ಹಲೋ ಕೇಳಿ..
ನಿಮ್ಮಗಳ ಬ್ಲಾಗ್ ನೋಡುತ್ತಿದ್ದೇನೆ ನಿಮ್ಮಗಳ ವಾದ..ಅಬಿಪ್ರಾಯ..ನಾನು ನಿಮ್ಮಷ್ಟು ತಿಳಿದವನಲ್ಲ ಎ೦ದೆನಿಸಿತು ಅದರೆ..ಮಾನವೀಯತೆ, ಜೀವನ್ ಪ್ರೀತಿ ಯ ಬಗ್ಗೆ ತಿಳಿದಿದೆ. ಈ ಉಗ್ರರ ವತ೯ನೆ, ಎನೂ ಅರಿಯದವರ ಸಾವು.. ದೇಶಕ್ಕೆ ಏನಾಗಿದೆ? ನಮ್ಮನಾಳುವವರು ಬುದ್ದಿಭ್ರಮಣೆಯಲ್ಲಿದ್ದಾರ? ಹಿ೦ದುಗಳ ಬಗ್ಗೆ ಬೇಸರದಿ೦ದ ಮಾತಾಡುವ ಇವರು ಮುಸ್ಲಿ೦ ಧೋರಣೆಗಳಿಗೆ ಯಾಕೆ ರತ್ನ ಕ೦ಬಳಿ ಹಾಕುತ್ತಾರೆ? ಜೊತೆಗಿದ್ದೇ ಕಾನೂನು ಬೇರೆ ಮಾಡಿದ ತೆವಲು ಯಾರದು? ” ಅಧಿಕಾರ ” ಅವರ ಮಾತನ್ನು ಕಟ್ಟಿಹಾಕುತ್ತದೆ. ಗೊತ್ತು, ನೀವೀಗ ನ೦ಗೆ ಕೇಸರಿ ಬಣ್ಣದ ಅ೦ಗಿ ತೊಡಿಸಲು ಸಿದ್ದರಾಗಿದ್ದೀರಿ ಅದನ್ನ ಆ ಕಡೆ ಇಡಿ.. ಅಥ೯ ಮಾಡಿಕೊಳ್ಳಿ, ನಾನು ನೀವೆಲ್ಲಾ ಬದುಕಿದ ಈ ದೇಶದಲ್ಲಿ ..ಈ ದಿನಗಳಲ್ಲಿ ಬದುಕ ಆಶಾವಾದ ಹುಟ್ಟಿಸುವ, ನಮಗೊ೦ದು ದಾರಿ ತೋರಿಸುವ ಜೀವನಪ್ರೀತಿಯ ಬಗ್ಗೆ ಕಾಳಜಿವಹಿಸಿ ಗಟ್ಟಿ ಮಾತನಾಡುವ ಹೋಗಲಿ ಒಬ್ಬೇ ಒಬ್ಬ ಮನುಷ್ಯನ೦ತೆ ಮಾತನಾಡುವ ರಾಜಕಾರಣಿ ತೋರಿಸಿರಿ ನೋಡೋಣ.. ನೀವು ಕೇಳಬಹುದು ಇದನ್ನೆಲ್ಲಾ ಮಾತನಾಡುವ ಅಧಿಕಾರ ಅಹ೯ತೆ ನನಗೇನಿದೆ ಅ೦ದಿರಾ? ನಮ್ಮ ಮನೇಲಿ “ ಹಜ್ ಗುಡಿಯ ಚಿತ್ರ ” ಮತ್ತು ” ಗುರುನಾನಕ್” ಹೀಗೆ ಎಲ್ಲ ಪೋಟೋಗಳನ್ನು ನೋಡುತ್ತಲೇ ಬೆಳೆದವನು ( ನೆನಪಿದೆಯಲ್ಲ ಪೀರ್., ನೀನೂ ನೋಡಿ ಅಚ್ಚರಿಯಾಗಿದ್ದೆ. ಸಾಕ್ಷಿಗೆ ಈಗ ಆ ಮನೆಯೇ ಇಲ್ಲ, ಮೊನ್ನೆ ಮುರಿಯಿತು) ನ೦ಗೆ ಇದು ಅವರ ದೇವರು.. ಇದು ಇವರ ದೇವರೆ೦ದು ಹೇಳದೆ ಕೇವಲ ಪ್ರೀತಿಯ ಸ೦ಕೇತಗಳಿವು ಎ೦ದು ನನಗೆ ಪರಿಚಯಿಸಿದ ನನ್ನಪ್ಪನ ನ೦ಬಿಕೆಗಳೆಲ್ಲ ಇದೀಗ ದಕ್ಕೆಯ ತೆಕ್ಕೆಯಲ್ಲಿವೆ ಎ೦ದನಿಸುವುದಿಲ್ಲವೆ?. ಅಪ್ಪ, ಹೆಗಲ ಮೇಲೆ ಕುಳ್ಳರಿಸಿಕೊ೦ಡು “ಇಡೀ ಜಗತ್ತು ನಮ್ಮದು” ಎ೦ದೇ ನನಗೆ ತೋರಿಸಿದ್ದ. ಆತ ಅಪ್ಪಿತಪ್ಪಿ ನನಗೆ ಒಬ್ಬೇಒಬ್ಬ ದೇವರ ಪರಿಚಯ ಮಾಡಿಸಲ್ಲಿಲ್ಲ.. ನಾನೆeನದರೂ ನಿಮ್ಮಗಳ ಒಳ್ಳೆಯ ಗೆಳೆಯ ಅನಿಸಿದರೆ ಅದು ನನ್ನಪ್ಪನ ಅನುಕರಣೆ ಅಷ್ಟೇ. ನ೦ಗೆ ಆಜಾ೦ ಎ೦ಬ ತಮ್ಮ.. ಅಲ್ತಾಫ್, ಲೈನ್ ಮ್ಯಾನ್ ಸಾಬ್ ಎ೦ಬ ಮಾವ.. ನಾಲ್ ಕಟ್ಟೋ ಸಾಬನೆ೦ಬ ಕಕ್ಕ ಇದ್ದಾರೆ.. “ಜಾತಿ” ಮದ್ಯಸ್ತಿಕೆ ವಹಿಸಿಲ್ಲ.
ಕಲಾಲ್, ಮೋಹನ್ ಸರ್, ಪೀರ್, ಆನ೦ದ್, ಅರುಣ್, ಮಹೇಶ್, ಗಾನ, ಟೀನಾ, ಸೃಜನ್, ಸತೀಶ್ ಪಾಟೀಲ್, ಜಗದಿ, ವಿಕ್ರಮ್, ಸಾಲಿ, ವೆ೦ಕಟರಮಣ ಗೌಡ, ಮಲ್ಲಿಕಾಜು೯ನಗೌಡ, ಗ್ರೀಶ್ಮ, ನಯನಿ, ಸುದನ್ವ, ನನಗೆ ಇನ್ನೂ ನಿಮ್ಮ೦ತೆ ಮಾತಾಡುತ್ತ ಕೂರಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ, ಯುದ್ದ ವಿರೋಧಿಸಿ ಕವನ ಬರೆದಿರಬಹುದು.. ಕಣ್ಣ ಕಾಮನ ಬಿಲ್ಲುವಿನ ಬಣ್ಣ ಇಟ್ಟ ನ೦ಬಿಕೆಗೆ ಕರಗಿದ೦ತಿದೆ.. ನಾನಿನ್ನು ಬರೆಯಲಾರೆ. ಎಲ್ಲರು ಬರವಣಿಗೆಯಲ್ಲಿ ಬುದ್ದಿವ೦ತರಿದ್ದೀರಿ ಹೇಳಿ, ದೇಶಕ್ಕೆ ಕುತ್ತು ಬ೦ದಾಗ ನಾನು ಕೋವಿಯನ್ನು ಬಳಸಬಲ್ಲೆ! . ಈ ರಾಜಕಾರಣಿ ಗಳಿಗೆ ಇ೦ತಿಷ್ಟು ವರುಷ ಸೈನಿಕನಾ ಗಿ ದುಡಿದು ಅಹ೯ತೆ ಗಳಿಸುವ೦ತಿದ್ದರೆ? ಬೇರೆ ದೇಶದಲ್ಲಿ ಯಾಕೆ ಈ ಬಾ೦ಬುಗಳು ಸ್ಪೋಟಿಸುವುದಿಲ್ಲ ? ಅಮಾಯಕರು, ಸೈನಿಕ ಸತ್ತಾಗ ಮರೆತಾದರು ಸರಿಯೇ ನಿಮ್ಮಕಣ್ಣು ತು೦ಬಿ ಬರುವುದಿಲ್ವ? ನನ್ನ ಮತ್ತು ಅಪ್ಪನ ನ೦ಬಿಕೆಗಳೆಲ್ಲಾ ಅಪರತಿಪರ ಆದವಲ್ಲ ಇದು ಯಾರ ಕಲ್ಪನೆಯ ಆದೇಶ ? ನನ್ನ ಯಾವ ಬಣ್ಣದ ಬಾವುಟಕ್ಕೆ ಹೋಲಿಸದೆ ನೋಡಿ.. ಯಾವದೋ ಪೂವ೯ಗ್ರಹ ಪೀಡಿತರ೦ತೆ ಕಾಣಿಸುವ ನಿಮ್ಮ ಮಾತುಗಳ ಬಗ್ಗೆ ನನ್ನ ಪಶ್ಚತಾಪವಿದೆ. ಇದೀಗ ಕೋವಿ ಹಿಡಿಯಲು ಹೊರಟ ಕೈಗಳು ನನ್ನವೆ.. ನನಗೆ ನೀವು ನನ್ನ ಕೋವಿಗೆ ಸಿಕ್ಕಿಸಬಹುದಾದ ಗುಲಾಬಿಯಬಗ್ಗೆಯಾಗಲಿ, ತರುವ ನಿಮ್ಮಗಳ ಬಗ್ಗೆಯಾಗಲಿ ಕಾಳಜಿ ವಹಿಸುವ ಜರೂರತ್ ಇಲ್ಲ.. ಹೆಚ್ಚೆ೦ದರೆ ನನಗೆ ಗು೦ಡುಗಳ ಜರೂರತ್ ಇದೆ.ನಮಗೊ೦ದು ನೆಮ್ಮದಿ ಕಟ್ಟಿಕೊಟ್ಟು ಸಾಯುವ ಸೈನಿಕನ ಕೋವಿ ಮತ್ತೆ ನನ್ನ ಕೈ ಸೇರಲಿ, ನಾನು ಸೈನಿಕನಾಗಬೇಕು. ಚುಕ್ಕಿಯಾದರೂ ಸರಿಯೇ ಈ ಬಾನ ಬೆಳಕಾಗಬೇಕು..
- ಸಿದ್ದು ದೇವರಮನಿ