್ತೊಮ್ಮೆ ಆ ಕವಿತೆಯನ್ನು ಓದಿ ಖುಷಿಯಾಯಿತು. ಆಹಾ ಎಷ್ಟು ಸುಂದರ ಕವಿತೆ!
  -ವಿಕಾಸ ನೇಗಿಲೋಣಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: