” ಕಲಾಲ್ “.. ಎ೦ಬ ದಿಗ್ಬ್ರಮೆಯ ಪ್ರೀತಿ !

ಬೇರೆ ಯಾರದೇ ಬ್ಲಾಗಿನಲ್ಲಿ ಇಂತಹ ಬರಹ ಬಂದಿದ್ದರೆ ಖಂಡಿತ ಅದಕ್ಕೆ ರಿಯಾಕ್ಟ್ ಮಾಡದೇ ನಕ್ಕು ಸುಮ್ಮನಾಗಿ ಬಿಡುತ್ತಿದ್ದೆ. ನಮ್ಮ ಸಿದ್ದು ಬರೆದಿದ್ದಾನೆ ಎನಿಸಿದಾಗ ದಿಗ್ಭ್ರಮೆ ಉಂಟಾಯಿತು. ಮುಗ್ಧ ಹೂವು ಮನಸ್ಸಿನ ಕವಿಗೆ ಏನಾಗಿ ಹೊಯಿತು ಎಂಬ ಆತಂಕ ಉಂಟಾಯಿತು.
ಸಿದ್ದು ನಿನ್ನ ಬರಹವನ್ನು ನೀನೆ ಇನ್ನೊಮ್ಮೆ ಓದಬೇಕು. ಈಗ ನಾನು ಭಯೋತ್ಪಾದನೆಯ ಕುರಿತು ನಿನ್ನೊಂದಿಗೆ ಮಾತಿಗಿಳಿಯುವುದಿಲ್ಲ. ಅದಕ್ಕೂ ಬೇಕಾದಷ್ಟು ವಿಷಯಗಳು ನನ್ನ ಮುಂದಿವೆ. ನಾನು ಅಂಕಿಸಂಖ್ಯೆಗಳನ್ನು ಕೊಡಬಲ್ಲೆ. ಈ ದೇಶದಲ್ಲಿ ಎಷ್ಟು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷಗಟ್ಟಲೆ ಹೆಣ್ಣುಭ್ರೂಣ ಹತ್ಯೆ ನಡೆದಿರುವುದು. ನಮ್ಮ ಆಧುನಿಕ ದೇಶ ಕಟ್ಟುವ ಯೋಜನೆಗಳು ಲಕ್ಷಾಂತರ ಜನರ ಬದುಕನ್ನು ಕಸಿದು ಕೊಂಡು ಬೀದಿಗೆ ತಳ್ಳಿ ಭಿಕಾರಿಗಳನ್ನಾಗಿಸಿ ಅವರನ್ನು ದಿನವೂ ಸಾಯಿಸುತ್ತಿರುವುದು. ಹೋಗಲಿ ಇನ್ನೂ ಪೆಸಿಫಿಕ್‌ಗೆ ಬರುತ್ತೇನೆ. ಜಿಲ್ಲೆಯ ಗಣಿದೊರೆಗಳು ಸಂಪನ್ಮೂಲವನ್ನು ದೋಚಿಕೊಂಡು ವಿದೇಶಕ್ಕೆ ಮಾರಿ ಈ ಜಿಲ್ಲೆಯ ಸಾಮಾನ್ಯ ಜನರಿಗೆ ಎಲ್ಲಾ ಮಾರಕರೋಗಗಳನ್ನು ಅಂಟಿಸಿ, ಗಣಿಯ ಕುಣಿಯಲ್ಲಿ ಕೆಡವಿ ಕೆಮ್ಮಿ ಕೆಮ್ಮಿ ಸಾಯುವಂತೆ ಮಾಡಿದ್ದಾರಲ್ಲ. ಇದೆಲ್ಲಾ ಏನು? ಜಿಲ್ಲೆಯ ಸಾವಿನ ರೇಟ್ ಏನಿದೆ?
ಈಗ ನಾನು ಕೇಳುತ್ತೇನೆ. ಭಯೋತ್ಪಾದಕರು ಯಾರು?
ಈ ದೇಶದ ಬುಸಂಖ್ಯಾತ ಜನರಿಗೆ ಭಾರತದ ಭಾವುಟ ಗೊತ್ತಿಲ್ಲ. ಭೂಪಟವೂ ಗೊತ್ತಿಲ್ಲ. ಜನಗಣಮನ ಹಾಡುವಾಗ ನಿಲ್ಲಬೇಕು ಎನ್ನುವುದು ಸಹ ಗೊತ್ತಿಲ್ಲ. ಅವರು ಇವ್ಯಾವದಕ್ಕೂ ಪುಳುಕಿತರಾಗುವುದಿಲ್ಲ.
ಆದರೆ ಅವರು ಈ ನೆಲವನ್ನು ಪ್ರೀತಿಸುತ್ತಾರೆ. ಇಲ್ಲಿಯ ಜನರನ್ನು ಪ್ರೀತಿಸುತ್ತಾರೆ. ಊರು ಬಿಟ್ಟು ಹೋಗಲು ಇಷ್ಟಪಡುವುದಿಲ್ಲ. ಇನ್ನೂ ದೇಶ ಬಿಟ್ಟು ಹೋಗುವುದು ದೂರದ ಮಾತು. ಆದರೆ ದೇಶಾಭಿಮಾನ, ಭಾವುಟ ಪ್ರೀತಿ ಇರುವ ಜನರೇ ಫಾರಿನ್‌ಗೆ ಹೋಗಿ ಕೆಂಪುಮೂತಿಯವರ ಕುಂಡಿ ತುಳಿಯಲು ತುದಿಗಾಲಿನ ಮೇಲೆ ನಿಂತಿರುತ್ತಾರಲ್ಲ ॒
ಮತ್ತೇ ನಾನು ಕೇಳುತ್ತೇನೆ ಯಾವುದು ದೇಶ ಪ್ರೇಮ? ಯಾರು ದೇಶಪ್ರೇಮಿ?
ತೆಲುಗು ಕವಿ ಶ್ರೀ ಶ್ರೀ ಹೇಳುವಂತೆ ’ದೇಶವೆಂದರೆ ಬೆಟ್ಟಗುಡ್ಡಗಳಲ್ಲ, ದೇಶವೆಂದರೆ ಜನ.’
ಒಂದು ದೇಶದ ಬಗ್ಗೆ ಮಾತನಾಡುವಾಗ ಜನರ ಬಗ್ಗೆ ಮಾತನಾಡುವುದೇ ಆಗಿರುತ್ತದೆ.
ಸಿದ್ಧು ನೀನು ಬಂದೂಕ ಹಿಡಿಯುತ್ತೇನೆ ಎಂದರೆ ಬೇಡ ಎಂದು ನಾನು ಹೇಳುವುದಿಲ್ಲ. ನಿನ್ನ ರೋಷವೇಷದ ಮಾತುಗಳನ್ನು ನಾನು ಖಂಡಿಸುವುದಿಲ್ಲ. ಆದರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡು. ಅದು ಬಂದೂಕಿನ ರೂಪದಲ್ಲಿ ಬಂದರೂ ಸ್ವಾಗತಿಸುತ್ತೇನೆ. ಬಂದೂಕ ಯಾರದ್ದಾದರೂ ಅದರ ಕೆಲಸ ಕೊಲ್ಲುವುದು ಮಾತ್ರ. ಬಂದೂಕ ಸಾವಿನ ಬೆಳೆಯನ್ನು ಬಿಟ್ಟು ಬೇರೇನನ್ನೂ ಸೃಷ್ಟಿಸಲಾರದು.
-ಪರುಶುರಾಮ ಕಲಾಲ್

ನನ್ನ೦ತೆ ನಿಮ್ಮಲ್ಲಿ ಕೊಡ ಪ್ರಶ್ನೆ( ಜಾಣತನದ) ಗಳಿವೆ ಅ೦ತಾದರೆ ನಿಮ್ಮ ಕಾಲಮಾನದಲ್ಲಿ ಯೇ ಬದುಕುತ್ತಿದ್ದೇನೆ ಅ೦ತ ಕುಶಿಯಾಯಿತು.. ನಿಮ್ಮನ್ನು ಆಳಿದ ದೊರೆಗೆ ಕೇಳ ಬೇಕಾದ ಪ್ರಶ್ನೆಗಳನ್ನು ನನ್ನಲಿ ಯಾಕೆ ಕೇಳುತ್ತಿದ್ದಿರಿ? ಗೊತ್ತಾಗಲಿಲ್ಲ ಇವೆಲ್ಲವುಗಳು ನನ್ನ ಸಮಸ್ಯೆ ಕೊಡ. ಕೋವಿ ಯಾರದಾದರು ಸರಿಯೇ ಅದರ ಕೆಲಸ ಕೊಲ್ಲುವುದೇ ಆಗಿರುತ್ತದೆ .. ನೀವು, ಕೋವಿ ಬೇಡ ಅ೦ದ ಕಾಳಜಿಯ ಪ್ರೀತಿಗೆ ನಾನು ಸಮ್ಮತಿಸಿ ನಿಮ್ಮ ಹೆಗಲಿನ ಮಗುವಾಗಿಬಿಟ್ಟಿದ್ದೇನೆ. ನಿಮ್ಮೊ೦ದಿಗೆ ಕಳೆದ ಕೆಲವು ಕ್ಷಣಗಳು ನನ್ನಲ್ಲಿ ಜೀವನ್ ಪ್ರೀತಿಹುಟ್ಟುಹಾಕಿವೆ ನಿಮ್ಮನ್ನು ಬೇಕ೦ತಲೇ ಹೊಗಳುತ್ತಿಲ್ಲ.. ತುರುವಿಹಾಳ್ ಚ೦ದ್ರು ನ೦ತೆ ನೀವು ಕೊಡ ವಿರಳ ಗೆಳೆಯರೇ…

ಸರ್, ಈ ಉಗ್ರತನವನ್ನ ಯಾವ ರೀತಿ ಬಗೆಹರಿಸೋಣ ಹೇಳಿ ? ನಮ್ಮಗಳ೦ತೆ ನಮ್ಮ ನಮ್ಮ ಪಾಡಿಗೆ ಇರುತ್ತಾ .. ಮಾತಾನಾಡಿಕೊಳ್ಳುತ್ತಾ.. ಅಬಿಪ್ರಾಯ ಹ೦ಚಿಕೊಳ್ಳುತ್ತಾ… ಬರಹ ಬರೆ‍ಯುತ್ತಾ…
ಉಹು೦ ಸರ್, ನಮ್ಮಗಳ ಮಾತಿಗೆ..ಬರಹಕ್ಕೆ.. ಕೊನೆಗೆ ಎದೆಯಲ್ಲಿ ಅವರಿಗಾಗಿ ತೆಗೆದಿಟ್ಟ ನಮ್ಮಗಳ ಪ್ರೀತಿಗೆ ಅವರು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ.. ನೋಡಿ ನಾನು ಅವರ ಬಳಿ ಕೋವಿಯನ್ನು ಬಿಟ್ಟು ಭೇಟಿಯಾಗಲು ಹೋಗುತ್ತೇನೆ ಅಕಸ್ಮಿಕವಾಗಿ ನಾನು ಅವರ ಗು೦ಡಿನಿ೦ದ ಸತ್ತರೆ ನಿಮಗೆ “ಭಯೋತ್ಪಾದಕ” ಎ೦ದು ಜಗತ್ತು ಹಣೆಪಟ್ಟಿಕಟ್ಟಿದರೆ ಕ್ಷಮಿಸಬೇಕು, ನೀವೆಲ್ಲಾ ಬರಹಗಾರರು.. ಸಾಹಿತಿಗಳು … ಕವನ ಬರೆದು ಅವರನ್ನ ಬಯ್ಯುವುದರೊಳಗಾಗಿ.. ಉಗ್ರರನ್ನ ಖ೦ಡನೆ ಮಾಡುವುದರೊಳಗಾಗಿ.. ಸಮಾಧಿಯಲ್ಲಿನ ನಾನು ಹಾರಿಸುವ ಕೋವಿಯ ಗು೦ಡು ಅವರ ಪ್ರಾಣ ತೆಗೆದಿರುತ್ತದೆ ಇದ೦ತು ನಿಮ್ಮೊ೦ದಿಗೆ ಹ೦ಚಿಕೊಳ್ಳಬಹುದಾದ೦ತ ಸತ್ಯ. ಅದು ಸಾವಿನ ಬೆಳೆ ಬೆಳೆದರೂ ನಾನು ಕೋವಿಯನ್ನ ಹಿಡಿದೇ ಹಿಡಿಯುತ್ತೇನೆ ಅಪ್ಪಣೆ ಕೊಡುತ್ತೀರಿ ತಾನೆ ? ನೋಡಿ ಮುಗ್ದಮನಸ್ಸಿನ ನಿಮ್ಮದೇ ಗೆಳೆಯ ಈ ರೀತಿ ಮಾತಾಡಿ ದೂರ ನಡೆಯುತ್ತಾನೆ ಅ೦ದ್ರೆ ನಿಮ್ಮಗಳ ಕಾಲ ಘಟ್ಟದಲ್ಲಿ ಬದುಕು ಬೇರೆಯಾಗಿ ನಡೆಸಿಕೊ೦ಡಿದೆ ಅ೦ತಾನೆ ಅಥ೯..ಸುಮ್ಮ ಸುಮ್ಮನೇ ನಾನು ಕೋವಿಯನ್ನು ಬಳಸಲಾರೆ ಎ೦ದು ತಿಳಿಸಿ ಕೋವಿ ಬಳಸುವ ನನ್ನ ಮನಸ್ತಿತಿಯ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಟ್ಟು, ನಾನು ಮು೦ದೇನಾದರು ಆಗಲಿ ನಾನು ಈ ಜಗದ ಗೆಳೆಯ ! ಎ೦ದು ತಲೆ ಬಾಗಿದ್ದೇನೆ ನಿಮ್ಮ ಪ್ರೀತಿಗೆ. ಉಗ್ರರಿಗೆ ನಿಮ್ಮ ಪ್ರೀತಿಯ ಗಾಳಿ ಜಾದು ಮಾಡಿಬಿಡಲಿ..ನಿಮ್ಮ ಈ ಮುಗ್ದ ಹೂ ಮನಸ್ಸಿನ ಹುಡುಗ ನೀವು ಬಯಸಿದ೦ತೆ ಮದುವೆ ಇನ್ನೂ ಲೇಟ್ ಆದ್ರೂ ಪರವಾಗಿಲ್ಲ ಸರ್, prema ಕವನ ನಿಮಗಾಗಿ ಬರೆದು ತರುತ್ತಾನೆ!.
– siddu devaramani

Advertisements

About siddudevaramani

i am practical all season.. kidding..making friends..writing poems..morever i am human being

Posted on ಡಿಸೆಂಬರ್ 9, 2008, in ನಿಮ್ಮೊಡನೆ and tagged , . Bookmark the permalink. 2 ಟಿಪ್ಪಣಿಗಳು.

 1. ಸಿದ್ದು ನಿನ್ನ ಪ್ರತಿಕ್ರಿಯೆ ನೋಡಿದೆ. ನಿನ್ನ ಪ್ರೀತಿಗೆ ತಲೆಬಾಗುವೆ. ನಿನ್ನ ಪ್ರತಿಕ್ರಿಯೆಯ ಒಟ್ಟು ಸಾರಂಶವೆಂದರೆ ಮಾತನಾಡುತ್ತಾ, ಚರ್ಚಿಸುತ್ತಾ, ಕವನ, ಕಥೆ ಬರೆಯುತ್ತಾ ಕುಳಿತರಬೇಕೇ? ಎಂದು ಕೇಳುವುದಾಗಿದೆ ಎಂದು ನಾನು ಭಾವಿಸುವೆ. ಕ್ರಿಯೆ ಬಹಳ ಮುಖ್ಯ ಎನ್ನುವುದು ನಿನ್ನವಾದ.
  ’ಚೆಗೆವಾರ ಒಂದು ಕಡೆ ಹೇಳುತ್ತಾನೆ ’ ಅತ್ಯುತ್ತಮ ಮಾತೆಂದರೆ ಕ್ರಿಯೆ’ ಇಲ್ಲಿ ಮಾತನ್ನು ಚೆಗೆವಾರ ಬಿಟ್ಟುಕೊಟ್ಟಿಲ್ಲ. ಕ್ರಿಯೆಯನ್ನು ಬಿಟ್ಟುಕೊಟ್ಟಿಲ್ಲ. ಕ್ರಿಯೆ ಮತ್ತು ಮಾತು ಬೇರೆ ಬೇರೆ ಅಲ್ಲ. ಕ್ರಿಯೆಯಿಂದಲೇ ಮಾತು ಎನ್ನುವುದು ಹುಟ್ಟುತ್ತದೆ. ಮಾತು ಮತ್ತೇ ಕ್ರಿಯೆಗೆ ಕಾರಣವಾಗುತ್ತದೆ.
  ಮಾತು ಕ್ರಿಯೆಯಾಗುವುದು ಹೇಗೆ? ಕ್ರಿಯೆ ಮಾತಾಗುವುದು ಹೇಗೆ ಎನ್ನುವದನ್ನು ಗಾಂಧೀಜಿ, ಟಾಲಸ್ಟಾಯ್, ಚೆಗೆವಾರ, ೧೨ನೇ ಶತಮಾನದ ನಮ್ಮ ಶರಣರಿಂದ ನಾವು ತಿಳಿಯಬಹುದಾಗಿದೆ.
