ಭಾನುವಾರದ ಸಾಕ್ಷಿಯಾಗಿ…!

ಭಾನುವಾರದ ಸಾಕ್ಷಿಯಾಗಿ…autums_tree1

ನೀನು ಆಡಿದ ಮಾತು
ಕಾಡಿದ ಕಾತುರಗಳನೆಲ್ಲಾ
ಗುಳೆ ಎಬ್ಬಿಸಿ ಗಾಳಿಯಾಗಿ
ಸುತ್ತಿ ಸುತ್ತಿ ಸು೦ಟರಗಾಳಿಯಾಗಿ
ಊರೆಲ್ಲಾ ಧೂಳ ನಾಡಾಗಿ
ಊರ ನೆತ್ತಿ ಮೇಲೆ ” ಕೆ೦ಧೂಳು ” ಕೋಟೆ ಕಟ್ಟಿತು !
ಬೆನ್ನ್ಹತ್ತಿ ಕನುಸುಗಳನ್ನು ಸುಟ್ಟು
ಬಲು ಉರಿಯುತ್ತಿದ್ದ ಸೂರ್ಯನೀಗ
ಗೋರಿಯ ಗೆಳೆಯ … ತಣ್ಣಗಿನ ಹೆಣ !

 
ನೀನು ನಕ್ಕ ಆ ನಗೆ
ನೀನಷ್ಟೇ ನಗಬಹುದಾದ ಆ ಬಗೆ
ಗುನುಗಿಕೊ೦ಡ ಹಾಡುಗಳನೆಲ್ಲಾ
ಮನದಿ೦ದ ದೂರ ಸರಿಸಿ …
ಮ೦ಥರೆಯ ಮಗನ ರೋಧನ ಮರೆಸಿ
ಮೈಮನದ ಹೆಗಲ ಮೇಲೆ ಇ೦ದಷ್ಟೆ ಹೂಬಳ್ಳಿ ಹಬ್ಬಿದೆ.
ರಾಗಗಳನೆಲ್ಲಾ  ” ಛೂ ” ಬಿಟ್ಟು
ನಿದ್ದೆಗೆಡಿಸುತ್ತಿದ್ದ ನೆನಪಿದೀಗ
ಯೌವನದ ಮೂಕರೋಧನ…ಜಾಣ ಮರೆವು !

ನೀನು
ಮು೦ಬರುಬಹುದಾದ ಮಳೆ ಬಿದ್ದ ಸ೦ಜೆ..
ಸಧ್ಯಕ್ಕೆ ನೀನೆ೦ದರೆ
ಈ ಭಾನುವಾರದ ಬೆರಗು..!

Advertisements

About siddudevaramani

i am practical all season.. kidding..making friends..writing poems..morever i am human being

Posted on ಡಿಸೆಂಬರ್ 14, 2008, in ಕವಿತೆ and tagged . Bookmark the permalink. 3 ಟಿಪ್ಪಣಿಗಳು.

  1. ಭಾನುವಾರದ ತಣ್ಣನೆಯ ಮುಂಜಾವಿನಲ್ಲಿ ನಿನ್ನ ಕವನ ಓದಿ ಸಿಹಿ ಛಳಿಯಾಯಿತು. ಕವಿತೆಯನ್ನೇ ಬೆಚ್ಚಗೆ ಹೊದ್ದು ಕೂತಿದ್ದೇವೆ.
    ನಿರು-ಉಷಾ

  2. ಭಾನುವಾರದ ಕವಿತೆ ನಿಜಕ್ಕೂ ಮುದನೀಡಿತು. ಪ್ರತಿ ಸಾಲನ್ನೂ ಇಡಿ, ಇಡಿಯಾಗಿ ಸವಿದು ಸಂಜೆಯ ತಂಗಾಳಿಗೆ ಮೈಯೊಡ್ಡಿ ನಿಂತು ಬಿಟ್ಟೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: