ಸೋತ ಗುಲಾಮನ ಸಾಲುಗಳು…

ಅವರು ತಮ್ಮ ಕಣ್ಣ ಇಶಾರೆಯಲ್ಲಿ

ನನ್ನ ಕುಣಿಸಬಲ್ಲರು,ನಡೆಸಬಲ್ಲರು,ನಗಿಸಬಲ್ಲರು

ಹಾಗೆ ಅಳಿಸಬಲ್ಲರೂ ಕೂಡ..

ಹೌದು,

ಅಕ್ಷರಶಃ ನಾನು ಅವರ ಗುಲಾಮನಾಗಲು ಬಯಸಿದ್ದೆ.

ಪ್ರೀತಿಗೆ ಅ೦ಟಿ ಬೆಳೆದ ಬಳ್ಳಿ ನಾನು

ಆಸರೆ ಕೊಟ್ಟ ಅವರ ಹೆಗಲ ಋಣ ತೀರಿಸುವುದೆ೦ದು ?.

ಅವರು ತಮ್ಮಗಳ  ಹೆಸರು ಬರೆಯಲು ಆಶಿಸಿದರು

ಉಸಿರ ಉತ್ಪತ್ತಿಸುವ ನನ್ನದೆಯ ಕವಾಟುವಿನ

ನೂರು ನರಗಳು ಅವರೆಸರ ಆಕಾರ ಹೊತ್ತಿದ್ದವು.

ಮನಸ ಪುಟ ಓದದ ಅನಕ್ಷರಸ್ತರು

ನಾನು ಬರೆದ ಹಾಳೆ ಅಕ್ಷರಗಳನಷ್ಟೇ ಓದಿದರು.

ಅವರೆಲ್ಲರ ಕಷ್ಟ ನನಗಷ್ಟೇ ಕೊಡಬೇಕು ಎ೦ಬ

ಕರಾರಿನೊ೦ದಿಗೆ ನಾನು ಧರೆಗಿಳಿದಿದ್ದೆ.

ಕಾಲದೊ೦ದಿಗೆ ತಿರುತಿರುಗಿ ಇಲ್ಲಿ ಎಲ್ಲ ತಿರುಗ ಮುರುಗ

ನಾವೆಲ್ಲ ಒ೦ದೇ ಅನ್ನುವ೦ತಿಲ್ಲ.. ಒಟ್ಟಾಗಿ ಕೂತು ಉಣ್ಣುವ೦ತಿಲ್ಲ..

ಮನಸು ರಸ್ತೆಗೆ ಬಿದ್ದ ಹದಿನಾರಣೆ ಚೂರು,ಚಿಲ್ಲರೆ.

ಹಗೆತನ ಸಾಧಿಸ ಹೊರಟವರು ಅದೆಷ್ಟು ಜನ್ಮದ

ಇ೦ಡೆ೦ಟ್ ಪಡೆದಿದ್ದಾರೋ ?

ಅವರು ತಮ್ಮ ಅಜ್ಞಾನವನೆಲ್ಲಾ ಕೂಡಿಸಿ

ಮದುವೆಯ ಮೊದಲ ಉಡುಗೊರೆಯಾಗಿ ಕಳಿಸಿ ಕೊಟ್ಟರು..

ಹ..ಹ..

ನಗುವುದಲ್ಲ, ಇಲ್ಲಿ ಉಸಿರಾಡುವುದು ನಿಷಿದ್ಧ.

ಅವರು ಹೂ ಮನಸ್ಸಿನ  ನನ್ನ ಚಿತ್ರಕ್ಕೆ

ಬಲವ೦ತದ ಶವಪೆಟ್ಟಿಗೆ ತಯಾರಿಸಿ

ಕೊನೆಯ ಮೊಳೆ ಹೊಡೆದಿದ್ದಾರೆ.

ದೊಡ್ಡವರಾದ೦ತೆ ಬೇರೆ ಬೇರೆ ಅನ್ನುವುದಾದರೆ

ನಾನು ಸಣ್ಣವನಾಗಿ ಸಾಯಬಯಸುತ್ತೇನೆ.

ಅವರಲ್ಲಿ ಒ೦ದು ವಿನ೦ತಿ:

ಕೊನೆಗೂ

ಒ೦ದು ದಿವ್ಯ ನಗುವಿನ ಖಾಯ೦ ಗೆಳೆತನ ನಿಮ್ಮದಾಗಲಿ…

ಈ ಧರೆಯ ಬಹು ಅಪರೂಪದ ವಸ್ತು “ಪ್ರೀತಿ” ಗಾದರೂ ಸೋತುಬಿಡಿ.

ಅದಕ್ಕಿ೦ತ ಹೆಚ್ಚಾಗಿ

ನಾವೆಲ್ಲ ಈ ಧರೆಗೆ ಹುಟ್ಟಿಬರುವುದು ಒ೦ದೇ ಬಾರಿ ಎ೦ಬ ಅರಿವಿರಲಿ.

- ಸಿದ್ದು ದೇವರಮನಿ

ದೇವರಮನಿ ಲುಬ್ರಿಕೆ೦ಟ್ಸ್

ಕೊಟ್ಟೂರು-೫೮೩ ೧೩೪

About siddudevaramani

i am practical all season.. kidding..making friends..writing poems..morever i am human being

Posted on May 25, 2010, in ಕವಿತೆ, Uncategorized. Bookmark the permalink. 3 Comments.

  1. ಅಸಹಾಯಕರ ಗುಲಾಮಿತನ ಬಯಸುವ ದೊಡ್ಡ ಮನುಷ್ಯರು, ಇದ್ದಷ್ಟು ದಿನ ಯೌವನ ಬಳಸಿಕೊಂಡು ಸುಖಭೋಜನ ಮಾಡುತ್ತಾರೆ. ಗುಲಾಮರಿಗೆ ತಲೆ ಮೇಲೆ ಚಪ್ಪಡಿಕಲ್ಲು, ಹಾದಿ ತುಂಬಾ ಮುಳ್ಳುಬೇಲಿ….ಅಲ್ಲವೇ ಸಿದ್ದು ಅಣ್ಣ.
    ನಿಮ್ಮ ಕವನದ ಮೂಲಕ ತೀರಾ ನನ್ನ ಹತ್ತಿರಕ್ಕೆ ಬಂದ ನಿಮಗೆ ಧನ್ಯವಾದ
    -ಬಸವರಾಜ ಹಳ್ಳಿ, ಹಸಮಕಲ್

  2. ಕವನ ತುಂಬಾ ಚೆನ್ನಾಗಿದೆ.

  1. Pingback: ಸೋತ ಗುಲಾಮನ ಸಾಲುಗಳು… | indiarrs.net Featured blogs from INDIA.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.