  ನಾನು ಮಾತನಾಡಬೇಕು ಎಂದೊಡನೆ ತಾಜ್ ಹೊಟೇಲ್, ಅದರಲ್ಲಿದ್ದ ಉಗ್ರರು ಅಥವಾ ಬಿನ್ ಲಾಡೆನ್ ಇತ್ಯಾದಿಯವರ ಹೆಸರು ಹೇಳಿ ಅವರೊಂದಿಗೆ ಚರ್ಚಿಸಲು ಸಾಧ್ಯವೇ ಎಂಬ ಪ್ರಶ್ನೆ ಕೇಳಲಾಗುತ್ತಿದೆ.
  ನನ್ನ ಪ್ರಶ್ನೆ ಅದಲ್ಲ, ಭಯೋತ್ಪಾದಕರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎನ್ನುವುದಕ್ಕಿಂತ ಭಯೋತ್ಪಾದಕರನ್ನು ಸೋಲಿಸುವುದು ಹೇಗೆ ಎನ್ನುವುದು. ಭಯೋತ್ಪಾದನೆಯ ತಾಯಿ ಮೂಲಭೂತವಾದ. ಈ ಮೂಲಭೂತವಾದದ ಹುಟ್ಟು ಎಲ್ಲಿದೆ. ಅದನ್ನು ಪತ್ತೆ ಹಚ್ಚಿ ಅದರ ಐಡಿಯಾಲಾಜಿಯನ್ನು ಸೋಲಿಸುವುದು ಭಯೋತ್ಪಾದನೆಯ ಸೋಲು ಆಗಿರುತ್ತದೆ ಎನ್ನುವುದು.
  ನಾವೆಲ್ಲರೂ ಈ ದೇಶದ ರೈತರ ಆತ್ಮಹತ್ಯೆ, ಬೃಹತ್ ಉದ್ಯಮಗಳ ಹೆಸರಲ್ಲಿ ಜನರನ್ನು ಒಕ್ಕಲೆಬ್ಬಿಸುವ ಬಗ್ಗೆ ಮಾತನಾಡಲು ಆರಂಭಿಸಿದರೆ, ಹೀಗೆ ಮಾತನಾಡಲು ಆರಂಭಿಸುವುದು ಎಂದರೆ ನಮ್ಮೆಲ್ಲರ ಮಾತುಗಳು ಜನಪರ ಚಳುವಳಿಗಳ ರೂಪ ಪಡೆದಾಗ ಮೂಲಭೂತವಾದ ಜನರನ್ನು ಮರುಳಗೊಳಿಸಲು ಆಗುವುದಿಲ್ಲ. ’ಬನ್ನಿ ನಾವೆಲ್ಲಾ ಒಂದು, ದೇಶದ, ಧರ್ಮದ ರಕ್ಷಣೆ ಮಾಡೋಣ’ ಎಂಬ ಕರೆ ಅವರು ನೀಡಿದರೆ ಬದುಕಿನ ಬಗ್ಗೆ ಮಾತನಾಡಿ ಮೊದಲು ಎಂದು ಜನ ಕೇಳುತ್ತಾರೆ. ಮೂಲಭೂತವಾದ ಸೋಲುವುದು ಆಗ ಮಾತ್ರ.
  ಚಳುವಳಿಗಳಿಲ್ಲದ ನಿರ್ವಾತ ವಾತವರಣ ಸೃಷ್ಠಿಯಾದರೆ ಅಲ್ಲಿ ಮೂಲಭೂತವಾದ, ಭಯೋತ್ಪಾದನೆ ವಿಜೃಂಭಿಸುತ್ತದೆ. ಇವರೆಡನ್ನೂ ವಿರೋಧಿಸುವ ಸರ್ಕಾರವೇ ತನ್ನ ರಕ್ಷಣೆಗೆ ಇದನ್ನು ಬಳಸಿಕೊಳ್ಳುತ್ತದೆ. ಸರ್ಕಾರಿ ಭಯೋತ್ಪಾದನೆಯನ್ನು ಮುಚ್ಚಿಟ್ಟುಕೊಳ್ಳುವ ತಂತ್ರವೂ ಇದರಲ್ಲಿ ಅಡಗಿದೆ.
  ಈಗ ನಾನು ನೇರ ನಿನ್ನ ಪ್ರಶ್ನೆಗೆ ಬರುತ್ತೇನೆ. ಬಂದೂಕು ಹಿಡಿಯುವುದಾದರೆ ನಿನಗೊಂದು ಬಂದೂಕ ಬೇಕು, ಈ ಬಂದೂಕಿಗೆ ಒಂದು ತರಬೇತಿ ಬೇಕು. ಇವರೆಡೂ ಮಾಡಿಕೊಂಡರೂ ಭಯೋತ್ಪಾದಕರನ್ನು ಹೇಗೆ ಗುರುತಿಸುವುದು?
  ಅವರು ನಮ್ಮಂತೆ ಸಾದಾ ಸೀದಾ ಮನುಷ್ಯರಾಗಿತ್ತಾರಲ್ಲ. ಹೋಗಲಿ ಮಿಲ್ಟ್ರಿ ಸೇರಿ ದೇಶಸೇವೆ ಮಾಡುತ್ತಿ ಎಂದಿಟ್ಟುಕೊಳ್ಳೋಣ. ಈ ಮಿಲ್ಟ್ರಿ ಕಾರ್ಯಾಚರಣೆಯು ತಾಜ್ ಹೊಟೇಲ್‌ನಂತಹ ಘಟನೆಗಳು ನಡೆದಾಗ ನಿನ್ನ ಕೋರಿಕೆ ಇಡೇರಿತು ಎಂದಿಟ್ಟುಕೊಳ್ಳೋಣ. ಈ ಮಿಲ್ಟ್ರಿ ಕಾರ್ಯಾಚರಣೆಯು ದೇಶದ ಅನೇಕ ಹೋರಾಟಗಳನ್ನು ಸಹ ಮುರಿದುಹಾಕಿದೆಯಲ್ಲ. ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಅಮಾಯಕ ಗಿರಿಜನರ ಮಹಿಳೆಯರ ಮೇಲೆ ಅದೆಷ್ಟು ಅತ್ಯಾಚಾರ ನಡೆದಿದ್ದಾವೆ. ಇನ್ನೂ ವರದಿ ಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಮಿಲ್ಟ್ರಿಯವರ ರಾಕ್ಷಸ ಕೃತ್ಯದ ಕಥೆಗಳನ್ನು ಈಶಾನ್ಯ ಭಾರತ, ಕಾಶ್ಮೀರದಲ್ಲಿ ನಾವು ದಿನವೂ ಕೇಳುತ್ತಿದ್ದೇವೆ.
  ನಿಜ, ಮಿಲ್ಟ್ರಿಯಲ್ಲಿ ಇರುವವರು ನಮ್ಮ ಬಡರೈತರ ಮಕ್ಕಳೇ. ಕೊನೆಯ ಆಯ್ಕೆಯಾಗಿ ಅವರು ಮಿಲ್ಟ್ರಿಯಲ್ಲಿ ಸೇರಿರುತ್ತಾರೆ. ಹೆಂಡತಿ, ಮಕ್ಕಳ ಅಕ್ಕರೆಯ ಪರಿಸರದಿಂದ ದೂರ ಇರುವ ಅವರು ಯಾಕೇ ಹೀಗಾಗುತ್ತಾರೆ?
  ಮಿಲ್ಟ್ರಿಯಲ್ಲಿ ಯಾವುದೇ ಕಾರ್ಯಾಚರಣೆಗೆ ಇಳಿಸುವ ಆರ್‍ಟರ್ ನೀಡಲಾಗುತ್ತಿದೆ. ಅದನ್ನು ಪಾಲಿಸುವುದು ಅಷ್ಟೇ ಅವರ ಕೆಲಸ. ಅಲ್ಲಿ ಅವರ ಭಾವನೆಗಳಿಗೆ ಯಾವುದೂ ಕೆಲಸವಿರುವುದಿಲ್ಲ. ಗುರುತಿಸಿದ, ಅಥವಾ ಸೂಚಿಸಿದ ವ್ಯಕ್ತಿಯನ್ನು ಕೊಲ್ಲುವುದು ಅಷ್ಟೇ ಅವರ ಕೆಲಸ. ಇಂತಹ ಕಾರ್ಯಾಚರಣೆಯಲ್ಲಿ ಅಮಾಯಕ ಜನರೂ ಸಹ ಅವರ ಗುಂಡಿಗೆ ಬಲಿಯಾಗಿಬಿಡುವ ಆಪಾಯ ಇರುತ್ತದೆ. ಇದನ್ನು ಹೊರ ಹಾಕಲು ಆಗುವುದಿಲ್ಲ. ಯಾಕೆಂದರೆ ದೇಶದ ಭದ್ರತೆಯ ದೃಷ್ಠಿಯಿಂದ ಇದು ಗೌಪ್ಯ!
  ದೇಶಭಕ್ತಿ ಮುಂತಾದ ಮಾತುಗಳೆಲ್ಲಾ ಇಲ್ಲಿ ಕೆಲಸ ಮಾಡುವುದಿಲ್ಲ. ಪ್ರಭುತ್ವ ಅಷ್ಟೇ ಅಲ್ಲಿ ಕೆಲಸ ಮಾಡುವುದು. ಇಂತಹ ಮಾತುಗಳೆಲ್ಲಾ ಸಿನಿಮಾಗಳಲ್ಲಿ ಮಾತ್ರ ಇರುತ್ತವೆ. ಇದು ವಾಸ್ತವ.
  ತಾಜ್ ಹೊಟೇಲ್‌ನ ಎರಡೂ ಘಟನೆಗಳು ನನಗೆ ಇಲ್ಲಿ ಮುಖ್ಯ ಎನಿಸುತ್ತವೆ ಅದನ್ನು ಇಲ್ಲಿ ದಾಖಲು ಮಾಡುವೆ.
  ಮೊದಲನೇಯದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸಾವಿಗಿಡಾದ ಪೊಲೀಸ್ ಅಧಿಕಾರಿಗಳಿಗೆ ಸಂತಾಪ ಸೂಚಿಸಲು ಕರ್ಕೆರ್ ಅವರ ಮನೆಗೆ ಹೋಗಿ ಕೋಟಿ ರೂ. ಸರ್ಕಾರದಿಂದ ಘೋಷಣೆ ಮಾಡಿದಾಗ ಅದನ್ನು ಕರ್ಕೆರ್ ಅವರ ಪತ್ನಿ ಸ್ವೀಕರಿಸದೆ ನಿರಾಕರಿಸಿದ್ದು. ತೂಗಾಡಿಯಾ ಹಾಗೂ ನಮ್ಮ ಕರ್ನಾಟಕದ ಮುತಾಲಿಕ್ ’ಸನ್ಯಾಸಿಯೊಬ್ಬಳನ್ನು ಬಂಧಿಸಿದ್ದರಿಂದ ಅದರ ಪಾಪ ತಟ್ಟಿಯೇ ಈ ಕರ್ಕೆರ್ ಸತ್ತಿದ್ದು’ ಎಂದು ಹೇಳಿದ್ದು.
  ಸತ್ತ ಉಗ್ರಗಾಮಿಗಳ ಶವಸಂಸ್ಕಾರ ಮಾಡಲು ಮುಂಬೈ ಪೊಲೀಸರು ಅಲ್ಲಿಯ ಮುಸ್ಲಿಂರಿಗೆ ಶವ ಒಪ್ಪಿಸುವ ಕೆಲಸ ನಡೆಸಿದರು. ಆಗ ಅಲ್ಲಿಯ ಮುಸ್ಲಿಂರು ಹೇಳಿದರು ’ ಇವರು ಮುಸ್ಲಿಂರಲ್ಲ, ಭಯೋತ್ಪಾದಕರು. ಇಸ್ಲಾಂ ಎಂದೂ ಭಯೋತ್ಪಾದನೆಯನ್ನು ಹೇಳುವುದಿಲ್ಲ. ಅದ್ದರಿಂದ ಇವರ ಶವಸಂಸ್ಕಾರ ನಾವು ಮಾಡುವುದಿಲ್ಲ.
  ಇಲ್ಲಿ ಮಾತು ಮತ್ತು ಕ್ರಿಯೆ ಎರಡೂ ಒಟ್ಟಿಗೆ ಇರುವುದನ್ನು ನಾವು ಗಮನಿಸಬೇಕು.
  -ಪರುಶುರಾಮ ಕಲಾಲ್

 2. ಸಿದ್ದು, ಈ ಹೊರಾಟ, ಅಸಮಾನತೆಯ ವಿರುದ್ಧದ ದ್ವನಿ, ಕೊಮುಗಲಭೆ, ಎಲ್ಲಾ ಒಂದು ಘೋರ ನಾಟಕದಂತೆ ಗೋಚರಿಸುತ್ತದೆ. ಪರಶುರಾಮ್ ಹೇಳಿದರಲ್ಲೂ ಅರ್ಥವಿದೆ. ಹೀಗೆ ನೋಡಿದರೆ ಕೆಲವರು ಮತಕ್ಕಾಗಿ, ಕೆಲವರು ಹಣಕ್ಕಾಗಿ ಮಾಡಬಾರದ್ದನ್ನೆಲ್ಲಾ ಮಾಡುತ್ತಾರೆ. ಕೊನೆಗೆ ನ್ಯಾಯಕ್ಕೆ ಬೆಲೆಯೆಯಿಲ್ಲ. ನಾವು ಬದುಕುತ್ತಿರುವ ಕಾಲಮಾನದ ಸಂಕಟಗಳು ಒಂದಲ್ಲ, ಎರಡಲ್ಲ ಹತ್ತು ಹಲವು. ಪ್ರಜಾಪ್ರಭುತ್ವ ನಿಜವಾಗಿಯಾದರೂ ಎಲ್ಲಿದೆ? ಬಂಡವಾಳ ಶಾಹಿತನ, ಸರ್ವಾಧಿಕಾರ, ಧರ್ಮಾದಿಕಾರಿಗಳು/ಕಪಟ ಸ್ವಾಮಿಗಳದ್ದೆ ರಾಜ್ಯ ಬಾರ. ಸಾಮನ್ಯನಿಗೆ ಎಲ್ಲಿದೆ ಜಾಗ?
  ಎಲ್ಲಾ ಕಡೆ ತುಳಿಯಿಸಿ ಕೋಳ್ಳುತ್ತೇನವೆ. ನಮ್ಮಂತವರು ಕೋವಿ ಹಿಡಿಯುವ ಬಗ್ಗೆ ಮಾತನಾಡುತ್ತೇವೆ. ಅದೊಂದು ಆ ಹೊತ್ತಿನ ಹಳಹಳಿಕೆಯಾಗಿ ಗೋಚರಿಸುತ್ತೆ. ನಮ್ಮ ಆಕ್ರೋಶಗಳು ಏನನ್ನಾದರೂ ಬದಲಾಯಿಸಲು ಸಾಧ್ಯವೆ? ಕೈಗೆ ಕೈ ಸೇರಿದರೆ ತಾನೆ? ಎಲ್ಲಿ ಸೇರುವುದು ಕೈಗಳು. ನಾನು ನಿಮ್ಮ ಬಗ್ಗೆ ಕಮೆಂಟ್ ಮಾಡುತ್ತಿಲ್ಲಾ. ನಿಮ್ಮ ಕಾಳಜಿ ಅರ್ಥವಾಗುತ್ತಿದ್ದೆ. ನಾನು ನನ್ನ ಜೀವನದ ಕಹಿಗಳನ್ನು ಇಲ್ಲಿ ಹೇಳಿದ್ದೇನೆ. ಮಂಗಳೂರಿನಲ್ಲಿ ಉಗ್ರರು ನೆಲೆಗೊಳ್ಳುತ್ತಿದ್ದಾರೆಯೆಂಬುದು ಜಿಲ್ಲಾಡಳಿತಕ್ಕಾಗಲೀ, ರಾಜಕೀಯ ಪಕ್ಷಗಳಿಗೆ ಗೋತ್ತಿರಲಿಲ್ಲವೆ….? ಗೋತ್ತಿತ್ತು. ಇದು ದಶಕದಿಂದ ಆಗಿ ಬಂದ ಬೆಳವಣಿಗೆ. ಆಗ ಕಿರುಚಿದವರು ನಂಬದವರು. ಈಗ ನಂಬುತ್ತಾರೆ. ಅದನ್ನೆ ಓಟ್ ಬ್ಯಾಂಕಿಗೆ ಪರಿವರ್ತಿಸುತ್ತಾರೆ. ಈಗ ಹೇಳಿ ಏನು ಮಾಡೋಣ? ಉಗ್ರಗಾಮಿಗಳು ಮಂಗಳೂರಿನಲ್ಲಿ ಇನ್ನೂ ಇದ್ದಾರೆ…. ನಿಜ ಹೇಳುವೆ ರಾಜಕಾರಣಿಗಳಂತಹ ಉಗ್ರಗಾಮಿಗಳು ಬೇರೆ ಯಾರೂ ಇಲ್ಲಾ. ಇವರಿಗೆ ದೇಶಕ್ಕಾಗಿ ಜೀವ ಕೋಡುವವನ ಜೀವದ ಬೆಲೆ ಗೊತ್ತಿದೆಯೇ? ಅಧಿಕಪ್ರಸಂಗವಾದರೆ ಕ್ಷಮೆ ಇರಲಿ.
  .. ಪ್ರಸಾದ್.ಜಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: